-ಯಾವ ದೊಣ್ಣೆ ನಾಯಕ ಅಂತಾ ಮಾತಾಡ್ತೀ । ಯತ್ನಾಳ್, ಜಾರಕಿಹೊಳಿ ವಿರುದ್ಧವೂ ರೇಣುಕಾಚಾರ್ಯ ವಾಗ್ದಾಳಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದೂ ಅಷ್ಟೇ ಸತ್ಯ. ತಾಕತ್ತಿದ್ದರೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲಿ ನೋಡೋಣ ಎಂದು ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿಗೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.ನಗರದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಜನ್ಮದಿನಕ್ಕೆ ಶುಭಾರೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸವಾಲು ಹಾಕುತ್ತೇನೆ. ನಿಮಗೆ ತಾಕತ್ತಿದ್ದರೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನಿದಂದ ಇಳಿಸಿ ನೋಡೋಣ ಎಂದರು.
ವಿಧಾನಸಭೆ ಚುನಾವಣೆ-2023ರಲ್ಲಿ ಬಿಜೆಪಿ ಹೀನಾಯ ಸೋತಾಗ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ ಉತ್ಸಾಹಿ ಯುವ ನಾಯಕ ವಿಜಯೇಂದ್ರ ಪಕ್ಷದ ನಾಯಕ ಕಣ್ಣಿಗೆ ಬಿದ್ದರು. ಪಕ್ಷ ಕ್ಕೊಂದು ಎನರ್ಜಿ, ಬೂಸ್ಟ್ ಬೇಕಿತ್ತು. ಅಂತಹ ಕೆಲಸವನ್ನು ವಿಜಯೇಂದ್ರ ಮೂಲಕ ವರಿಷ್ಟರು ಮಾಡಿದರು. 66 ಬಿಜೆಪಿ ಶಾಸಕರು ವಿಧಾನಸೌಧದೊಳಗಿದ್ದಾರೆ. ಇನ್ನೂ 148 ಜನ ಮಾಜಿ ಸಚಿವರು, ಮಾಜಿ ಶಾಸಕರು, ಪರಾಜಿತರು ನಾವು ಹೊರಗಿದ್ದೇವೆ. ನಾವೆಲ್ಲರೂ ಸೇರಿಯೇ ಸರ್ಕಾರ ರಚಿಸುವ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.
ನಮ್ಮಶಕ್ತಿ, ಸಾಮರ್ಥ್ಯ, ವರ್ಚಸ್ಸು ಕುಂದಿಲ್ಲ: ರೇಣುಕಾರ್ಯ
...ಬಾಕ್ಸ್...
2023ಕ್ಕಿಂತ ಮುಂಚಿನ ಐದಾರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ ವಿಜಯೇಂದ್ರ ಸಾಮರ್ಥ್ಯ ನೋಡಿಯೇ ರಾಷ್ಟ್ರೀಯ ನಾಯಕರು ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಕೊಂಡಿ ಮಂಚಣ್ಣ, ಮಲ್ಲಪ್ಪ ಶೆಟ್ಟಿಯಂತಹ ಕಿತಾಪತಿ ಮಾಡುತ್ತಿರುವ ಮೂರು ಮತ್ತೊಂದು ಎಂಬಂತಿರುವ ತಂಡವು ವಿಜಯೇಂದ್ರ ವ್ಯಕ್ತಿಯಲ್ಲ, ಪಕ್ಷದ ರಾಜ್ಯಾಧ್ಯಕ್ಷ ಅಂತಾ ಅರಿಯಲಿ. ಇಂತಹವರಿಗೆ ವಿಜಯೇಂದ್ರ ಹೆಸರು ಹೇಳುವುದಕ್ಕೂ ಯೋಗ್ಯತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಕ್ಯಾಪ್ಷನ್
ದಾವಣಗೆರೆಯಲ್ಲಿ ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಜನ್ಮದಿನಕ್ಕೆ ಶುಭಾರೈಸಿ ಸನ್ಮಾನಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಇದ್ದರು.