ಕುರುಬ ಸಮಾಜದ ನನಗೆ ಮಂತ್ರಿ ಸ್ಥಾನ ನೀಡಬೇಕು: ಶಿವಣ್ಣನವರ

KannadaprabhaNewsNetwork |  
Published : Apr 13, 2026, 01:45 AM IST
ಬಸವರಾಜ ಶಿವಣ್ಣನವರ | Kannada Prabha

ಸಾರಾಂಶ

ರಾಜ್ಯ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದ ಕುರುಬ ಸಮಾಜದವರಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಸಂಪುಟ ವಿಸ್ತರಣೆಯಾದರೆ ಕುರುಬ ಸಮಾಜದಿಂದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಮಂತ್ರಿ ಸ್ಥಾನ ನೀಡಬೇಕು.

ಬಜೆಟ್ ಮುಗಿದಿದೆ, ಉಪ ಚುನಾವಣೆಯೂ ಮುಗಿದಿದೆ, ಮತ್ತೇಕೆ ತಡ?

ನಮ್ಮ ಸರ್ಕಾರ ಬಂದಾಗಲೆಲ್ಲ ಹಾವೇರಿ ನಿರ್ಲಕ್ಷ್ಯಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದ ಕುರುಬ ಸಮಾಜದವರಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಸಂಪುಟ ವಿಸ್ತರಣೆಯಾದರೆ ಕುರುಬ ಸಮಾಜದಿಂದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಂದು ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡುತ್ತೇವೆಂದು ಸಿಎಂ, ಡಿಸಿಎಂ ಹೇಳಿದ್ದರು. ಇದಕ್ಕೆ ಹೈಕಮಾಂಡ್ ಕೂಡ ನಿರ್ದೇಶನ ಮಾಡಿತ್ತು. ಇದೀಗ ಎರಡೂವರೆ ವರ್ಷ ಮುಗಿದಿದೆ. ಬಜೆಟ್ ಮುಗಿದಿದೆ, ಉಪ ಚುನಾವಣೆಯೂ ಮುಗಿದಿದೆ. ಮತ್ತೇಕೆ ತಡ? ಮೂರಕ್ಕಿಂತ ಹೆಚ್ಚು ಬಾರಿ ಶಾಸಕರಾದವರು ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್‌ಗೆ ಒತ್ತಾಯ ಮಾಡಲು ನಿರ್ಧರಿಸಿದ್ದೇವೆ ಎಂದರು.

ಸಚಿವಾಕಾಂಕ್ಷಿ ಶಾಸಕರು ದಿಲ್ಲಿಗೆ ತೆರಳುತ್ತಿದ್ದಾರೆ, ನನಗೂ ದಿಲ್ಲಿಗೆ ಬರುವಂತೆ ಕರೆ ಮಾಡಿದ್ದರು. ಆದರೆ ನನಗೆ ಆಗಲೇ ಬೇರೆ ಕಾರ್ಯಕ್ರಮ ನಿಗದಿಯಾಗಿದೆ. ನೀವು ಏನೇ ನಿರ್ಣಯ ತೆಗೆದುಕೊಂಡರೂ ಆ ನಿರ್ಣಯಕ್ಕೆ ಬೆಂಬಲ ಇದೆ ಎಂದು ಶಾಸಕರಿಗೆ ತಿಳಿಸಿದ್ದೇನೆ. ಅಂತೂ ಮಿಕ್ಕಿ ಬರಲೇಬೇಕು ಎಂದರೆ ರಾತ್ರಿಯೇ ದಿಲ್ಲಿಗೆ ಹೋಗುತ್ತೇನೆ. ಹೈಕಮಾಂಡ್‌ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ, ಸುರ್ಜೇವಾಲಾ ಅವರು ಟೈಂ ಕೊಟ್ಟಿದ್ದಾರೆ, ಅವರ ಜತೆಗೆ ಚರ್ಚೆ ಮಾಡುತ್ತೇವೆ ಎಂದರು.

ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸಿಎಂ ಹಾಗೂ ಡಿಸಿಎಂ ಅವರು ಹೈಕಮಾಂಡ್ ಏನು ಹೇಳುತ್ತೋ ಅದನ್ನು ಕೇಳೋಕೆ ತಯಾರಿದ್ದಾರೆ. ಆದರೆ ನಾವು ಮಾತ್ರ ನಮಗೀಗ ಸಚಿವ ಸಂಪುಟ ಪುನಾರಚನೆ ಮಾಡಿ ಎಂದು ಒತ್ತಡ ಹಾಕುತ್ತಿದ್ದೇವೆ. ಹೈಕಮಾಂಡ್ ಏನು ನಿರ್ಣಯ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ದರಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗೆಲ್ಲಾ ನಮ್ಮ ಜಿಲ್ಲೆಯಿಂದ ಇಬ್ಬಿಬ್ಬರನ್ನು ಮಂತ್ರಿ ಮಾಡಿದ್ದಾರೆ. ಆದರೆ ನಮ್ಮ ಸರ್ಕಾರ ಬಂದಾಗಲೆಲ್ಲಾ ಹಾವೇರಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಜಿಲ್ಲೆಯಲ್ಲಿ 6 ಜನ ಕಾಂಗ್ರೆಸ್ ಶಾಸಕರು ಇದ್ದೇವೆ. ಜಿಲ್ಲೆಯವರನ್ನು ಮಂತ್ರಿ ಮಾಡಿದರೆ ಹೆಚ್ಚಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಪಕ್ಕದ ದಾವಣಗೆರೆ, ಗದಗ ಅಭಿವೃದ್ಧಿಯಾಗಿದೆ. ನಮ್ಮ ಜಿಲ್ಲೆ ಅಭಿವೃದ್ಧಿಗೆ ಒಳ್ಳೆಯ ನಾಯಕರನ್ನು ಬೆಳೆಸಬೇಕಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರದಕ್ಷಿಣೆ ಕಿರುಕುಳ ಆರೋಪ, ಮಹಿಳೆ ಆತ್ಮಹತ್ಯೆ
ಮಹಿಳಾ ಮೀಸಲಾತಿ ಮಸೂದೆ ಕುರಿತು ಇಂದಿನಿಂದ ಜಾಗೃತಿ