ಮತದಾರ ಶಿಕ್ಷಕರಿಗೆ ವಿಶೇಷ ರಜೆ ನೀಡಲು ಪತ್ರ ಬರೆದಿರುವೆ

KannadaprabhaNewsNetwork |  
Published : Sep 29, 2026, 01:15 AM IST
28ಕೆಆರ್ ಎಂಎನ್ 1.ಜೆಪಿಜಿಕೆಆರ್ ಎಸ್ ಪಕ್ಷದ ಆಕಾಂಕ್ಷಿತ ಅಭ್ಯರ್ಥಿ ಡಾ.ಜಿ.ಆರ್ ಹೆಬ್ಬೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಅಕ್ಟೋಬರ್ 23ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲು ಶಿಕ್ಷಕರಿಗೆ ವಿಶೇಷ ರಜೆ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಕೆಆರ್‌ಎಸ್ ಪಕ್ಷದ ಆಕಾಂಕ್ಷಿತ ಅಭ್ಯರ್ಥಿ ಡಾ.ಜಿ.ಆರ್ ಹೆಬ್ಬೂರು ತಿಳಿಸಿದರು

ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಅಕ್ಟೋಬರ್ 23ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲು ಶಿಕ್ಷಕರಿಗೆ ವಿಶೇಷ ರಜೆ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಕೆಆರ್‌ಎಸ್ ಪಕ್ಷದ ಆಕಾಂಕ್ಷಿತ ಅಭ್ಯರ್ಥಿ ಡಾ.ಜಿ.ಆರ್ ಹೆಬ್ಬೂರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು ಮತ್ತು ಪದವೀಧರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದ್ದರೂ, ಮತದಾನದ ದಿನದಂದು ನೋಂದಾಯಿತ ಮತದಾರರಿಗೆ ಸೂಕ್ತ ರಜೆ ನೀಡದೇ ಇರುವುದರಿಂದ ಅವರು ತಮ್ಮ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಮತ ಚಲಾಯಿಸಲು ಇಚ್ಛಿಸುವವರು ನಿರ್ಬಂಧಿತ ರಜೆ (ಆರ್ ಎಚ್) ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ, ಈ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮ ಮತದಾನ ನಡೆಯುತ್ತಿಲ್ಲ ಎಂದರು.

ಕಳೆದ ಬಾರಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೇವಲ ಶೇ.50ರಷ್ಟು ಮಾತ್ರ ಮತದಾನ ದಾಖಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ನಿರಂತರವಾಗಿ ಇಳಿಮುಖ ವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮುಕ್ತ ಮತದಾನದ ಅವಕಾಶ ದೊರೆತು, ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾದಾಗ ಮಾತ್ರ ಚುನಾವಣೆಗೆ ನೈಜ ಮಹತ್ವ ಬರುತ್ತದೆ, ಆದರೆ ಪ್ರಸ್ತುತ ಅಂತಹ ಪೂರಕ ವಾತಾವರಣ ಕ್ಷೀಣಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಕ್ಷಕರ ಕ್ಷೇತ್ರ ವಿಶೇಷವಾಗಿದ್ದು, ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಮಾಡಲು ಮೂರು ವರ್ಷ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂಬ ಮಾನ ದಂಡವಿದೆ. ಆದರೆ ಆ ಕ್ಷೇತ್ರವನ್ನು ಪ್ರತಿನಿಧಿಸಲು ಶಿಕ್ಷಕರಲ್ಲವರು ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶವಿರುವುದು ದುರ್ದೈವ. ಆಗಾಗಿ ದೇಶಾದ್ಯಂತ ಇರುವ ಈ ವ್ಯವಸ್ಥೆಯ ಬಗ್ಗೆ ಚುನಾವಣಾಧಿಕಾರಿಗಳ ಗಮನ ಸೆಳೆದಿದ್ದು, ಶಿಕ್ಷಕರಾದವರು ಮಾತ್ರ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಲು ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಮಾಡಿರುವುದಾಗಿ ಹೇಳಿದರು.

ಚುನಾವಣೆ ವೇಳೆ ಶಿಕ್ಷಕ ಮತದಾರರು ಶಿಕ್ಷಕ ಅಭ್ಯರ್ಥಿಯನ್ನೇ ಆಯ್ಕೆ ಮಾಡಿಕೊಳ್ಳಿ, ಆಮಿಷ, ಉಡುಗೊರೆಗಳನ್ನು ತಿರಸ್ಕರಿಸಿ, ಮತ ಪತ್ರದಲ್ಲಿ ಶಿಕ್ಷಕರಲ್ಲದವರಿಗೆ ಮತ ಹಾಕಲು ನಿಮಗೆ ಇಷ್ಟವಿಲ್ಲ ದಿದ್ದರೆ ನೋಟಾಗೆ ಮತ ಚಲಾಯಿಸಿ ಎಂದು ಶಿಕ್ಷಕ ಮತದಾರರಲ್ಲಿ ಹೆಬ್ಬೂರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಎಚ್.ಮಲ್ಲೇಗೌಡ, ರಮೇಶ್ ಗೌಡ, ಪದಾಧಿಕಾರಿ ರಾಮಕೃಷ್ಣ ಇತರರಿದ್ದರು.

28ಕೆಆರ್ ಎಂಎನ್ 1.ಜೆಪಿಜಿ

ಕೆಆರ್‌ಎಸ್ ಪಕ್ಷದ ಆಕಾಂಕ್ಷಿತ ಅಭ್ಯರ್ಥಿ ಡಾ.ಜಿ.ಆರ್ ಹೆಬ್ಬೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಶ್ರೀಪರ್ಣಾ ಸಾಹಾಗೆ ಡಾ. ಅಪ್ಪಾಜಿ ನಾವೀನ್ಯತಾ ಪ್ರಶಸ್ತಿ
ಜ್ಞಾನೇಶ ಕುಮಾರ್ ರಾಜಿನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ