ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಾನು ತಪ್ಪು ಮಾಡಿದ್ದರೆ ತನಿಖೆ ಎದುರಿಸುವೆ:
ಪ್ರಾಸಿಕ್ಯೂಷನ್ ವಿಚಾರವನ್ನೇ ಕಾಂಗ್ರೆಸ್ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದ ಅವರು, ಸಿಎಂ ಸಿದ್ದು ವಕೀಲರು, ಡಿಸಿಎಂ ಡಿಕೆಶಿ ರಾಜಕೀಯ ಧುರೀಣರಿದ್ದಾರೆ. ಇವರಿಗೆಲ್ಲಾ 40, 50 ವರ್ಷದ ಅನುಭವ ಇದೆ. ವಿಷಯಾಂತರ ಮಾಡೋದು ಸರಿಯಲ್ಲ. ನಮ್ಮ ಬಿಜೆಪಿಯ 4 ಜನರ ಹೆಸರು ಹೇಳುತ್ತಿದ್ದಾರೆ. ಹಣ್ಣು ಇದ್ದ ಗಿಡಕ್ಕೆ ಕಲ್ಲು ಹೊಡೆಯೋದು ಅಂತರಲ್ಲಾ ಹಾಗೆ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಹೇಗಾದ್ರೂ ಮಾಡಿ ಪ್ರಾಸಿಕ್ಯೂಷನ್ ಮಾಡಿ, ನಿಮ್ಮಲ್ಲೇನು ಶುದ್ಧ ಅಂತ ಕೇಳುತ್ತಿದ್ದಾರೆ. ನೀವೆಲ್ಲಾ ಬುದ್ಧಿವಂತರಿದ್ದೀರಿ ನಿರಾಣಿಯವರೇ ಇಂತಹ ತಪ್ಪು ಮಾಡಿದ್ದೀರಿ ಅಂತ ತೋರಿಸಲಿ ಪ್ರಾಸಿಕ್ಯೂಷನ್ ಇದೆ ಅಂತ ಹೇಳಿ ಅದನ್ನ ಎದುರಿಸಲಿಕ್ಕೆ ನಾನು ಧೈರ್ಯವಾಗಿದ್ದೇನೆ ಎಂದರು.ಆ ತನಿಖೆ ಎದುರಿಸಲು ಸಹಕಾರ ಮಾಡುತ್ತೇನೆ. ಆದರೆ ಮೊದಲು ನಿಮ್ಮ ಮೇಲಿರೋದನ್ನು ನೀವು ನೋಡಿಕೊಳ್ಳಿ. ಯಾವುದೇ ತಪ್ಪಿಲ್ಲ ಅಂತ ಆಧಾರ ಸಮೇತ ನೀಡಿದ್ದೇನೆ. ನೀವು ಕೊಡಿ ನೋಡೋಣ ಎಂದು ಸವಾಲು ಹಾಕಿದ ಅವರು, ತನಿಖೆಯಾಗಿ ನಿರ್ದೋಷಿ ಅಂದಾಗ ಮತ್ತೆ ನೀವು ಸಿಎಂ ಆಗಿ ಮುಂದುವರೆಯಿರಿ. ನಿಮ್ಮಲ್ಲಿ ಆಪಾದನೆ ಇದೆ. ತನಿಖೆ ಎದುರಿಸಿ ಸಿಎಂ ಅವರೇ ಎಂದು ತಿಳಿಸಿದರು.
ನಮ್ಮ ಬಗ್ಗೆ ಮಾತಾಡುವ ಯೋಗ್ಯತೆ ನಿಮಗಿಲ್ಲ:
ಬಿಎಲ್‌ಡಿ ತೊರೆದು ನಿಮ್ಮದೇ ಸಂಸ್ಥೆ ಕಟ್ಟಿ:
---------
ಹೌದು, ನಾನು ದನಾ ಕಾಯೋನೆ
------
ನಿನಗೆ ತಾಕತ್ತು ಇದ್ರೆ ಬಂಥನಾಳ ಸ್ವಾಮೀಜಿ ಕಟ್ಟಿದ ಸಂಸ್ಥೆಯನ್ನು ಸಾಮರ್ಥ್ಯ (ಕ್ಯಾಪೆಬೆಲ್) ಇರುವಂತವರಿಗೆ ಸಂಸ್ಥೆ ಕೊಟ್ಟು, ಹೊರಗಡೆ ಬಂದು ಒಂದು ಫ್ಯಾಕ್ಟರಿನೋ ಸಂಸ್ಥೆನೋ ಕಟ್ಟಿ ತೋರಿಸು. ಆವಾಗ ನಿನ್ನ ಯೋಗ್ಯತೆ ಗೊತ್ತಾಗುತ್ತದೆ ಎಂದು ಸಚಿವ ಎಂಬಿಪಾ ವಿರುದ್ಧ ಏಕವಚನಲದಲ್ಲಿಯೇ ವಾಗ್ದಾಳಿ ನಡೆಸಿದರು.
ನೀನು ಹಿಂದುಳಿದವರ ಬಗ್ಗೆ ಪಂಚಮಸಾಲಿಗಳ ಬಗ್ಗೆ ನಿನ್ನ ಗೌಡಕಿ ದರ್ಪ ಅಧಿಕಾರದ ದರ್ಪವನ್ನು ನಮ್ಮ ಮುಂದೆ ಇನ್ನುಮುಂದೆ ತೋರಿಸಬೇಡ. ನಾನು ಒಂಬತ್ತು ವರ್ಷ ಮಂತ್ರಿ ಆಗಿದ್ದೀನಿ. ನಿನಗಿಂತ 15 ವರ್ಷ ಮೊದಲೇ ಮಂತ್ರಿ ಆಗಿದ್ದೀನಿ. ನನ್ನ ಜೀವ ಜಾಲಾಡಿಸ್ತೀನಿ ಅಂತಿಯಲ್ಲ, ಜೀವ ಜಾಲಾಡಿಸೋಕೆ ಸಾಕಷ್ಟಿವೆ. ನೀನು ತಗಿ, ಒಂದಾದ್ರೂ ನನ್ನ ತಪ್ಪು ತೋರಿಸು. ಅದಕ್ಕೆ ನಾನು ತಲೆ ಬಾಗ್ತಿನಿ. ಗಾಳಿಯಲ್ಲಿ ಗುಂಡು ಹಾರಿಸಲು ಹೋಗಬೇಡ. ಒಂದು ನೆನಪು ಇಟ್ಟಿಕೋ ಮಿಸ್ಟರ್ ಎಂ.ಬಿ.ಪಾಟೀಲ್, ನೀನು ಗ್ಲಾಸ್ ಹೌಸ್‌ನಲ್ಲಿ ಇದ್ದಿಯ. ನೀನು ಗ್ಲಾಸ್ ಹೌಸ್‌ನಲ್ಲಿ ಇದ್ದುಕೊಂಡು ಮತ್ತೊಬ್ಬರ ಮನಿಗೆ ಕಲ್ಲು ಹೊಡೆದ್ರೆ ಬಹಳ ಹುಷಾರಾಗಿ ಲೆಕ್ಕಾ ಹಾಕಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.ಕಾಲ ಬರಲಿ ನಿನ್ನ ಭ್ರಷ್ಟಾಚಾರ ಒಂದೊಂದಾಗಿ ಇಡ್ತಿವಿ:
ನೀರಾವರಿ ಸಚಿವನಾಗಿದ್ದಾಗ ಏನೇನ್ ಮಾಡಿದಿ, ಏನೇನು ಭ್ರಷ್ಟಾಚಾರ ಇದೆ. ಒಂದೂವರೆ ವರ್ಷದಿಂದ ಕೆಐಎಡಿಬಿನಲ್ಲಿ ಯಾರ್ ಯಾರ ಹೆಸರಿನಲ್ಲಿ ಪ್ಲಾಟ್ ಡಮ್ಮಿಯಾಗಿ ತಗೊಂಡು ನಿನ್ನ ಹೆಸರಿನಲ್ಲಿದೆ ಅನ್ನೋದು ನೆನಪು ಮಾಡಿಕೋ. ನಿಂದೆ ಓನರ್‌ಶಿಪ್ ಬೇರೆಯವರ ಹೆಸರಿನಲ್ಲಿ ತೆಗೆದುಕೊಂಡಿದಿಯಾ. ಕಾಲ ಬರಲಿ ಎಲ್ಲವನ್ನೂ ಒಂದೊಂದಾಗಿ ಮುಂದೆ ಇಡುತ್ತೇನೆ. ನಿನ್ನ ಪ್ಲೇಟ್‌ನಲ್ಲಿ ಹೆಗ್ಗಣ ಬಿದ್ದಿದೆ. ಮತ್ತೊಬ್ಬರ ಪ್ಲೇಟ್‌ನಲ್ಲಿ ನೊಣ ತೆಗೆಯೋ ಕೆಲಸವನ್ನು ನೀನು ಮತ್ತು ಕಾಂಗ್ರೆಸ್‌ನವರು ಮಾಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.ಭ್ರಷ್ಟಾಚಾರ ಮಾಡಿಲ್ಲಂತ ತಾಯಿ ಮೇಲೆ ಪ್ರಮಾಣ ಮಾಡು:
ನೀನು ಏ ನಾರಾಯಣಸ್ವಾಮಿ, ಲೆಹರ್ ಸಿಂಗ್ ಜಿ ಅಂತ ಮಾತಾಡೋ ಸ್ಟೈಲ್, ನಿನ್ನ ಯೋಗ್ಯತೆ ಏನಿದೆ ಅಂತ ನೀನು ನೋಡ್ಕೋಪಾ. ಪುಣ್ಯಾತ್ಮರು ಕಟ್ಟಿದ ಸಂಸ್ಥೆಯಲ್ಲಿ ನೀನು ಅಧ್ಯಕ್ಷ ಆಗಿ ಮಜಾ ಮಾಡ್ತಿದ್ದೀಯಾ ಹೊರತು ನಿನ್ನ ಪರಿಶ್ರಮ ಏನಿದೆ? ನಿನ್ನ ಕೊಡುಗೆ ಕರ್ನಾಟಕಕ್ಕೆ ಏನಿದೆ? ಅದನ್ನ ಮೊದಲು ಹೇಳು. ಆಮೇಲೆ ನಮ್ಮ ಬಗ್ಗೆ ಆಗಲಿ. ಪ್ರಸಂಗ ಬರಲಿ ಎಲ್ಲ ಬಿಚ್ಚಿಡ್ತಿನಿ. ನಾನು ನಾನೇ ನೀರು ಕಾಸಿ ಜಳಕಾ ಮಾಡಿ ಬಂದಿರುವವನು. ನೀನು ಎರಕೊಂಡವರ ಬಡ್ಯಾಗ (ಕೆಳಗೆ) ಜಳಕಾ ಮಾಡುವ ವ್ಯಕ್ತಿ. ನೀರಾವರಿ ಸಚಿವನಾದಾಗ ಮತ್ತು ಈಗ ಕೈಗಾರಿಕಾ ಸಚಿವನಾದಾಗ ಒಂದು ಭ್ರಷ್ಟಾಚಾರ ಮಾಡಿಲ್ಲ ಅಂತ ನಿನ್ನ ತಾಯಿ ತಂದೆ ಮೇಲೆ ಪ್ರಮಾಣ ಮಾಡಿ ಹೇಳು ಎಂದು ಸವಾಲು ಹಾಕಿದರು. ಸರ್ಕಾರದ ಆಸ್ತಿಯನ್ನು ಬೇರೆಯವರ ಹೆಸರಿನಿಂದ ನಾನು ತೆಗೆದುಕೊಂಡಿಲ್ಲ ಅಂತ ಪ್ರಮಾಣ ಮಾಡು. ನೀನು ಹೇಳಿದನ್ನ ನಾನು ಕೇಳೋಕೆ ತಯಾರಿದ್ದೇನೆ. ಇದು ನನ್ನ ಸವಾಲು ಇದು ಎಂದರು.