ಗ್ರಾಮೀಣ ಭಾಗದಲ್ಲಿ ಹಿಂದುಳಿದವರನ್ನು ಗುರುತಿಸಿ ಶಿಕ್ಷಣ ನೀಡಿ:ಆಲ್ದಾಳ

KannadaprabhaNewsNetwork | Published : Feb 2, 2025 1:00 AM

ಸಾರಾಂಶ

Identify and educate the backward in rural areas: Aldala

-ವಾಲ್ಮೀಕಿ ನಾಯಕ ಸಂಘದ ತಾಲೂಕು ಮತ್ತು ನಗರ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ

-ಗ್ರಾಮೀಣ ಭಾಗದಲ್ಲಿ ಹಿಂದುಳಿದವರನ್ನು ಗುರುತಿಸಿ ಶಿಕ್ಷಣ ನೀಡಬೇಕು

----

ಕನ್ನಡಪ್ರಭ ವಾರ್ತೆ ಯಾದಗಿರಿ

ತಾಲೂಕಿನ ವಾಲ್ಮೀಕಿ ನಾಯಕ ಸಂಘದ ತಾಲೂಕು ಮತ್ತು ನಗರ ಘಟಕಗಳ ಪದಾಧಿಕಾರಿಗಳ ಆಯ್ಕೆಯನ್ನು ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ ಹೇಳಿದರು

ವಾಲ್ಮೀಕಿ ಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಏಳಿಗೆಗಾಗಿ ತಾವು ಶ್ರಮ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ನಮ್ಮ ಸಮಾಜದ ಭಾಂದವರು ಶಿಕ್ಷಣದಿಂದ ಹಿಂದುಳಿದಿದ್ದಾರೆ ಅಂತವರನ್ನು ಗುರುತಿಸಿ ಶಿಕ್ಷಣ ನೀಡಬೇಕು ಎಂದು ಅವರ ಪಾಲಕರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.

ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪುರ ಮಾತನಾಡಿ, ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಮೇಲೆ ತಾವುಗಳು ಜಾಗೃತಿಯಿಂದ ಕೆಲಸ ಮಾಡಬೇಕು, ನಿಮ್ಮ ಮೇಲೆ ಸಮಾಜದ ಬಾಂಧವರು ವಿಶ್ವಾಸವಿಟ್ಟು, ತಮಗೆ ಜವಬ್ದಾರಿ ನೀಡಿದ್ದೇವೆ. ಅದಕ್ಕೆ ಯಾವುದೇ ರೀತಿಯ ಚ್ಯುತಿಯಾಗದಂತೆ ನೋಡಿಕೊಂಡು ಸಮಾಜವನ್ನು ಬಲಿಷ್ಠವಾಗಿ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಪದಾಧಿಕಾರಿಗಳು ಆಯ್ಕೆ:

ಯಾದಗಿರಿ ವಾಲ್ಮೀಕಿ ನಾಯಕ ನಗರ ಘಟಕ ಅಧ್ಯಕ್ಷರನ್ನಾಗಿ ಸಾಬಣ್ಣ ಬಗ್ಲಿ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ಹುಲಿನಾಯಕ, ಯಾದಗಿರಿ ವಾಲ್ಮೀಕಿ ನಾಯಕ ತಾಲೂಕು ಸಮಾಜದ ಗೌರವ ಅಧ್ಯಕ್ಷರನ್ನಾಗಿ ಬಸವರಾಜ ಗೊಂದೇನೂರು, ಅಧ್ಯಕ್ಷರನ್ನಾಗಿ ಸಾಹೇಬಗೌಡ ಗೌಡಗೇರಾ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಕವಲ್ದಾರ ಹತ್ತಿಕುಣಿ, ಉಪಾಧ್ಯಕ್ಷರಾಗಿ ಈಶಪ್ಪ ಹೆಡಗಿಮದ್ರಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಸಿದ್ಧಲಿಂಗಪ್ಪ ನಾಯಕ. ಡಾ. ಪ್ರಭು ಹುಲಿನಾಯಕ, ದೊಡಯ್ಯ ಹಳಿಗೇರಿ, ಶರಣಪ್ಪ ಜಾಕನಹಳ್ಳಿ. ಭೀಮರಾಯ ಠಾಣಗುಂದಿ, ಗುರುರಾಜ ಹುಲಕಲ್, ಅಂಬುರಾಜ ದೊರೆ, ಸಿದ್ಧು ನಾಯಕ ಹತ್ತಿಕುಣಿ, ಮಲ್ಲು ಕಟಕಟಿ, ಬಸವರಾಜ ಬಾಚವಾರ, ಭೀಮರಾಯ ರಾಮಸಮುದ್ರ, ಮಲ್ಲಿಕಾರ್ಜುನ ನೀಲಹಳ್ಳಿ, ಮೋನಪ್ಪ ಯಾದಗಿರಿ, ಹಣಮಂತ ಬಾಲಚಾಡ. ರಾಮಣ್ಣ ಗೌಡಗೇರ. ಚಂದಪ್ಪ ರಾಮಸಮುದ್ರ, ಬಸವರಾಜ ಸೈದಾಪೂರ, ಬಸವರಾಜ ಬೆಳಗುಂದಿ, ಸಿದ್ದಪ್ಪ ಕೋಯಿಲೂರು, ಸಿದ್ದಪ್ಪ ಕ್ಯಾಸಪನಹಳ್ಳಿ, ನಾಗಪ್ಪ ಠಾಣಗುಂದಿ, ಕಾಶಪ್ಪ ಅಬ್ಬೆತುಮಕೂರು, ವಿಶ್ವನಾಥ ಠಾಣಗುಂದಿ, ಸಾಬು ನೀಲಹಳ್ಳಿ, ಪೋಲಪ್ಪ ನೀಲಹಳ್ಳಿ, ಮಂಜುನಾಥ ಬಳಿಚಕ್ರ, ರವಿ ಆರ್ ಹೊಸಳ್ಳಿ, ಜಗದೀಶ ನಾಯಕ ಹಳಿಗೇರ, ಜಟ್ಟೇಪ್ಪ ನಾಯಕ ಠಾಣಗುಂದ, ಖಂಡಪ್ಪ ಹಳಿಗೇರಾ ರಾಮಚಂದ್ರ ಗೌಡಗೇರಾ ಮುಂತಾದವರಿದ್ದರು.

-----

31ವೈಡಿಆರ್‌10 : ಯಾದಗಿರಿಯ ವಾಲ್ಮೀಕಿ ಭವನದಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ವಾಲ್ಮೀಕಿ ನಾಯಕ ಸಂಘದ ತಾಲೂಕು ಮತ್ತು ನಗರ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

Share this article