ಮಾನಸೋತ್ಸವ ಸಮಾರಂಭದಲ್ಲಿ ವಿಷಾದ । ಸಮಾಜದಲ್ಲಿ ಶ್ರೀಮಂತಿಕೆಗಾಗಿ ಪೈಪೋಟಿ ಜೋರು । ಕಾನೂನಿನ ಭಯ ಇಲ್ಲಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾನಸ ಕ್ಯಾಂಪಸ್ ನಲ್ಲಿ ಅಯೋಜಿಸಲಾಗಿದ್ದ 3 ದಿನಗಳ ಕಾಲ ನಡೆಯುವ ಮಾನಸೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಪ್ರಾಮಾಣಿಕತೆ ಬಗ್ಗೆ ಮಾತನಾಡಿದರೆ ಅವನೊಬ್ಬ ಹುಚ್ಚ ಎನ್ನುತ್ತಾರೆ. ಮತ್ತಷ್ಟು ಬೇಕೆನ್ನುವ ಆಸೆಯಿಂದಾಗಿ ಸಮಾಜದಲ್ಲಿ ಹಗರಣಗಳಾಗುತ್ತಿವೆ. 1950ರ ದಶಕದಲ್ಲಿ ದೇಶದಲ್ಲಿ ಯೋಧರಿಗೆ ಜೀಪ್ ಪೂರೈಸುವ ಗುತ್ತಿಗೆಯ ಜೀಪ್ ಹಗರಣದಿಂದ 50 ಲಕ್ಷ ರು. ಲೂಟಿಯಾಯಿತು. ಬೋಪೋರ್ಸ್ ಹಗರಣದಲ್ಲೂ ದೇಶಕ್ಕಾದ ನಷ್ಟ 64 ಕೋಟಿ ರು., ಕಾಮನ್‌ವೆಲ್ತ್ ಗೇಮ್ಸ್ ಹಗರಣದಿಂದ 70 ಸಾವಿರ ಕೋಟಿ ರು. ಹಗರಣವಾಯಿತು. 2 ಜಿ ಹಗಣದಿಂದ 16 ಲಕ್ಷದ 76 ಸಾವಿರ ಕೋಟಿ ರು., ಟೊಲ್ ಗೇಟ್‌ನಲ್ಲಿ 1 ಲಕ್ಷದ 86 ಸಾವಿರ ಕೋಟಿ ರು. ಲೂಟಿಯಾಗಿದೆ. ಇದರಿಂದ ಬಡವರಿಗೆ ಅನ್ಯಾಯವಾಯಿತು. ರಾಷ್ಟ್ರ, ರಾಜ್ಯದ ಅಭಿವೖದ್ದಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಸಾಲೂರು ಬೖಹನ್ ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನಸ್ವಾಮಿಜಿ ಮಾತನಾಡಿ, ‘ಪ್ರಸ್ತುತ ಶಿಕ್ಷಣ ಪಡೆಯುವುದು ದೊಡ್ಡದಲ್ಲ, ಸಂಸ್ಕಾರ ಕಲಿಸುವ ಶಿಕ್ಷಣ ಪ್ರಸ್ತುತ ಅಗತ್ಯವಿದ್ದು ಸಂಸ್ಕಾರವಂತ ಶಿಕ್ಷಣ ಕಲಿಸುವಲ್ಲಿ ಮಾನಸ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ತನ್ನದೆ ಆದ ಶಕ್ತಿ ಇದ್ದು ನಿಮ್ಮ ಪ್ರತಿಭೆ ಜೊತೆ ಮೌಲ್ಯಯುತ ಶಿಕ್ಷಣ ಕಲಿತು ಸಾಧಕರಾಗಬೇಕು. ಪಿಯುಸಿ ಶಿಕ್ಷಣ ವಿದ್ಯಾಥಿ೯ ಜೀವನದ ಪ್ರಮುಖ ಘಟ್ಟವಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯನ ಶೀಲರಾಗಬೇಕು’ ಎಂದರು.
ಜಗತ್ತನ್ನು ಬದಲಿಸುವ ಶಕ್ತಿ ಯುವಕರಿಗಿದೆ. ಈ ನಿಟ್ಟಿನಲ್ಲಿ ಬುದ್ಧನ ದಯೆ, ಸಿಂಹದ ಶಕ್ತಿ ಹೊಂದಬೇಕು, ಪ್ರತಿಯೊಬ್ಬರಲ್ಲೂ ಅಪಾರ ಜ್ಞಾನವಿದೆ. ಸಾಧನೆ ಮಾಡಬೇಕೆನ್ನುವ ಛಲವಿದ್ದಲ್ಲಿ ಉನ್ನತ ಸಾಧನೆ ಸಾಧ್ಯ. ಕೌಹಳ, ಗಾಲವ ಮಹರ್ಷಿಗಳ ಜನ್ಮತಾಣ ಹೆಮ್ಮೆಯ ಕೊಳ್ಳೇಗಾಲ. ಇಂತಹ ಪರಿಸರದಲ್ಲಿ ಶುದ್ಧಗಾಳಿ ದೊರಕುತ್ತಿದೆ. ಕವಿ ಸಂತರೂ, ಪುಣ್ಯ ಪುರುಷರು ನಡೆದಾಡಿದ ಪವಿತ್ರ ತಾಣ ಚಾಮರಾಜನಗರ ಜಿಲ್ಲೆ.
ನನ್ನ ಅಧಿಕಾರ ಅವಧಿಯಲ್ಲಿ ಒಂದು ಪೈಸೆ ಲಂಚ ಪಡೆದವನಲ್ಲ, ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ, ಲೋಕಾಯುಕ್ತರಾಗಿದ್ದ ವೇಳೆ ಅನೇಕ ಹಗರಣಗಳನ್ನು ಕಂಡೆ, ಎಲ್ಲಾ ಅನ್ಯಾಯಗಳು ಆಳುವ ಆಡಳಿತ ವ್ಯವಸ್ಥೆಯಿಂದಲೆ ನಡೆಯುತ್ತಿದೆ.ಇದು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪ್ಪು.
ಕೊಳ್ಳೇಗಾದಲ್ಲಿ ಅಯೋಜಿಸಲಾಗಿದ್ದ ಮಾನಸೋತ್ಸವ ಸಮಾರಂಭಕ್ಕೆ ನಿವೖತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಚಾಲನೆ ನೀಡಿದರು.