ಕನ್ನಡಪ್ರಭ ವಾರ್ತೆ ಮದ್ದೂರು
ಒಕ್ಕೂಟದ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಸಂಘಗಳು ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಒಕ್ಕೂಟದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಗೌಡ್ರು ಮಾತನಾಡಿ, ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ನಮ್ಮ ಟೈಲರ್ ಗಳ ಭದ್ರತೆಗೆ ನಿಗಮ ಮಂಡಳಿ ಸ್ಥಾಪನೆಯಾಗಬೇಕಿದೆ. ಅದಕ್ಕಾಗಿ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ಕಾರ್ಯಕ್ರಮದಲ್ಲಿ ಒಕ್ಕೂಟ ರಾಜ್ಯ ಗೌರವ ಅಧ್ಯಕ್ಷ ಆನಂದ್ ಕಾಂಚಾಣ, ಖಜಾಂಚಿ ರಾಧ ಧನರಾಜ್, ಉಪಾಧ್ಯಕ್ಷರಾದ ಚನ್ನಪ್ಪ ನಾಯಕ್, ಸುಮತಿ ನಾಯ್ಡು, ಗೋವಿಂದ ನಾಯಕ್, ಪರಮೇಶ್, ಪ್ರಕಾಶ್, ಬೆಸಗರಹಳ್ಳಿ ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತುರಾಜ್, ಖಜಾಂಚಿ ರಾಮಕೃಷ್ಣ, ಕಾರ್ಯದರ್ಶಿ ರವಿಕುಮಾರ್, ರಾಮ ಮೂರ್ತಿ ಚಂದ್ರಶೇಖರ್ ರವರುಗಳು ಹಾಜರಿದ್ದರು.
ಮಕ್ಕಳ ನಾಟಕೋತ್ಸವಮೇಲುಕೋಟೆ:
ದೃಶ್ಯ ಟ್ರಸ್ಟ್, ಕನ್ನಡಸಂಸ್ಕೃತಿ ಇಲಾಖೆ, ಪುತಿನ ಟ್ರಸ್ಟ್, ಮಂಡ್ಯ ಕರ್ನಾಟಕ ಸಂಘ ಸಹಯೋಗದಲ್ಲಿ ದಿ.ಸುಘೋಷ್ ಕೌಲಗಿ ನೆನಪಿಗಾಗಿ ಎರಡು ದಿನಗಳ ಕಾಲ ಪುತಿನ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ನಾಟಕೋತ್ಸವದಲ್ಲಿ ಮಂಡ್ಯದ ಸದ್ವಿದ್ಯಾ ರಂಗತಂಡದಿಂದ ಬೊಮ್ಮನಹಳ್ಳಿ ಕಿಂದರಜೋಗಿ, ಪಾಂಡವಪುರ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಕರ್ಣ ಅರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ನಾಟಕ ಪ್ರದರ್ಶನ ಗಮನ ಸೆಳೆಯಿತು.