ಯತ್ನಾಳರಿಗೆ ಸರಿ ಕಾಣದಿದ್ರೆ ಮತ್ತೊಮ್ಮೆ ರಾಜೀನಾಮೆ

KannadaprabhaNewsNetwork | Published : May 4, 2025 1:35 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮ ತಂದೆ ರಾಜೀನಾಮೆ ನೀಡಿದ್ದು ಸಂತಸವಿದೆ. ಕೊಡಲಿಕ್ಕೆ ಹೋಗಿದ್ದು ನನಗೆ ಸಂತಸ ಇದೆ. ಶಿವಾನಂದ ಪಾಟೀಲರು ರಾಜೀನಾಮೆ ನೀಡಿದ ರೀತಿ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಸರಿ ಕಾಣದಿದ್ರೆ ಮತ್ತೊಮ್ಮೆ ರಾಜೀನಾಮೆಗೆ ಸಿದ್ಧ ಎಂದು ಸಚಿವ ಶಿವಾನಂದ ಪಾಟೀಲ ಪುತ್ರ ಸತ್ಯಜೀತ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಮ್ಮ ತಂದೆ ರಾಜೀನಾಮೆ ನೀಡಿದ್ದು ಸಂತಸವಿದೆ. ಕೊಡಲಿಕ್ಕೆ ಹೋಗಿದ್ದು ನನಗೆ ಸಂತಸ ಇದೆ. ಶಿವಾನಂದ ಪಾಟೀಲರು ರಾಜೀನಾಮೆ ನೀಡಿದ ರೀತಿ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಸರಿ ಕಾಣದಿದ್ರೆ ಮತ್ತೊಮ್ಮೆ ರಾಜೀನಾಮೆಗೆ ಸಿದ್ಧ ಎಂದು ಸಚಿವ ಶಿವಾನಂದ ಪಾಟೀಲ ಪುತ್ರ ಸತ್ಯಜೀತ ಪಾಟೀಲ ಹೇಳಿದರು.

ಶಿವಾನಂದ ಪಾಟೀಲರ ರಾಜೀನಾಮೆ ಕೊಟ್ಟ ರೀತಿ ಸರಿ ಇಲ್ಲ ಎಂದು ಟ್ವೀಟ್ ಮಾಡಿದ್ದ ಶಾಸಕ ಯತ್ನಾಳರ ವಿಚಾರಕ್ಕೆ ನಗರದ ನಿವಾಸದಲ್ಲಿ ಸ್ಪಷ್ಟನೆ ನೀಡಿರುವ ಅವರು, ಯತ್ನಾಳರಿಗೆ ಶಿವಾನಂದ ಪಾಟೀಲ ಪುತ್ರ ಸತ್ಯಜೀತ ಸವಾಲು ಹಾಕಿದರು. ನೀವೆ ಡ್ರಾಪ್ಟ್ ಮಾಡಿ. ಅದರಂತೆ ನಮ್ಮ ತಂದೆಯವರು ಡ್ರಾಪ್ಟ್ ರೆಡಿ ಮಾಡುತ್ತಾರೆ. ಒಟ್ಟಿಗೆ ರಾಜೀನಾಮೆ ಕೊಡೋಣ. ಮೊದಲು ನಮ್ಮ ತಂದೆ ರಾಜೀನಾಮೆ ಅಂಗೀಕಾರ ಆಗಲಿ. ಆಮೇಲೆ ಯತ್ನಾಳರ ರಾಜೀನಾಮೆ ಅಂಗೀಕಾರ ಆಗಲಿ. ಇದಕ್ಕೆ ರೆಡಿ ಇಲ್ಲ ಎಂದರೆ ನಾವು ನಮ್ಮ ಮನೆತನದ ಮುಂದಿನ ಪೀಳಿಗೆ ಈ ಜಗಳದ ಬಗ್ಗೆ ಹೇಳಬೇಕಾಗುತ್ತೆ ಎಂದರು.ವಿಜಯಪುರ ನಗರಕ್ಕೆ ಯತ್ನಾಳರ ಕೊಡುಗೆ ಏನು? ನಮ್ಮ ಜನರ ಮೇಲೆ ಕಾಳಜಿ ಇದ್ದಿದ್ದರೇ ಸಕ್ಕರೆ ಕಾರ್ಖಾನೆಯನ್ನು ಕಲಬುರ್ಗಿಯಲ್ಲಿ ಯಾಕೆ ಸ್ಥಾಪಿಸಿದ್ರು? ವಿಜಯಪುರದಲ್ಲೇ ಸ್ಥಾಪಿಸಿ ಜನರಿಗೆ ಉದ್ಯೋಗ ಕೊಡಬೇಕಿತ್ತು. ಬಸವನಬಾಗೇವಾಡಿ ಊರಿಗೆ ಪಾಕಿಸ್ತಾನ ಎಂದು ಕರೆದಿದ್ದಾರೆ. ವಿಜಯಪುರ ನಗರಕ್ಕೆ ಪಾಕಿಸ್ತಾನ ಎಂದಿದ್ದರು. ಬಸವಣ್ಣನವರ ಬಗ್ಗೆಯೂ ನದಿಗೆ ಹಾರಿದ್ದಾರೆ ಎಂದು ಯತ್ನಾಳ ಮಾತನಾಡಿದ್ದಾರೆ. ಇದರಿಂದ ಕ್ಷೇತ್ರದ ಜನರಿಗೆ ನೋವಾಗಿದೆ. ಯತ್ನಾಳರು ಲಿಂಗಾಯತರು ಅನ್ನೋದೆ ಅನುಮಾನ ಇದೆ. ಬಸವಣ್ಣನವರ ಹುಟ್ಟೂರಿಗೆ ಪಾಕಿಸ್ತಾನ ಎಂದಿದ್ದಾರೆ. ಯತ್ನಾಳ ಕುಡಿದು ಯುವಕರ ಮುಂದೆ ಬೈದಿದ್ದಾರೆ ಎಂದು ಯತ್ನಾಳ ವಿರುದ್ಧ ಹರಿಹಾಯ್ದರು. ಕೇಂದ್ರ ಮಂತ್ರಿ ಹೇಗೆ ಆದರು ಅನ್ನೋದೇ ಗೊತ್ತಿಲ್ಲ. ನಗರದಲ್ಲಿ ಸರ್ಕಲ್‌ಗಳನ್ನೇ ಮಾಡಿದ್ದಾರೆ. ಸರ್ಕಲ್‌ಗಳನ್ನ ಮಾಡೋದೆ ಇವರ ಸಾಧನೆ ಆಯ್ತು ಎಂದು ಟೀಕಿಸಿದರು.

ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲರ ಗಜಕೇಸರಿ ಯೋಗ‌ದ ಬಗ್ಗೆ ಟೀಕೆ ಮಾಡಿದ್ದಕ್ಕೆ ಎಚ್ಚರಿಕೆ ನೀಡಿದ ಅವರು, ಯತ್ನಾಳ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಲಿ ಎಂದು ಸಲಹೆ ನೀಡಿದರು.

----

ಕೋಟ್‌

ನಮ್ಮ ಊರ ಜನ ಮುಗ್ದರು ಮೂರ್ಖರಲ್ಲ. ಬಾಗೇವಾಡಿ ಜನ ಯತ್ನಾಳರಿಗೆ ಕಲ್ಲು ಹೊಡಿತಾರೆ. ಹಚಡದ ಮನೆತನದ ಹೆಸರಿನ ಪ್ರಸ್ತಾಪದ ಬಗ್ಗೆ ಮಾತನಾಡಿ, ಬರ್ತ್ ಸರ್ಟಿಫಿಕೇಟ್‌ನಲ್ಲಿ ಪಾಟೀಲ ಅಂತ ಇದೆ. 30 ವರ್ಷಗಳಿಂದ ಸತತವಾಗಿ ನಮ್ಮ ತಂದೆಯನ್ನ ಆಯ್ಕೆ ಮಾಡಿದ್ದಾರೆ. ಗೌಡ ಅನ್ನೋದು ದಕ್ಷಿಣ ಭಾಗದಲ್ಲಿ ಹೆಸರಿನ ಜೊತೆಗೆ ಬರುತ್ತೆ. ಇವರಿಗೆ ಗೌಡ ಅಂತ ಹೇಗೆ ಬಂತು? ಗೌಡ ಅನ್ನೋದು ಜನರ ಮೇಲಿನ ದೌರ್ಜನ್ಯದ ಸಂಕೇತ.

ಸತ್ಯಜೀತ ಪಾಟೀಲ, ಸಚಿವ ಶಿವಾನಂದ ಪಾಟೀಲ ಪುತ್ರ

Share this article