ಬರಿ ಕಣ್ಣಿನಲ್ಲಿ ನೋಡಿದರೆ ಕಲ್ಲು, ಭಕ್ತಿಯಿಂದ ಪೂಜಿಸಿದರೆ ಭಗವಂತ: ಸಿದ್ಧಗಂಗಾ ಶ್ರೀ

KannadaprabhaNewsNetwork |  
Published : Jun 07, 2025, 12:03 AM IST
6ಕೆಎಂಎನ್ ಡಿ14 | Kannada Prabha

ಸಾರಾಂಶ

ಭಾರತ ಜಗತ್ತಿನ ಎಲ್ಲಾ ರಾಷ್ಟ್ರಗಳ ಮುಂದೆ ಜಗದ್ವಿಖ್ಯಾತವಾಗಿದೆ. ವಿಶ್ವಮಾನ್ಯ, ಅಗ್ರಗಣ್ಯ ಸ್ಥಾನ ಮಾನ ಪಡೆದಿದೆ. ನಾವು ಯಾವುದೇ ಸಮಾರಂಭ ನಡೆಸಿದರು ಮೊದಲು ಧರ್ಮಸಭೆ ನಡೆಸುತ್ತೇವೆ. ಇದರ ಮೂಲ ಉದ್ದೇಶ ಭಗವಂತನ ಸ್ಮರಣೆಯಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಭಗವಂತನ ವಿಗ್ರಹ ರೂಪಕ್ಕೆ, ಶ್ರದ್ಧೆ, ಭಕ್ತಿ, ನಂಬಿಕೆ ಅಡಿಗಲ್ಲು. ಬರಿ ಕಣ್ಣಿನಲ್ಲಿ ನೋಡಿದರೆ ಕಲ್ಲು. ನಂಬಿಕೆ, ಭಕ್ತಿಯಿಂದ ಪೂಜಿಸಿದರೆ ಭಗವಂತನ ರೂಪವನ್ನು ಕಾಣಬಹುದು ಎಂದು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಬ್ಯಾಡರಹಳ್ಳಿಯಲ್ಲಿ ನೂತನ ವಿದ್ಯಾಗಣಪತಿ, ಶಿವಾ, ನವಗ್ರಹ ಹಾಗೂ ಶ್ರೀರಾಮದೇವರ ಶಿಲಾ ಪ್ರತಿಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಬದುಕಿನ ಸುಖ, ದುಃಖ, ಯಶಸ್ಸು ಎಲ್ಲಾ ಸಂದರ್ಭಗಳಲ್ಲೂ ಭಗವಂತನನ್ನು ಸ್ಮರಿಸುತ್ತೇವೆ. ಇದರಿಂದ ದಾರ್ಶನಿಕರು ಭಾರತದ ಆತ್ಮ ಆಧ್ಯಾತ್ಮ ಎನ್ನುತ್ತಾರೆ ಎಂದರು.

ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ ಮೇಲೆ ಪಾಶ್ಚಿಮಾತ್ಯರು ದಾಳಿ ಮಾಡಿದಾಗ ಆ ರಾಷ್ಟ್ರದ ಧರ್ಮ, ಸಂಸ್ಕೃತಿ ನಾಶವಾಗಿದೆ. ಆದರೆ, ಭಾರತದ ಮೇಲೆ ಹಲವಾರು ಬಾರಿ ಪಾಶ್ಚಾತ್ಯರು ದಾಳಿ ಮಾಡಿದರೂ ಇಲ್ಲಿಯ ಧರ್ಮ, ಸಂಸ್ಕೃತಿ ನಾಶವಾಗಿಲ್ಲ ಎಂದರು.

ಭಾರತ ಜಗತ್ತಿನ ಎಲ್ಲಾ ರಾಷ್ಟ್ರಗಳ ಮುಂದೆ ಜಗದ್ವಿಖ್ಯಾತವಾಗಿದೆ. ವಿಶ್ವಮಾನ್ಯ, ಅಗ್ರಗಣ್ಯ ಸ್ಥಾನ ಮಾನ ಪಡೆದಿದೆ. ನಾವು ಯಾವುದೇ ಸಮಾರಂಭ ನಡೆಸಿದರು ಮೊದಲು ಧರ್ಮಸಭೆ ನಡೆಸುತ್ತೇವೆ. ಇದರ ಮೂಲ ಉದ್ದೇಶ ಭಗವಂತನ ಸ್ಮರಣೆಯಾಗಿದೆ ಎಂದರು.

ಮೊದಲು ನಾವು ಭಗವಂತನ ಸ್ವರೂಪವನ್ನು ತಿಳಿದುಕೊಳ್ಳಬೇಕು. ವಿಗ್ರಹಗಳನ್ನು ಸ್ಥಾಪನೆ ಮಾಡಿ ಪೂಜಿಸಿ ಮನಸನ್ನು ಶುದ್ಧಿ ಮಾಡುವ ಕೆಲಸ ಮಾಡಿಕೊಳ್ಳಬೇಕು. ತನು, ಮನ, ಭಾವ ಶುಚಿ ಮುಂತಾದ ನಿರ್ಮೂಲತೆ ಪಡೆಯುತ್ತೇವೆ. ಆ ಉದ್ದೇಶವಿಟ್ಟುಕೊಂಡೇ ದೇವಾಲಯ ನಿರ್ಮಾಣ ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಗವಿಮಠದ ಷಡಕ್ಷರ ಸ್ವಾಮೀಜಿ, ಹಂಗ್ರಾಪುರದ ಸ್ವಾಮೀಜಿ ಮತ್ತು ರಾಮಮಂದಿರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಜಯರಾಮು, ಎಂ.ಎನ್.ನಾಗರಾಜು, ಎಂ.ಸುರೇಶ್ , ಬಿ.ಎಸ್.ಕಾಳೇಗೌಡ, ಬಿ.ಟಿ.ರವಿಕುಮಾರ್, ಮಾದೇಗೌಡ, ಶಿವಪ್ರಸಾದ್, ಬಸವ, ಮರಿಸ್ವಾಮಿ, ಅರುಣ, ಹಾಡ್ಲಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.

ವಿಜೃಂಭಣೆಯಿಂದ ನಡೆದ ಶ್ರೀದಣ್ಣಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ

ಪಾಂಡವಪುರ:

ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀದಣ್ಣಮ್ಮ ದೇವಿ ದೇವಸ್ಥಾನ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ಗ್ರಾಮಸ್ಥರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಹೊರವಲಯದಲ್ಲಿ ದೇವಸ್ಥಾನದ ಕುಲಸ್ಥರು ಹಾಗೂ ಗ್ರಾಮಸ್ಥರು ಎಲ್ಲರು ಸೇರಿ ಶ್ರೀದಣ್ಣಮ್ಮದೇವಿ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪಿಸಿ ಕುಲಗುರುಗಳಾದ ಬೋಳೇನಹಳ್ಳ ಮಠದ ಶ್ರೀನಿಜಗುಣ ಒಡೆಯರ್ ನೇತೃತ್ವದಲ್ಲಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೂ ಗಣಪತಿ ಹೋಮ, ಚಂಡಿಕ ಹೋಮ ಸೇರಿದಂತೆ ಹೋಮಹವನಗಳು ನಡೆದವು. ಬಳಿಕ ಶ್ರೀನಿಜಗುಣ ಒಡೆಯರ್ ನೇತೃತ್ವದಲ್ಲಿ ಪ್ರತಿಷ್ಠಾಪನೆ ನೆರವೇರಿಸಲಾಯಿತು. ದೇವಸ್ಥಾನದ ಉದ್ಘಾಟನೆ ಅಂಗವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರು ಭಕ್ತರು ಪ್ರಸಾದ ಸ್ವೀಕರಿದರು.

ಶ್ರೀನಿಜಗುಣ ಒಡೆಯರ್ ಸ್ವಾಮೀಜಿ ಮಾತನಾಡಿ, ಗ್ರಾಮಸ್ಥರು ಶ್ರೀದಣ್ಣಮ್ಮ ದೇವಿ ನೂತನ ದೇವಸ್ಥಾನ ಹಾಗೂ ವಿಗ್ರಹ

ಪ್ರತಿಷ್ಠಾಪನೆಯನ್ನು ವಿಜೃಂಭಣೆಯಿಂದ ನೆರವೇರಿಸಿದ್ದಾರೆ. ಗ್ರಾಮಗಳಲ್ಲಿ ದೇವಸ್ಥಾನಗಳ ನಿರ್ಮಾಣದಿಂದ ಜನರದಲ್ಲಿ ಧಾರ್ಮಿಕ ಭಾವನೆ ಮೂಡಿ, ಮನಸ್ಸಿಗೆ ನೆಮ್ಮದಿ, ಪರಸ್ಪರ ಒಂದಾಣಿಕೆಗಳು ಬೆಳೆದು ಶಾಂತಿ ನೆಲೆಸುತ್ತದೆ ಎಂದು ತಿಳಿಸಿದರು.

ಈ ವೇಳೆ ಬನ್ನಂಗಾಡಿ ಗ್ರಾಮಸ್ಥರು, ಮುಖಂಡರು, ಯಜಮಾನರು, ಯುವಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ