ಐಐಎಸ್‌ಇಆರ್: ಎಕ್ಸ್‌ಪರ್ಟ್‌ನ ಸಿದ್ದೇಶ್‌ಗೆ ೧೧ನೇ ರ್‍ಯಾಂಕ್

KannadaprabhaNewsNetwork |  
Published : Jun 27, 2025, 12:50 AM ISTUpdated : Jun 27, 2025, 12:51 AM IST
ಧನುಷ್‌ ಎಚ್‌.ಎಲ್‌. | Kannada Prabha

ಸಾರಾಂಶ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಷನ್ ಆಂಡ್ ರಿಸರ್ಚ್ (ಐಐಎಸ್‌ಇಆರ್) ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ ೫೦ ರ್‍ಯಾಂಕ್‌ಗಳಲ್ಲಿ ಮೂರು ರ್‍ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಷನ್ ಆಂಡ್ ರಿಸರ್ಚ್ (ಐಐಎಸ್‌ಇಆರ್) ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ ೫೦ ರ್‍ಯಾಂಕ್‌ಗಳಲ್ಲಿ ಮೂರು ರ್‍ಯಾಂಕ್‌ಗಳನ್ನು ಪಡೆದುಕೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಜನರಲ್ ಕೆಟಗರಿ ವಿಭಾಗದಲ್ಲಿ ೧೧ನೇ ರ್‍ಯಾಂಕ್ ಅನ್ನು ಸಿದ್ದೇಶ್ ಬಿ. ಡಮ್ಮಳ್ಳಿ ಪಡೆದುಕೊಂಡಿದ್ದಾರೆ. ಅದೇ ರೀತಿ ಜನರಲ್ ಕ್ಯಾಟಗರಿಯಲ್ಲಿ ೧೩ನೇ ಹಾಗೂ ಕ್ಯಾಟಗರಿ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಅನ್ನು ಧನುಷ್ ಎಚ್.ಎಲ್. ಪಡೆದುಕೊಂಡಿದ್ದಾರೆ.

ಉಳಿದಂತೆ ವರುಣ್ ಸಿದ್ದಪ್ಪಗೌಡರ್ ೨೮ನೇ ರ್‍ಯಾಂಕ್, ಸಾಯಿಶ್ ಶ್ರವಣ ಪಂಡಿತ್ ೬೬ನೇ ರ್‍ಯಾಂಕ್, ಭುವನೇಶ್ ಎಂ.ವಿ. ೧೫೨ನೇ ರ್‍ಯಾಂಕ್, ಸುಚಿತ್ ಪಿ.ಪ್ರಸಾದ್ ೧೬೭ನೇ ರ್‍ಯಾಂಕ್, ಸ್ನೇಹ ಯರಗಣವಿ ೧೮೯ನೇ ರ್‍ಯಾಂಕ್, ಶ್ರೇಯಾ ಎಸ್. ಪಾಟೀಲ್ ೪೭೪ನೇ ರ್‍ಯಾಂಕ್, ಯಶಸ್ ಯೋಗೀಂದ್ರ ೫೮೫ನೇ ರ್‍ಯಾಂಕ್, ಪೂಜಾ ೬೩೫ನೇ ರ್‍ಯಾಂಕ್, ಎಸ್ ಸಂತೋಷ್ ಚರಣ್ ೮೬೧, ಶುಭಿತ್ ದಂಡಮುಡಿ ೧೩೭೦ನೇ ರ್‍ಯಾಂಕ್, ಶ್ರೇಯಾ ಎಸ್. ೧೪೨೫ನೇ ರ್‍ಯಾಂಕ್, ಶ್ರೇಯಾನ್ ಕೆ. ೨೭೨೫ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗಳನ್ನು ಸಂಯೋಜಿಸಲು ಮತ್ತು ಉತ್ತೇಜಿಸಲು ಭಾರತ ಸರ್ಕಾರ ಬೆಹಾಂಪುರ, ಭೋಪಾಲ್, ಕೋಲ್ಕತ್ತಾ, ಮೊಹಾಲಿ, ಪುಣೆ, ತಿರುವನಂತಪುರಂ ಮತ್ತು ತಿರುಪತಿಗಳಲ್ಲಿ ಐಐಎಸ್‌ಇಆರ್‌ಗಳನ್ನು ಸ್ಥಾಪಿಸಿದೆ. ವಿಜ್ಞಾನ ವಿಷಯದ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆಗಳ ಪ್ರವೇಶಕ್ಕೆ ಈ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ವಿಜ್ಞಾನದಲ್ಲಿ ಸಂಶೋಧನೆಯ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಆವಿಷ್ಕರಿಸುವ ಮತ್ತು ಅನುಷ್ಠಾನಗೊಳಿಸುವ ಮೂಲಕ ರಾಷ್ಟ್ರವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವುದು ಐಐಎಸ್‌ಇಆರ್‌ನ ಒಂದು ಪ್ರಮುಖ ಗುರಿಯಾಗಿದೆ. ಅಲ್ಪಾವಧಿಯಲ್ಲಿಯೇ ಐಐಎಸ್‌ಇಆರ್‌ನ ಹಲವು ಸಂಶೋಧನೆಗಳು ಪ್ರಕಟಗೊಂಡಿದ್ದು, ಪೇಟೆಂಟ್‌ಗಳ ರೂಪದಲ್ಲಿ ಬೌದ್ಧಿಕ ಆಸ್ತಿಯನ್ನು ಸೃಷ್ಟಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ