ಸಾಮಾಜಿಕ ಜಾಲತಾಣಗಳಲ್ಲಿ ಕುಖ್ಯಾತ ರೌಡಿಗಳ ಪರ ರೀಲ್ಸ್‌ ಮಾಡಿದರೆ ಕ್ರಿಮಿನಲ್‌ ಕೇಸ್‌

KannadaprabhaNewsNetwork |  
Published : Jul 23, 2024, 01:50 AM ISTUpdated : Jul 23, 2024, 09:04 AM IST
ರೀಲ್ಸ್‌ ರೌಡಿ | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಕುಖ್ಯಾತ ರೌಡಿಗಳ ಪರ ಫ್ಯಾನ್‌ ಪೇಜ್‌ ತೆರೆದು ರೀಲ್ಸ್‌ ಮಾಡಿ ಬಿಲ್ಡಪ್‌ ನೀಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

  ಬೆಂಗಳೂರು :  ಸಾಮಾಜಿಕ ಜಾಲತಾಣಗಳಲ್ಲಿ ಕುಖ್ಯಾತ ರೌಡಿಗಳ ಪರ ಫ್ಯಾನ್‌ ಪೇಜ್‌ ತೆರೆದು ರೀಲ್ಸ್‌ ಮಾಡಿ ಬಿಲ್ಡಪ್‌ ನೀಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಬಿಸಿಮುಟ್ಟಿಸಿರುವ ಪೊಲೀಸರು, ಇನ್ನು ಮುಂದೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ, ಯು ಟ್ಯೂಬ್‌, ಫೇಸ್‌ಬುಕ್‌ಗಳಲ್ಲಿ ರೌಡಿಗಳ ಪರ ಫ್ಯಾನ್‌ ಪೇಜ್‌ ತೆರೆದು ರೀಲ್ಸ್‌ ಮಾಡಿ ಸಿನಿಮಾ ಹೀರೋಗಳ ಮಾದರಿಯಲ್ಲಿ ಬಿಲ್ಡಪ್‌ ನೀಡುತ್ತಿದ್ದ ಸುಮಾರು 60ಕ್ಕೂ ಅಧಿಕ ಖಾತೆಗಳನ್ನು ಪತ್ತೆಹಚ್ಚಿದ್ದಾರೆ. ಈ ಫ್ಯಾನ್‌ ಪೇಜ್‌ ತೆರೆದ ಅಡ್ಮಿನ್‌ಗಳನ್ನು ಸಿಸಿಬಿ ಕಚೇರಿಗೆ ಕರೆಸಿ ಬಿಸಿ ಮುಟ್ಟಿಸಿದ್ದಾರೆ. ಸುಮಾರು 500ಕ್ಕೂ ಅಧಿಕ ವಿಡಿಯೋಗಳನ್ನು ಡಿಲೀಟ್‌ ಮಾಡಿಸಿದ್ದಾರೆ.

ರೌಡಿಗಳ ಪರ ಫ್ಯಾನ್‌ ಪೇಜ್‌ ತೆರೆದ ಆಡ್ಮಿನ್‌ಗಳ ಪೈಕಿ ಬಹುತೇಕರು ಅಪ್ರಾಪ್ತ ಬಾಲಕರು ಎಂಬುದು ಗೊತ್ತಾಗಿದೆ. ಹೀಗಾಗಿ ಅವರ ಪೋಷಕರನ್ನು ಸಹ ಸಿಸಿಬಿ ಕಚೇರಿಗೆ ಕರೆಸಿ ಸೂಕ್ತ ತಿಳಿವಳಿಕೆ ನೀಡಿದ್ದಾರೆ. ಇನ್ನು ಮುಂದೆ ಇಂತಹ ಕೆಲಸ ಮಾಡಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಯುವಕರ ಖರ್ಚಿಗೆ ಹಣ ಕೊಟ್ಟು ಬಿಲ್ಡಪ್‌

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ಯುವಕರನ್ನು ಸಂಪರ್ಕಿಸಿರುವ ಕುಖ್ಯಾತ ರೌಡಿಗಳ ಶಿಷ್ಯರು ತಮ್ಮ ಬಾಸ್‌ಗಳ ಪರ ಫ್ಯಾನ್‌ ಪೇಜ್‌ ತೆರೆದು ರೀಲ್ಸ್‌ ಮಾಡುವಂತೆ ಪುಸಲಾಯಿಸಿ ಈ ಕೆಲಸ ಮಾಡಿಸಿದ್ದಾರೆ. ಈ ಕೆಲಸಕ್ಕೆ ಯುವಕರಿಗೆ ಖರ್ಚಿಗೆ 500 ರು. ಮತ್ತು 1 ಸಾವಿರ ರು. ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ರೌಡಿಗಳು ತಮ್ಮ ಇರುವಿಕೆ ತೋರಿಸಲು ಹಾಗೂ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ಡಪ್‌ ಪಡೆಯುತ್ತಿದ್ದಾರೆ. ಕುಖ್ಯಾತ ರೌಡಿಗಳಾದ ವಿಲ್ಸನ್‌ ಗಾರ್ಡನ್‌ ನಾಗ, ಸೈಲೆಂಟ್‌ ಸುನೀಲ, ಕುಣಿಗಲ್‌ ಗಿರಿ, ಸೈಕಲ್‌ ರವಿ, ಜೇಡರಹಳ್ಳಿ ಕೃಷ್ಣ ಸೇರಿದಂತೆ ಹಲವು ರೌಡಿಗಳ ಪರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಿಲ್ಡಪ್‌ ವಿಡಿಯೋಗಳು ಹರಿದಾಡುತ್ತಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ