ಬರುವ ಲೋಕಸಭೆ ಚುನಾವಣೆಯಲ್ಲಿ ತಪ್ಪು ತೀರ್ಮಾನ ಕೈಗೊಂಡರೆ ಜನರ ಬದುಕು ಮತ್ತೆ ೫ ವರ್ಷ ಕತ್ತಲೆಗೆ ಜಾರಲಿದೆ. ಯೋಚಿಸಿ, ಎಚ್ಚರದಿಂದ ತೀರ್ಮಾನಿಸಿ. ಗೃಹಲಕ್ಷ್ಮೀಯಂತೆ ಮಹಾಲಕ್ಷ್ಮೀಯನ್ನೂ ಮನೆಗೆ ತುಂಬಿಸಿಕೊಳ್ಳಿ ಎಂದು ಶಾಸಕ ಶ್ರೀನಿವಾಸ ಮಾನೆ ಮನವಿ ಮಾಡಿದರು.
ಹಾನಗಲ್ಲ: ಬರುವ ಲೋಕಸಭೆ ಚುನಾವಣೆಯಲ್ಲಿ ತಪ್ಪು ತೀರ್ಮಾನ ಕೈಗೊಂಡರೆ ಜನರ ಬದುಕು ಮತ್ತೆ ೫ ವರ್ಷ ಕತ್ತಲೆಗೆ ಜಾರಲಿದೆ. ಯೋಚಿಸಿ, ಎಚ್ಚರದಿಂದ ತೀರ್ಮಾನಿಸಿ. ಗೃಹಲಕ್ಷ್ಮೀಯಂತೆ ಮಹಾಲಕ್ಷ್ಮೀಯನ್ನೂ ಮನೆಗೆ ತುಂಬಿಸಿಕೊಳ್ಳಿ ಎಂದು ಶಾಸಕ ಶ್ರೀನಿವಾಸ ಮಾನೆ ಮನವಿ ಮಾಡಿದರು.
ಬಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಜನಸಾಮಾನ್ಯರಿಗೆ ಆಸರೆಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಿಂಗಳು ಕನಿಷ್ಠ ೪ ಸಾವಿರ ರು. ಉಳಿತಾಯವಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದರೆ ಕುಟುಂಬದ ಯಜಮಾನಿಗೆ ವಾರ್ಷಿಕ ಒಂದು ಲಕ್ಷ ರು. ನೆರವು ನೀಡುವ ಮಹಾಲಕ್ಷ್ಮೀ ಯೋಜನೆ ಜಾರಿಗೆ ಬರಲಿದೆ ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಯಾಸೀರಖಾನ ಪಠಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ಮಾರುತಿ ಮುದುಕಣ್ಣನವರ, ಮಲ್ಲೇಶಪ್ಪ ಕ್ಷೌರದ, ಮಲ್ಲನಗೌಡ ಪಾಟೀಲ, ಚನ್ನಬಸನಗೌಡ ಪಾಟೀಲ, ರಾಮಣ್ಣ ರಾಮಜಿ, ಪತಂಗಸಾಬ ಮಕಾನದಾರ, ನಾಗರಾಜ ಮಲ್ಲಮ್ಮನವರ, ಮನೋಜ ಉಡುಗಣಿ, ಪದ್ಮಾ ಬೇದ್ರೆ, ಲಕ್ಷ್ಮೀ ಕಲಾಲ, ಮಹ್ಮದ್‌ಹನೀಫ್ ಬಂಕಾಪೂರ, ಗದಿಗೆವ್ವ ಚಿಕ್ಕಣಗಿ, ರಸೂಲಸಾಬ ವಾಗಿನಕೊಪ್ಪ, ಅರುಣ ಮಲ್ಲಮ್ಮನವರ ಸಂದರ್ಭದಲ್ಲಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.