ರಾಣಿಬೆನ್ನೂರು: ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಆಗಬೇಕೆಂದು ನಾನು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಒತ್ತಾಯಿಸಿದ್ದೇನೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಕಾಶ ಕೋಳಿವಾಡ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬದಲಾವಣೆ ಮಾಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ. ಇದರಲ್ಲಿ ಶಾಸಕರ ಒತ್ತಾಯವಾಗಲಿ, ಪ್ರಭಾವವಾಗಲಿ ಇರುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸು, ಡಿ.ಕೆ. ಶಿವಕುಮಾರ ಚಾತುರ್ಯದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರೆಯುತ್ತಿದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಕ್ಷವನ್ನು ಸಂಘಟನೆಯತ್ತ ಮುನ್ನಡೆಸಿದ್ದಾರೆ ಎಂದರು.ಗ್ರಾಪಂ ಅಧ್ಯಕ್ಷ ನೀಲಮ್ಮ ಕಮದೋಡ, ಉಪಾಧ್ಯಕ್ಷ ನಾಗರತ್ನ ನಿಂಬಣ್ಣನವರ, ಮುಖಂಡರುಗಳಾದ ಬುಡನಸಾಬ ದೊಡ್ಮನಿ, ಸಣ್ಣತಮ್ಮಪ್ಪ ಬಾರ್ಕಿ, ಲೋಕೋಪಯೋಗಿ ಇಲಾಖೆ ಸಕಾನಿ ಎಂಜಿನಿಯರ್ ಜಗದೀಶ ಕೋಳಿವಾಡ, ತಿರುಪತಿ ಅಜ್ಜನವರ ಈ ಸಂದರ್ಭದಲ್ಲಿ ಇದ್ದರು.