ಕೊಳ್ಳೇಗಾಲದಲ್ಲಿ ಸಾಮಾಜಿಕ ಆರ್ಥಿಕ ಅಭಿವೃದ್ಧಿ ವರ್ಕ್‌ಶಾಪ್
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಯುವ ಪೀಳಿಗೆ ಮಾದಕ ವಸ್ತುಗಳಿಂದ ದೂರವಿರಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಂಘದವರಿಗೆ ಮಾದಕ ವಸ್ತುಗಳ ಜಾಲದ ಕುರಿತು ಮಾಹಿತಿ ನೀಡಿದರೆ, ನಾವು ನಿಮ್ಮ ಹೆಸರನ್ನು ಬಹಿರಂಗಪಡಿಸದೆ ದಿಟ್ಟ ಕ್ರಮವಹಿಸುತ್ತೇವೆ. ಆನ್‌ಲೈನ್‌ನಲ್ಲಿ ವಂಚನೆಗೊಳಗಾದ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಎಂದು ಡಿವೈಎಸ್ಪಿ ಮೋಹನ್ ಹೇಳಿದರು.ಕ್ರೆಡಿಟ್ ಆ್ಯಕ್ಸಿಸ್ ಗ್ರಾಮೀಣ ಲಿಮಿಟೆಡ್ ಕೊಳ್ಳೇಗಾಲ ಶಾಖೆಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸ್ತ್ರೀಯರು ಪೋನ್ ಬಳಸುವಾಗ ಜಾಗೃತೆ ವಹಿಸಿ, ಪೋನ್‌ಗಳಿಗೂ ಕಿವಿಯಿದೆ ಎಂಬ ಸತ್ಯವನ್ನು ಅರಿತು ಬಳಕೆ ವೇಳೆ ಜಾಗೃತರಾಗಿರಿ ಎಂದು ಕಿವಿಮಾತು ಹೇಳಿದರು.
ಅಪರಿಚಿತರು ನಿಮ್ಮ ಹಿಂಬಾಲಿಸುತ್ತಿದ್ದಾರೆ ಎಂಬುದನ್ನು ಗಮನಿಸಿ ಜಾಗೃತರಾಗಿ, ಕೆಲವರು ನಿಮ್ಮನ್ನು ಹಿಂಬಾಲಿಸಿ ಅಮಾಯಕರಂತೆ ನಂಬಿಸಿ ನಿಮ್ಮ ಚಿನ್ನಾಭರಣ ದೋಚುವ ಸಾಧ್ಯತೆ ಇರುವ ಕಾರಣ ಬಹಳ ಎಚ್ಚರಿಕೆಯಿಂದಿರಿ. ಅಪರಾಧ ಪ್ರಕರಣಗಳ ಬಗ್ಗೆ ನಿಮಗೆ ವಿಚಾರ ತಿಳಿದರೆ ಮಾಹಿತಿ ಇಲಾಖೆಗೆ ನೀಡಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು. ನೀವು 3 ದಿನಗಳ ಕಾಲ ಹೊರಗಡೆ ಹೋದಾಗ ಸಂಬಂಧಿಸಿದ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ತೆರಳಿ, ಸಮೀಪದ ಪೊಲೀಸ್ ಠಾಣೆಗೆ ಸಹ ಮಾಹಿತಿ ನೀಡಿ ತೆರಳುವುದು ಸೂಕ್ತ ಎಂದು ಸಲಹೆ ನೀಡಿದರು.
ಈ ವೇಳೆ ಸಮುದಾಯ ಆರೋಗ್ಯಾಧಿಕಾರಿ ವರದರಾಜು, ಪ್ರಾಥಮಿಕ ಆರೋಗ್ಯ ಅಧಿಕಾರಿ ಅಂಜಲಿ, ಗ್ರಾಮೀಣ ಲಿಮಿಟೆಡ್ ಪ್ರಾದೇಶಿಕ ವ್ಯವಸ್ಥಾಪಕ ಮುತ್ತುರಾಜು, ವಲಯ ವ್ಯವಸ್ಥಾಪಕ ಕೃಷ್ಣ, ಸಂದೇಶ, ಸುರೇಶ್, ಕಿರಣ್, ಅಶ್ವಥ್, ಉಮೇಶ್, ಸೋಮೇಶ್, ರಂಗರಾಜು, ಮಾದೇಶ್ ಇದ್ದರು.