ಪರಿಸರದ ನೈರ್ಮಲ್ಯ ಕಾಪಾಡದಿದ್ದರೆ ಮಾನವ ಕುಲಕ್ಕೇ ಕಂಟಕ: ಎಂ.ಎನ್‌. ಬಡಿಗೇರ

KannadaprabhaNewsNetwork |  
Published : Aug 02, 2025, 12:00 AM IST
ಮಲಗುಂದದಲ್ಲಿ ನಡೆದ ಪರಿಸರ ಸಂರಕ್ಷಣಾ ಕಾರ್ಯಕ್ರಮದಲ್ಲಿ ಮಕ್ಕಳು, ಗಣ್ಯರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಇಡೀ ಮನುಕುಲಕ್ಕೆ ಪರಿಸರದ ಅಗತ್ಯ, ಮಹತ್ವ ಗೊತ್ತಿದೆ. ಮಳೆ- ಗಾಳಿ ಬೆಳಕು ಎಲ್ಲವೂ ಸಕಾಲಕ್ಕೆ ನಮಗೆ ಒದಗದೇ ಹೋದರೆ ಮನುಷ್ಯನೇ ಉಳಿಯಲು ಸಾಧ್ಯವಿಲ್ಲ.

ಹಾನಗಲ್ಲ: ಪರಿಸರದ ನಿರ್ಮಲತೆ ಕಾಯದಿದ್ದರೆ ಮಾನವ ಕುಲವೇ ಕಂಟಕಕ್ಕೆ ಸಿಲುಕಿಕೊಂಡಂತೆ ಎಂದು ಮಲಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎನ್. ಬಡಿಗೇರ ತಿಳಿಸಿದರು.

ತಾಲೂಕಿನ ಮಲಗುಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಲಗುಂದ ಗ್ರಾಮ ಪಂಚಾಯಿತಿ, ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ಪರಿಸರ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಇಡೀ ಮನುಕುಲಕ್ಕೆ ಪರಿಸರದ ಅಗತ್ಯ, ಮಹತ್ವ ಗೊತ್ತಿದೆ. ಮಳೆ- ಗಾಳಿ ಬೆಳಕು ಎಲ್ಲವೂ ಸಕಾಲಕ್ಕೆ ನಮಗೆ ಒದಗದೇ ಹೋದರೆ ಮನುಷ್ಯನೇ ಉಳಿಯಲು ಸಾಧ್ಯವಿಲ್ಲ. ಇದರ ಅರಿವಿದ್ದೂ ಇದನ್ನು ರಕ್ಷಿಸಲು ಮುಂದಾಗದ ನಿರ್ಲಕ್ಷವೇ ಮನುಷ್ಯನ ಬಾಳಿಗೆ ಕೊಡಲಿ ಏಟು ಆಗಲಿದೆ ಎಂದರು.

ರೋಶನಿ ಸಂಸ್ಥೆಯ ಸಂಯೋಜಕ ಕೆ.ಎಫ್. ನಾಯಕ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಹಿಂದಿನ ಕಾಲದಲ್ಲಿ ಭೂಮಿ ಮಾಲಿನ್ಯಮುಕ್ತವಾಗಿತ್ತು. ಅದರಂತೆ ಪರಿಸರ ನಮಗಾಗಿ ನಮ್ಮ ಉಳಿವಿಗಾಗಿ ಎಂಬುದನ್ನು ಅರಿತು ಉಳಿಸಿ ಬೆಳೆಸೋಣ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ ತಳವಾರ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರಪ್ಪ ಹುಲ್ಲಾಳ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿದಾನಂದಯ್ಯ ಹಿರೇಮಠ, ಎಸ್‌ಡಿಎಂಸಿ ಸದಸ್ಯರಾದ ಸುರೇಶ ಮರಡಿ, ಮಂಜುನಾಥ ಅಸಾದಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜಪ್ಪ ತಳವಾರ, ಸುರ್ವಣಮ್ಮ ಪೂಜಾರ, ಜನವೇದಿಕೆ ಮುಖಂಡರಾದ ಮಾರ್ತಡಪ್ಪ ತಳವಾರ, ಗೀತಾಂಜಲಿ ತಳವಾರ, ರೋಶನಿ ಸಂಸ್ಥೆಯ ಸಂಯೋಜಕರಾದ ನಿರ್ಮಲಾ ಮಡಿವಾಳರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಕಾರ್ಯಕ್ರಮ ಪ್ರಭು ನಿರೂಪಿಸಿದರು. ಐ. ನಾಗರಾಜ ಸ್ವಾಗತಿಸಿದರು. ಹನುಮಂತಪ್ಪ ವಂದಿಸಿದರು.

ಮಹಿಳೆಗೆ ಹಸು ನೀಡಿ ಕೋರೆ ಜನ್ಮದಿನ ಆಚರಣೆ

ಹಾವೇರಿ: ಡಾ. ಪ್ರಭಾಕರ ಕೋರೆ ಕೋ- ಆಪ್ ಕ್ರೆಡಿಟ್ ಸೊಸೈಟಿ ಹಾವೇರಿ ಶಾಖಾ ವ್ಯವಸ್ಥಾಪಕ ಮಂಡಳಿಯು ಡಾ. ಪ್ರಭಾಕರ ಕೋರೆಯವರ 78ನೇ ವರ್ಷದ ಜನ್ಮದಿನದ ನಿಮಿತ್ತ ತಾಲೂಕಿನ ದೇವಗಿರಿ ಗ್ರಾಮದ ಪ್ರೇಮವ್ವ ಜಗದೀಶ ಹೊಳಲ ಅವರಿಗೆ ದೇಶೀ ಆಕಳನ್ನು ಕೊಡುಗೆಯಾಗಿ ನೀಡಿತು.

ಶಾಖೆಯ ಅಧ್ಯಕ್ಷ ಬಸವರಾಜ ಮಾಸೂರ ಮಾತನಾಡಿದರು. ಸೊಸೈಟಿ ಸಲಹಾ ಮಂಡಳಿ ಪದಾಧಿಕಾರಿಗಳಾದ ಶಿವಯೋಗಿ ಕೊಳ್ಳಿ, ನಿರಂಜನ ಹೆರೂರ, ವಿನಯ ಶಿರೂರ, ಸುಭಾಶಚಂದ್ರ ಹುರಳಿಕೊಪ್ಪಿ, ದಯಾನಂದ ಯಡ್ರಾಮಿ, ಮಹಾದೇವಣ್ಣ ಕಡ್ಲಿ, ರೋಟರಿ ಅಧ್ಯಕ್ಷ ಕಾಶೀನಾಥ ಅರಾವತ್, ಶಾಖಾ ವ್ಯವಸ್ಥಾಪಕ ಬಾಳಗೌಡ ಪಾಟೀಲ, ಸಿಬ್ಬಂದಿ ಪವಿತ್ರಾ ಬಂಕಾಪುರ, ವಿದ್ಯಾ ಗುಡಗೂರ, ದೇವರಾಜ ಬಿದರಿ, ಪರಶುರಾಮ ಸಂದಿಮನಿ, ನಾಗರಾಜ ಸುಳ್ಳಳ್ಳಿ, ಪಂಚಾಕ್ಷರಯ್ಯ ಗಡ್ಡದಮಠ, ಮಲ್ಲಿಕಾರ್ಜುನ ಹೊಸಮನಿ, ಶ್ಯಾಮಲಾ ಹೊಸಮನಿ, ಸಿದ್ಧಲಿಂಗೇಶ ಬಾಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿ.ಎಚ್. ಕಾಲೇಜಿನ ಡಾ. ಗುರುಪಾದಯ್ಯ ಸಾಲಿಮಠ ನಿರ್ವಹಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...