ಚಳ್ಳಕೆರೆ: ನಮ್ಮಲ್ಲಿರುವ ಅಜ್ಞಾನ ಮತ್ತು ಆಹಂಕಾರವನ್ನು ತ್ಯಜಿಸಿದಾಗ ಮಾತ್ರ ನಾವು ಉತ್ತಮ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ವೇದ, ಉಪನಿಷತ್ತುಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಧಾರ್ಮಿಕ ವಿಚಾರಧಾರೆಗಳನ್ನು ಅರ್ಥೈಸಿಕೊಳ್ಳುವಂತಹ ಅವಕಾಶಗಳು ಲಭಿಸುತ್ತವೆ. ದೈವ ಮತ್ತು ದೈವತ್ವವನ್ನು ಸಮಾನಾಗಿ ಕಾಣಬೇಕು. ನಾವೆಲ್ಲರೂ ಭಗವಂತನ ನಾಮಸ್ಮರಣೆಯಿಂದ ಮಾತ್ರ ಉತ್ತಮ ಜೀವನ ನಡೆಸಬಹುದು ಎಂದು ನರಹರಿ ಸದ್ಗುರುಪೀಠದ ವೈ.ರಾಜರಾಂಶಾಸ್ತ್ರಿ ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ಭಗವಂತ ಕೃಪೆಯನ್ನು ಪಡೆಯಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ಆದರೆ, ನಮ್ಮಲ್ಲಿರುವ ಕೆಲವು ಲೋಪದೋಷಗಳು ನಮಗೆಲ್ಲರಿಗೂ ಭಗವಂತನ ಸಾಕ್ಷಾತ್ಕಾರಕ್ಕೆ ಅಡ್ಡಿಯಾಗುತ್ತಿವೆ. ನಿರ್ಮಲವಾದ ಮನಸ್ಸು, ಭಕ್ತಿ ಶದ್ಧೆಯಿಂದ ಗುರುವಿನ ಅನುಗ್ರಹ ಪಡೆಯಬೇಕು ಎಂದರು.
ದತ್ತಮಂದಿರ ಸೇವಾಟ್ರಸ್ಟ್ ಅಧ್ಯಕ್ಷ ಜಿ.ಎಸ್.ದತ್ತಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಸುಬ್ಬುರಾವ್, ಡಾ.ಬಾಲಾಜಿವೆಂಕಟೇಶ್, ಡಾ.ಅನಂತರಾಮ್ ಗೌತಮ್, ಜೆ.ಎಸ್.ಶ್ರೀನಾಥ, ಸುಭ್ರಮಣ್ಯ, ಜಿ.ಎಸ್.ಗೋಪಿನಾಥ ಮುಂತಾದವರು ಉಪಸ್ಥಿತರಿದ್ದರು.