- ದಲ್ಲಾಳಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸೂಚನೆ
-- ಬಾಕ್ಸ್--- 2025ರ ಜೂನ್ 9 ರಂದು ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು
- 91.650 ಗ್ರಾಂ ತೂಕದ ಚಿನ್ನಾಭರಣಗಳನ್ನು ಮರಳಿಸಲು ಸೂಚಿಸಿದೆ- ದೂರುದಾರರಿಗೆ ಪರಿಹಾರ ₹ 30 ಸಾವಿರ, ಪ್ರಕರಣದ ಖರ್ಚು-ವೆಚ್ಚಕ್ಕೆ ₹10 ಸಾವಿರ ಪಾವತಿಸಲು
ಬಡ್ಡಿಯೊಂದಿಗೆ ಸಾಲದ ಮೊತ್ತ ಮರು ಪಾವತಿಸಿದರೂ ಅಡವಿಟ್ಟ ಚಿನ್ನಾಭರಣ ನೀಡದಿದ್ದರೆ, ಚಿನ್ನಾಭರಣದ ತೂಕಕ್ಕೆ ಮಾರುಕಟ್ಟೆ ದರದಲ್ಲಿ ಹಣ ವಾಪಾಸ್ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ ದೂರುದಾರರು ಪಡೆದ ಸಾಲಗಳ ಮೊತ್ತಕ್ಕೆ 2025ರ ಫೆಬ್ರವರಿ 21 ರವರೆಗೆ ಆರ್‌ಬಿಐ ನಿಯಮಾವಳಿಯಂತೆ ಬಡ್ಡಿ ಲೆಕ್ಕಾಚಾರ ಮಾಡಿ ಸಾಲದ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಹಣಕಾಸುದಾರರು ದೂರುದಾರರಿಂದ ಪಡೆದು 91.650 ಗ್ರಾಂ ತೂಕದ ಚಿನ್ನಾಭರಣಗಳನ್ನು ಮರಳಿಸುವಂತೆ ಸೂಚಿಸಿದೆ.
ಈ ತೀರ್ಪನ್ನು ಮುಂದಿನ 45 ದಿನಗಳ ಒಳಗಾಗಿ ಪಾಲಿಸಬೇಕು. ತಪ್ಪಿದಲ್ಲಿ ಆದೇಶದ ಮೊತ್ತವನ್ನು ಪಾವತಿಸುವವರೆಗೆ ವಾರ್ಷಿಕ ಶೇ.6ರ ಬಡ್ಡಿಯನ್ನು ನೀಡುವಂತೆ ಸೂಚಿಸಲಾಗಿದೆ. ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ, ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಇವರು ಈ ಆದೇಶವನ್ನು ನೀಡಿದ್ದು, ಎದುರುದಾರರು ಸೇವಾ ನ್ಯೂನತೆ ಎಸಗಿರುವುದನ್ನು ಪುರಾವೆ ಸಹಿತ ಸಾಬೀತುಪಡಿಸಿದ್ದು, ಗ್ರಾಹಕರಿಗೆ ನ್ಯಾಯ ಒದಗಿಸಿದ್ದಾರೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಐ.ಎಸ್.ತೇಜಸ್ವಿ ವಾದ ಮಂಡಿಸಿದ್ದಾರೆ.