ಚಿಕ್ಕಮಗಳೂರುಹುಲಿ ಸಂರಕ್ಷಿತ ಭದ್ರಾ ಅಭಯಾರಣ್ಯದಲ್ಲಿ ಕಾನೂನು ಉಲ್ಲಂಘನೆಯ ಚಟುವಟಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ವನ್ಯಜೀವಿ ಸಂರಕ್ಷಣಾ ಕ್ರಿಯಾ ತಂಡ ಆರೋಪಿಸಿದೆ.
ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ: ಆರೋಪ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಹುಲಿ ಸಂರಕ್ಷಿತ ಭದ್ರಾ ಅಭಯಾರಣ್ಯದಲ್ಲಿ ಕಾನೂನು ಉಲ್ಲಂಘನೆಯ ಚಟುವಟಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ವನ್ಯಜೀವಿ ಸಂರಕ್ಷಣಾ ಕ್ರಿಯಾ ತಂಡ ಆರೋಪಿಸಿದೆ. ಭದ್ರಾ ಅಭಯಾರಣ್ಯದ ತಣಿಗೆ ಬೈಲು ವಲಯದಲ್ಲಿ ಅರಣ್ಯೇತರ ಚಟುವಟಿಕೆಗಳು ನಿಯಂತ್ರಣವಿಲ್ಲದೆ ನಡೆಯುತ್ತಿದೆ. ಅಧಿಕಾರಿ ಮತ್ತು ಸಿಬ್ಬಂದಿ ಗಾಢ ನಿದ್ರೆಯಲ್ಲಿದ್ದಾರೊ ಅಥವಾ ಕಂಡೂಕಾಣದಂತೆ ವರ್ತಿಸುತ್ತಿದ್ದಾರೊ ಎಂಬ ಅನುಮಾನ ಕಾಡುತ್ತಿದೆ.ವಿರೂಪಾಕ್ಷಕಾನ್ ಅರಣ್ಯ ಬೇಟೆ ತಡೆ ಶಿಬಿರದಿಂದ ಕೇವಲ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಅಭಯಾರಣ್ಯದೊಳಗೇ ಇರುವ ನೀರಿನ ಝರಿಯಿಂದ ಕಾಫಿತೋಟವೊಂದಕ್ಕೆರಾಜಾರೋಷವಾಗಿ ಪೈಪ್ ಅಳವಡಿಸಿ ನೀರನ್ನು ಪಡೆಯಲಾಗುತ್ತಿದೆ. ಸರಾಗವಾಗಿ ನೀರು ಹರಿಯಲು ಸಂಗ್ರಹಣಾ ತೊಟ್ಟಿಯನ್ನು ನಿರ್ಮಿಸಲಾಗಿದೆ. ನೀರು ಸಾಗಣೆಗೆ ಪೈಪ್ ಅಳವಡಿಸಲು ಮರ ಗಳನ್ನು ಮತ್ತು ಬಿದಿರು ಮೆಳೆಯನ್ನು ಕಡಿಯಲಾಗಿದೆ. ಪೈಪ್ ಅನ್ನು ಸರಾಗವಾಗಿ ಎಳೆಯಲು ಸಣ್ಣ ರಸ್ತೆ ನಿರ್ಮಾಣ ಮಾಡಲಾಗಿದೆಯಲ್ಲದೆ ಮರ ಗಿಡಗಳನ್ನು ಸವರಲಾಗಿದೆ. ಅಭಯಾರಣ್ಯದೊಳಗೆ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ಮಾಡಲಾಗಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಯೇ ಬೆಂಬಲ ನೀಡುತ್ತಿದ್ದಾರೆ ಎಂಬ ದೂರು ಸ್ಥಳೀಯರಿಂದ ಕೇಳಿ ಬರುತ್ತಿದೆ.ಅರಣ್ಯಇಲಾಖೆ ಹಿರಿಯ ಅಧಿಕಾರಿಗಳು ಈ ಕಾನೂನು ಉಲ್ಲಂಘನೆಗೆ ಕಾರಣರಾದ ಇಲಾಖಾ ಸಿಬ್ಬಂದಿ ಮೇಲೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನು ಬಾಹಿರವಾಗಿ ಅಳವಡಿಸಿರುವ ಪೈಪ್ ಹಾಗೂ ಪೂರಕ ಪರಿಕರ ವಶಪಡಿಸಿಕೊಂಡು ಕಾನೂನು ಕ್ರಮಜರುಗಿಸಬೇಕೆಂದು ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ ಹಾಗೂ ಮಾಜಿ ವನ್ಯಜೀವಿ ಪರಿಪಾಲಕ ಶ್ರೀದೇವ್ ಹುಲಿಕೆರೆ ಆಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.