ಅಭಿವೃದ್ಧಿ ವಿಚಾರದಲ್ಲಿ ಬೇರೆಯವರ ಸಲಹೆ ಅಗತ್ಯ ನನಗಿಲ್ಲ

KannadaprabhaNewsNetwork |  
Published : Apr 19, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ಅವರಿಗೆ ಮಾಹಿತಿ ಕೊರತೆಯಿಂದಾಗಿ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅವರಿಗೆ ತುಮಕೂರಿನ ಅಭಿವೃದ್ಧಿ ಬಗ್ಗೆ ಮಾಹಿತಿ ಕೊರತೆ ಬಹಳಷ್ಟು ಇದ್ದಂತೆ ಕಾಣುತ್ತಿದೆ ಅದಕ್ಕಾಗಿ ಅವರು ಹೀಗೆ ಹೇಳಿರಬಹುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ಅವರಿಗೆ ಮಾಹಿತಿ ಕೊರತೆಯಿಂದಾಗಿ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅವರಿಗೆ ತುಮಕೂರಿನ ಅಭಿವೃದ್ಧಿ ಬಗ್ಗೆ ಮಾಹಿತಿ ಕೊರತೆ ಬಹಳಷ್ಟು ಇದ್ದಂತೆ ಕಾಣುತ್ತಿದೆ ಅದಕ್ಕಾಗಿ ಅವರು ಹೀಗೆ ಹೇಳಿರಬಹುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದರು.

ಶನಿವಾರ ತುಮಕೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಸುದ್ದಿಗಾರೊಂದಿಗೆ ಮಾತನಾಡಿ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ನನ್ನ ವಿರುದ್ಧ ಟೀಕೆ ಮಾಡಿದ್ದಾರೆ. ಅವರ ಹೇಳಿಕೆಗೆ ನನ್ನ ವಿರೋಧವಿಲ್ಲ, ನನ್ನ ಸಮರ್ಥತೆ , ಅಸಮರ್ಥತೆ ಕುರಿತು ಜನ ತೀರ್ಮಾನ ಮಾಡುತ್ತಾರೆ. ಅದನ್ನು ನಾನು ಟೀಕೆ ಮಾಡಲ್ಲ. ಅವರೆ ತುಮಕೂರಿಗೆ ಬಂದು ಹತ್ತಾರು ವಿಚಾರದ ಬಗ್ಗೆ ಹೇಳಿದ್ದಾರೆ. ತುಮಕೂರು ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ್ದು, ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ಹಿಂದೆ ಬಿದ್ದಿಲ್ಲ, ಇದು ನನ್ನ ತವರೂರು. ಅವರಿಗೆ ಮಾಹಿತಿ ಗೊತ್ತಿಲ್ಲ. ತುಮಕೂರಿನಲ್ಲಿ ನಮ್ಮ ಸರ್ಕಾರದಿಂದ ಏನೇನೂ ಜನಪರವಾದ ಅಭಿವೃದ್ಧಿ ಕೆಲಸ ಮಾಡಿದ್ದೀವಿ ಆ ಎಲ್ಲ ಕಾರ್ಯಗಳನ್ನು ಮುಂಬರುವ ದಿನಗಳಲ್ಲಿ ಒಂದು ಕೈ ಪಿಡಿಯನ್ನೇ ತುಮಕೂರಿನ ಜನರ ಮುಂದೆ ಬಿಡುಗಡೆ ಮಾಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಇವರಿಂದ ಹೇಳಿಸಿಕೊಂಡು ಮಾಡುವ ಅಗತ್ಯ ನನಗಿಲ್ಲ. ರಾಜಕಾರಣ ಇವರಿಂದ ನಾನು ಕಲಿಯಬೇಕಿಲ್ಲ. ನನ್ನ ಸಮರ್ಥತೆಯ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ರವಿಕೃಷ್ಣರೆಡ್ಡಿ ಹೇಳಿಕೆ ವಿರುದ್ಧ ಪರಮೇಶ್ವರ್ ಹರಿಹಾಯ್ದರು.

ತುಮಕೂರಿನಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಹೋಗುವುದನ್ನು ತಪ್ಪಿಸಲು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮಾಡಬೇಕು ಎಂಬ ಉದ್ದೇಶಕ್ಕೆ ೧೩೦ ಕೋಟಿ ರು.ನಲ್ಲಿ ಹಳೆ ಆಸ್ಪತ್ರೆ ಕಟ್ಟಡ ಕೆಡವಿ ಹೊಸದನ್ನು ಕಟ್ಟಲು ಮುಂದಾಗಿದ್ದೇವೆ. ಈ ಹಣವನ್ನು ಕೂಡ ಗಣಿಬಾಧಿತ ಪ್ರದೇಶದ ನಿಧಿಯನ್ನು ಬಳಸಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಆದರೆ ಆ ಪುಣ್ಯಾತ್ಮ ಈ ಹಣವನ್ನೇ ಬಳಸಿಕೊಂಡಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಚಿಕ್ಕನಾಯಕನಹಳ್ಳಿ ಗುಬ್ಬಿ, ತಿಪಟೂರು ಈ ಮೂರು ತಾಲೂಕುಗಳು ಗಣಿ ತಾಲೂಕುಗಳು ಆ ಗಣಿ ತಾಲೂಕಿನ ಹಣ ಖರ್ಚು ಮಾಡಿಲ್ಲ ಎನ್ನುತ್ತಾರೆ. ಅದರ ಅಧ್ಯಕ್ಷ ನ್ಯಾ. ಸುದರ್ಶನ ರೆಡ್ಡಿ ಅವರ ಅನುಮೋದನೆ ಮೇರೆಗೆ ನೂರಾರು ಕೋಟಿ ಕೆಲಸಗಳು ನಡೆಯುತ್ತಿವೆ. ತುಮಕೂರು ಅಭಿವೃದ್ಧಿ ಕಂಡಿಲ್ಲ ಎಂಬ ಅವರ ಹೇಳಿಕೆಯಲ್ಲಿ ಯಾವುದೇ ಉರುಳಿಲ್ಲ, ಇವರ ಹೇಳಿಕೆ ಸಜತ್ಯಕ್ಕೆ ದೂರವಾದ ಸಂಗತಿ, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗೊತ್ತಿಲ್ಲದಿದ್ದರೆ ತಿಳಿದುಕೊಂಡು ಮಾತನಾಡಬೇಕು ಬಾಯಿಗೆ ಬಂದಂತೆ ಮಾತನಾಡಿದರೆ ನಾನು ಸಹಿಸಲಾರೆ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು.

ನಾನು ವೈಯಕ್ತಿಕವಾಗಿ ಭೇಟಿಯಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪಡಿಸುವ ಹಿತದೃಷ್ಟಿಯಿಂದ ೨ ಸಾವಿರ ಕೋಟಿ ಮೂರು ತಾಲೂಕಿಗೆ ಖರ್ಚು ಮಾಡಿದರೇ ಹೇಗೆ. ಅದು ತಾರತಮ್ಯ ಆಗುತ್ತದೆ ಆರೋಗ್ಯ, ಶಿಕ್ಷಣಕ್ಕೆ ಅನುಮತಿ ಪಡೆದು ಕೆಲಸ ಪ್ರಾರಂಭಿಸಿದ್ದೇವೆ. ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹೊಸ ರಿಂಗ್ ರಸ್ತೆಯಲ್ಲಿ 90 ಎಕರೆ ಭೂಮಿ ಗುರುತಿಸಿದ್ದೇವೆ. ಈ ಎಲ್ಲ ವಿಚಾರಗಳನ್ನು ನಾವು ಯಾರಿಗೂ ಹೇಳಿಲ್ಲ, ಅದು ಒಂದು ಭಾಗವಿನ ಕಾರಣ ಅಧಿಕಾರಿಗಳ ಬಗ್ಗೆ ಟೀಕೆ ಮಾಡಲು ಹೋಗೋದಿಲ್ಲ, ಅದು ಅವರ ಹಕ್ಕು, ಇಡೀ ಜನ ಸಮುದಾಯಕ್ಕೆ ಜಿಲ್ಲಾಧಿಕಾರಿ,ಎಸ್ಪಿ ಹಾಗೂ ಇನ್ನೂಳಿದ ಅಧಿಕಾರಿಗಳು ಏನೂ ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ ಅಪಾದನೆ ಮಾಡೋದೆ ಕೆಲಸವಲ್ಲ ಎಲ್ಲವನ್ನು ಸರ್ಕಾರ ಗಮನಿಸುತ್ತದೆ ಎಂದರು.

ಜನಸಂಪರ್ಕ ಸಭೆಯಲ್ಲಿ ನಡೆದ ಘಟನೆ ಯಾರು ಉದ್ದೇಶ ಪೂರ್ವಕವಾಗಿ ಮಾಡಿಲ್ಲ, ನಾನು ಬೆಳಿಗ್ಗೆ 11ರಿಂದ ಸಂಜೆ 3.30 ರವರೆಗೆ ಪ್ರತಿಯೊಬ್ಬರ ಅಹವಾಲು ತೆಗೆದುಕೊಂಡಿದ್ದೇನೆ. ಸಾರ್ವಜನಿಕರು ತಮ್ಮ ಅಹಾವಲುಗಳನ್ನು ಬಂದು ಕೊಡಬೇಕು ಯಾರು ಬೇಡ ಅಂದಿದ್ದರೂ ಎಂದ ಪರಮೇಶ್ವರ್ ಅವರು ಬೇರೆ ಬೇರೆ ರೀತಿ ವರ್ತಿಸಿದ್ದರು. ಅದಕ್ಕಾಗಿ ಈ ರೀತಿಯ ಘಟನೆ ನಡೆದಿದೆ. ಯಾರು ಸಹ ಅವರನ್ನು ಉದ್ದೇಶ ಪೂಪ್ರಕವಾಗಿ ಟಾರ್ಗೆಟ್ ಮಾಡುವ ಅಗತ್ಯವಿಲ್ಲ. ಅವರು ಅರ್ಥಮಾಡಿಕೊಂಡು ಜಿಲ್ಲೆಯ ಬಗ್ಗೆ ಮಾಹಿತಿ ಪಡೆದು ಕೊಂಡು ಮಾತನಾಡಬೇಕಿತ್ತು ಎಂದು ಪರಮೇಶ್ವರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಅವಕಾಶ ಕಸಿದುಕೊಂಡ ಕಾಂಗ್ರೆಸ್
ರಸ್ತೆ ಅಪಘಾತಗಳ ಸ್ಥಳ ಗುರುತಿಸಲು ಸೂಚನೆ