ಬೇಸಿಗೆಯಲ್ಲಿ ಚಿಕ್ಕಮಗಳೂರು ಪ್ರಸಿದ್ಧ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳ।
ಪ್ರವಾಸಿಗರ ನೆಚ್ಚಿನ ತಾಣವಾದ ಕಾಫಿನಾಡು ಚಿಕ್ಕಮಗಳೂರಿನ ಪ್ರಸಿದ್ಧ ಚಂದ್ರದ್ರೋಣ ಪರ್ವತದ ಸಾಲಿನ ರಾಜ್ಯದ ಅತಿ ಎತ್ತರದಲ್ಲಿರುವ ಮುಳ್ಳಯ್ಯನಗಿರಿ ವೀಕ್ಷಣೆಗೆ ಕೇವಲ 3 ಗಂಟೆ ಅವಧಿ ಮಾತ್ರ ನೀಡಿ ನಿಯಮ ಮರು ಜಾರಿಗೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ಶೈಕ್ಷಣಿಕ ವರ್ಷ ಪೂರ್ಣಗೊಂಡಿರುವುದರಿಂದ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದ್ದು, ಇದರಿಂದ ಮುಂದಿನ ಎರಡು ತಿಂಗಳು ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಸಮಸ್ಯೆ ಉಂಟಾಗಲಿದೆ ಎಂಬ ಕಾರಣಕ್ಕೆ ಇದೀಗ ಪ್ರವಾಸೋದ್ಯಮ ಇಲಾಖೆ ಹಾಗೂ ಚಿಕ್ಕಮಗಳೂರು ಜಿಲ್ಲಾಡಳಿತ ಮುಳ್ಳಯ್ಯನ ಗಿರಿ ಸೇರಿದಂತೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹೆಜ್ಜೆ ಇಟ್ಟಿವೆ.ಈ ನಿಟ್ಟಿನಲ್ಲಿ ಇದೀಗ ಮುಳ್ಳಯ್ಯನ ಗಿರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಗರಿಷ್ಠ 3 ಗಂಟೆ ಅವಧಿ ನಿಗದಿ ಪಡಿಸಿದೆ. ಈ ಹಿಂದೆಯೇ ಈ ನಿಯಮ ಇದ್ದರೂ ಜಾರಿಯಾಗಿರಲಿಲ್ಲ. ಇದೀಗ ಕಟ್ಟಿನಿಟ್ಟಾಗಿ ಜಾರಿಗೊಳಿಸುವುದಕ್ಕೆ ನಿರ್ಧರಿಸಿದೆ. ಅಷ್ಟೇ ಅಲ್ಲದೇ, ಗಿರಿಗೆ ಪ್ರವಾಸ ವೇಳೆ ಧೂಮಪಾನ, ಮಧ್ಯಪಾನ, ಮಾದಕ ಪದಾರ್ಥ ಕೊಂಡೊಯ್ಯುವುದು ಮತ್ತು ಸೇವಿಸುವುದು. ಜತೆಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಕಸವನ್ನು ನಿಗದಿ ಪಡಿಸಿದ ಕಸದ ಬುಟ್ಟಿಗಳಿಗೆ ಹಾಕಬೇಕು.
---ಬಾಕ್ಸ್---
ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳನ್ನು ವೀಕ್ಷಣೆಗೆ ಪ್ರವಾಸಿ ತಾಣಗಳಿಗೆ ತೆರಳುವುದಕ್ಕೆ ಕಡ್ಡಾಯವಾಗಿ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳಬೇಕು. ಬುಕ್ಕಿಂಗ್ ಇಲ್ಲವಾದರೆ, ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಬೈಕ್ ಮತ್ತು ಆಟೋಗೆ ₹50, ಕಾರು, ಚೀಪ್‌ಗೆ ₹100 ಕ್ಯಾಂಪರ್, ತೂಫಾನ್ ₹150, ಟೆಂಪೋಗೆ ₹200, ಸ್ಥಳೀಯ ಹಳದಿ ಬಣ್ಣದ ಟ್ಯಾಕ್ಸಿಗೆ ₹100 ದರ ನಿಗದಿ ಪಡಿಸಲಾಗಿದೆ.
ಇತರೆ ಕಡೆಯೂ ನಿಯಮ ಜಾರಿ
ಅದೇ ರೀತಿ ಝರಿ, ಜಲಪಾತಕ್ಕೆ ಕಾಲ್ನಡಿಗೆಯಲ್ಲಿ ತೆರಳಬಹುದಾಗಿದೆ. ಚೀಪ್‌ನಲ್ಲಿ ತೆರಳುವುದಕ್ಕೆ₹800 ದರ ನಿಗದಿ ಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಳವಡಿಕೆಗೆ ಮುಂದಾಗಿರುವ ಫಲಕದಲ್ಲಿ ಸೂಚಿಸಲಾಗಿದೆ.
ಪ್ರವಾಸಿಗರಿಗೆ ಅರಿವು ಮೂಡಿಸುವುದಕ್ಕಾಗಿ ಈ ಹಿಂದೆ ಜಾರಿಯಲ್ಲಿ ಇರುವ ನಿಯಮಗಳನ್ನು ಫಲಕದಲ್ಲಿ ಹಾಕಲಾಗಿದೆ, ಹೊಸದಾಗಿ ಯಾವುದೇ ನಿಯಮ ಹಾಕಿಲ್ಲ.
ಫೋಟೋ: ಮುಳ್ಳಯ್ಯನ ಗಿರಿಯ ಒಂದು ಫೋಟೋ ಸಹ ಬಳಸಿ