ದೇವರಹಿಪ್ಪರಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ರಾಜುಗೌಡ ಪಾಟೀಲ

KannadaprabhaNewsNetwork |  
Published : Sep 30, 2026, 03:00 AM IST
ವಿವಿಧ ಕಾಮುಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರಿಗೆ ಸ್ಳೀಯರು ಸನ್ಮಾನಿಸಿದರು. | Kannada Prabha

ಸಾರಾಂಶ

ದೇವರಹಿಪ್ಪರಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು. ಇನ್ನಷ್ಟು ಮೂಲಸೌಕರ್ಯ ಮತ್ತು ಜನಪರ ಯೋಜನೆಗಳನ್ನು ಮಂಜೂರು ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಶ್ರಮಿಸುವೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು. ಇನ್ನಿಷ್ಟು ಮೂಲಸೌಕರ್ಯ ಮತ್ತು ಜನಪರ ಯೋಜನೆಗಳನ್ನು ಮಂಜೂರು ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಶ್ರಮಿಸುವೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಜನರ ಅಗತ್ಯತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಕಾಮಗಾರಿಗಳು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಮನಹರಿಸಬೇಕು. ರೈತರ ಕನಸು ನನಸಾಗುವ ಕಾಲ ಬಂದಿದ್ದು, ಬಹಳ ದಿನಗಳ ಬೇಡಿಕೆಯಾದ ರಸ್ತೆ ಅಭಿವೃದ್ಧಿಯಿಂದ ಸಂಚಾರಕ್ಕೆ ಅನುಕೂಲವಾಗಲಿದೆ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹಾಗೂ ಗ್ರಾಮೀಣ ಪ್ರದೇಶದ ಸಂಪರ್ಕ ಸುಧಾರಿಸಲು ಈ ರಸ್ತೆ ಪ್ರಮುಖವಾಗಲಿದೆ. ಮಲ್ಲಯ್ಯನ ದೇವಸ್ಥಾನ ಹತ್ತಿರ ಹಳ್ಳಕ್ಕೆ ತಡೆಗೋಡೆ ಹಾಗೂ ರಸ್ತೆ ಬ್ರಿಡ್ಜ್‌ ನಿರ್ಮಾಣದಿಂದ ಸಾರ್ವಜನಿಕರ ಹಾಗೂ ಭಕ್ತರ ಸಂಚಾರಕ್ಕೆ ಅನುಕೂಲವಾಗುವುದರ ಜತೆಗೆ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ದೇವಸ್ಥಾನ ಹಾಗೂ ಮಸೀದಿ ಸಮುದಾಯ ಭವನಗಳ ನಿರ್ಮಾಣದಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಪಪಂ ಅಧ್ಯಕ್ಷರ ಪ್ರತಿನಿಧಿ ಬಸವರಾಜ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಿಬಿನಾಳ, ಸದಸ್ಯರಾದ ಕಾಸುಗೌಡ ಜಲಕತ್ತಿ, ಪ್ರಕಾಶ ಮಲ್ಹಾರಿ, ಮುಖಂಡರಾದ ಚನ್ನವೀರಪ್ಪ ಕುದರಿ, ಎ.ಡಿ. ಮುಲ್ಲಾ, ಕಾಶಿನಾಥ ವಡವಡಗಿ, ಶಂಕರಗೌಡ ಪಾಟೀಲ ಯರನಾಳ, ವೀರೇಶ ಕುದರಿ, ರಾಮು ದೇಸಾಯಿ, ಡಾ. ವಿನಯ ಅಳ್ಳಗಿ, ಅಜೀಜ್‌ ಯಲಗಾರ, ವಿನೋದಗೌಡ ಪಾಟೀಲ, ಪ್ರಭಯ್ಯ ಇಂಡಿಮಠ, ಈರಣ್ಣ ಒಂಟೆತ್ತಿನ, ಕಾಸು ದೇವನಗಾಂವ, ಪವನ್ ದಂಡೋತಿ, ಕೆಬಿಜೆಎನ್ಎಲ್ ಎಇಇ ವಿಶ್ವನಾಥ ಚವ್ಹಾಣ, ಜೆಇ ಪುನೀತ್ ಕಟ್ಟಿ, ಪ್ರಫುಲಕುಮಾರ, ಗುತ್ತಿಗೆದಾರ ರಾಮು ಕೌಲಗಿ, ಡಾ.ಆರ್.ಆರ್.ನಾಯಿಕ ಸೇರಿ ಸಮುದಾಯದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಯಾವ್ಯಾವ ಕಾಮಗಾರಿಗಳು: ಬಹುದಿನಗಳ ಬೇಡಿಕೆಯಾಗಿದ್ದ ದೇವರಹಿಪ್ಪರಗಿ-ಹರನಾಳ ರಸ್ತೆ ಅಭಿವೃದ್ಧಿಗೆ ₹1.5 ಕೋಟಿ ವೆಚ್ಚ, ₹45 ಲಕ್ಷ ವೆಚ್ಚದಲ್ಲಿ ಐತಿಹಾಸಿಕ

ಮಲ್ಲಯ್ಯನ ದೇವಸ್ಥಾನ ಸಮೀಪ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ , ₹10 ಲಕ್ಷ ವೆಚ್ಚದಲ್ಲಿ ಪ್ರಳಯ ಕಟ್ಟಿ ಈರಣ್ಣ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣ ಹಾಗೂ ₹10 ಲಕ್ಷ ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ ಬಾರದಂತೆ ತಡೆಯುವುದೇ ಆಯುರ್ವೇದದ ಶಕ್ತಿ
ಮೋದಿಯವರ 25 ವರ್ಷಗಳ ಜನಸೇವಾ ಪಯಣ ಪ್ರೇರಣಾದಾಯಕ