ನಾನು ಪ್ರಚೋದನೆ ಹೇಳಿಕೆ ನೀಡಿಲ್ಲ: ಮುತಾಲಿಕ್
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಪ್ರಚೋಧನಾಕಾರಿ ಹೇಳಿಕೆ ನೀಡಿರುವುದಾಗಿ ಶಾಖಾದ್ರಿ ಮೊಮ್ಮಗ ಫಕ್ರುದ್ದೀನ್ ಶಾಖಾದ್ರಿ ಆರೋಪಿಸಿದ್ದಾರೆ. ನಾಗೇನಹಳ್ಳಿಯ ಸರ್ವೆ ನಂ.57 ರಲ್ಲಿರುವ ಬಾಬಾಬುಡನ್ ದರ್ಗಾ ವನ್ನು ಬಿಟ್ಟು ದತ್ತಪೀಠ ಜಾಗವನ್ನು ಅತಿಕ್ರಮಣ ಮಾಡಿ ಪ್ರಚೋದನೆ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿ ಹಿಂದೂ ಮುಸ್ಲಿಂಮರ ನಡುವೆ ಸೌಹಾರ್ದತೆ ಇರಬೇಕು ಎಂದರೆ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿ ನಾಗೇನಹಳ್ಳಿ ದರ್ಗಾದಲ್ಲಿ ಆಚರಣೆ ಮಾಡಿಕೊಳ್ಳಲಿ ಎಂದು ಒತ್ತಾಯಿಸಿದರು.
ಇಸ್ಲಾಂನಲ್ಲಿ ಮೂರ್ತಿ ಪೂಜೆ, ಆರತಿ, ಅಭಿಷೇಕ ಹರಾಂ(ನಿಷಿದ್ದ) ಆಗಿದೆ. ಅದನ್ನು ಉಲ್ಲಂಘನೆ ಮಾಡಿದ್ದಾರೆ. ಗುಹೆಯೊಳಗೆ ದತ್ತ ಪಾದುಕೆ ಇದೆ, ಕಮಂಡಲ, ದೀಪಸ್ಥಂಭ ಇದೆ. ಆದಾಗ್ಯೂ ಅವರು ಒಳಗೆ ಹೋಗಿ ಹೇಗೆ ಪೂಜೆ ಮಾಡುತ್ತಾರಿ ಎಂದು ಪ್ರಶ್ನಿಸಿದ ಅವರು ನಿಷಿದ್ಧ ಇದ್ದರೂ ಕಬಳಿಕೆ ಮಾಡುವುದೇ ಅವರ ಕಸುಬು ಎಂದು ಆರೋಪಿಸಿದರು.ಮುಜರಾಯಿ ಇಲಾಖೆ ಕಲಂಅನ್ನು ಶಾಖಾದ್ರಿ ಉಲ್ಲೇಖಿಸಿದ್ದಾರೆ. ಮುಜರಾಯಿ ಇಲಾಖೆ ಹಿಂದೂಗಳಿಗೆ ಸೇರಿದ್ದು. ಅಲ್ಲಿ ನಿಮ ಗೇನು ಕೆಲಸ ನಾವೇನು ವಕ್ಫ್ ಬೋರ್ಡ್‌ಗೆ ಮೂಗು ತೂರಿಸಿದ್ದೇವೆಯೇ ಎಂದ ಅವರು, ಪ್ರಚೋದನಾಕಾರಿ ಹೇಳಿಕೆ ನೀಡಿದ್ದೇನೆ ಎಂಬುದೇ ಮೂರ್ಖತನದ್ದು ಅದನ್ನು ಖಂಡಿಸುತ್ತೇನೆ ಎಂದರು.
ನಗರದ ಎಂಇಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಅಯ್ಯಪ್ಪ ಮಾಲಾಧಾರಿಯಾಗಿ ತರಗತಿಗೆ ಹೋಗಿದ್ದಕ್ಕೆ ಕಾಲೇಜಿನ ಮುಖ್ಯಸ್ಥರು ಅದನ್ನು ವಿರೋಧಿಸಿದ್ದಾರೆ. ಬುರ್ಖಾ ಹಾಕಿಕೊಂಡು ಬಂದವರಿಗೂ ಹೀಗೆಯೇ ಅವರು ವಿರೋಧಿಸಿ ಹೊರ ಹಾಕಲಿ ನೋಡೋಣ. ಕೂಡಲೇ ವಿದ್ಯಾರ್ಥಿಗೆ ಅಪಮಾನ ಮಾಡಿರುವ ಕಾಲೇಜಿನ ಮುಖ್ಯಸ್ಥರನ್ನು ಅಮಾನತು ಮಾಡುವಂತೆ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ಸುಂದರೇಶ್ ನರಗಲ್ ಇದ್ದರು. 2 ಕೆಸಿಕೆಎಂ 2ಮದ್ಯ ಮಾರಾಟ ನಿಷೇಧಚಿಕ್ಕಮಗಳೂರು: ದತ್ತ ಜಯಂತಿ ಉತ್ಸವದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಡಿ.3 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಹಾಗೂ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಡಿ.4 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲಾ ನಮೂನೆ ಮದ್ಯದಂಗಡಿಗಳನ್ನು (ಕೆ.ಎಸ್.ಬಿ.ಸಿ.ಎಲ್. ಹೊರತುಪಡಿಸಿ) ಮುಚ್ಚು ವಂತೆಯೂ ಹಾಗೂ ಮದ್ಯ, ಬಿಯರ್ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಇಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆಚಿಕ್ಕಮಗಳೂರು: ದತ್ತ ಜಯಂತಿ ಉತ್ಸವದ ಎರಡನೇ ದಿನವಾದ ಬುಧವಾರ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ. ದತ್ತಮಾಲೆ ಧರಿಸಿರುವ ದತ್ತ ಭಕ್ತರು ಬೆಳಿಗ್ಗೆ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಶೋಭಾಯಾತ್ರೆ ಹೊರಡಲಿದೆ.ಕೆಇಬಿ ವೃತ್ತದಿಂದ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯ ಮೂಲಕ ಆಜಾದ್ ಪಾರ್ಕ್ ವೃತ್ತ ತಲುಪಲಿದೆ. ಇಲ್ಲಿ ಸಂಜೆ ಬಹಿರಂಗ ಸಭೆ ನಡೆಯಲಿದೆ. ಶೋಭಾಯಾತ್ರೆ ಹಾದು ಹೋಗುವ ಮಾರ್ಗವನ್ನು ಅಲಂಕಾರ ಗೊಳಿಸಲಾಗಿದೆ. ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.----