ಮುಂಬರುವ 2027ನೇ ಕ್ಯಾಲೆಂಡರ್‌ ವರ್ಷದಲ್ಲಿನ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಭಾನುವಾರಗಳನ್ನು ಹೊರತುಪಡಿಸಿ 18 ಸಾರ್ವತ್ರಿಕ ರಜಾಗಳನ್ನು ಹೊಂದಿದೆ.

ಬೆಂಗಳೂರು : ಮುಂಬರುವ 2027ನೇ ಕ್ಯಾಲೆಂಡರ್‌ ವರ್ಷದಲ್ಲಿನ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ.

2027ನೇ ಕ್ಯಾಲೆಂಡರ್‌ ವರ್ಷ

2027ನೇ ಕ್ಯಾಲೆಂಡರ್‌ ವರ್ಷವು ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ 18 ಸಾರ್ವತ್ರಿಕ ರಜಾಗಳನ್ನು ಹೊಂದಿದೆ.

ಸಾರ್ವತ್ರಿಕ ರಜಾ ದಿನ

ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ 19 ಪರಿಮಿತ ರಜಾ ದಿನಗಳು ಇರಲಿವೆ. ಯಾವ್ಯಾವ ದಿನ ಸಾರ್ವತ್ರಿಕ ರಜಾ ದಿನ ಹಾಗೂ ಪರಿಮಿತ ರಜಾ ಇರಲಿದೆ ಎಂಬ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.