ಅಕ್ರಮವಾಗಿ ಮಣ್ಣು ಕಳ್ಳತನ: ಲಾರಿ ವಶಕ್ಕೆ ಪಡೆದು ದಂಡ

KannadaprabhaNewsNetwork |  
Published : Oct 15, 2025, 02:06 AM IST
ಪೋಟೋ 1 : ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮಣ್ಣು ಕಳ್ಳತನ ಮಾಡುತ್ತಿದ್ದ ಲಾರಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವುದು | Kannada Prabha

ಸಾರಾಂಶ

ಅಕ್ರಮವಾಗಿ ಮಣ್ಣು ಕಳ್ಳತನ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಎರಡು ಲಾರಿಗಳನ್ನು ವಶಕ್ಕೆ ಪಡೆದು 74,000 ರು.ಗಳು ದಂಡವನ್ನು ವಿಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಅಕ್ರಮವಾಗಿ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮಣ್ಣು ಕಳ್ಳತನ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಎರಡು ಲಾರಿಗಳನ್ನು ವಶಕ್ಕೆ ಪಡೆದು 74,000 ರು.ಗಳು ದಂಡವನ್ನು ವಿಧಿಸಿದ್ದಾರೆ.

ಇತ್ತೀಚಿಗೆ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಮಣ್ಣು ಸಾಗಾಣೆ ಮಾಡುತ್ತಿರುವ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹೆಚ್ಚು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯಾದ ನರಸಿಂಹಮೂರ್ತಿ ಅವರು ತಮ್ಮ ಸಿಬ್ಬಂದಿ ಜೊತೆ ಸಿಬ್ಬಂದಿಗಳೊಡನೆ ರಾತ್ರಿ ಗಸ್ತು ವೇಳೆಯಲ್ಲಿ ತಪಾಸಣೆ ಮಾಡುವಾಗ ಲಾರಿಗಳು ಮಣ್ಣುಗಳನ್ನು ತುಂಬಿಕೊಂಡು ಚಲಿಸುತ್ತಿದ್ದನ್ನು ಕಂಡು ಪರಿಶೀಲನೆ ನಡೆಸಿದ್ದಾರೆ.ಆ ಸಂದರ್ಭದಲ್ಲಿ ನರಸೀಪುರದ ಕಡೆಯಿಂದ ಮಣ್ಣು ತುಂಬಿಕೊಂಡು ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಬರುತ್ತಿದ್ದ ಕೆಎ-52-ಸಿ-0868 ಹಾಗೂ ಕೆಎ-52-ಬಿ-7849 ಸಂಖ್ಯೆಯ ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡು ತಲಾ 37,000 ರು.ಗಳಂತೆ ಎರಡು ಲಾರಿಗಳಿಗೆ 74,000 ರು.ಗಳನ್ನು ದಂಡ ವಿಧಿಸಿ ದೂರು ದಾಖಲಿಸಿಕೊಂಡಿದ್ದಾರೆ.ಕಣ್ಮುಚ್ಚಿ ಕುಳಿತ ಅಧಿಕಾರಿಗಳು:

ಕೆಐಎಡಿಬಿ ವತಿಯಿಂದ ಅಕ್ರಮಗಳಿಗೆ ಕಡಿವಾಣ ಹಾಕಲು ಸೆಕ್ಯೂರಿಟಿಗಳನ್ನು ನೇಮಕ ಮಾಡಿದ್ದರಾದರೂ ಅಕ್ರಮ ಮಣ್ಣು ಗಣಿಗಾರಿಕೆ ತಡೆಯುವಲ್ಲಿ ವಿಫಲವಾಗಿದ್ದು ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಸೆಕ್ಯೂರಿಟಿಗಳು ಹಾಗೂ ಅಧಿಕಾರಿಗಳು ಈ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆಂದು ಕೈಗಾರಿಕೋದ್ಯಮಿಗಳು ಆರೋಪಿಸುತ್ತಿದ್ದು, ನಾವು ರಾತ್ರಿ ನಮ್ಮ ಸೆಕ್ಯೂರಿಟಿಗಳ ಮುಖೇನ ಹಲವು ಬಾರಿ ಲಾರಿಗಳನ್ನು ಹಿಡಿದು ಒಪ್ಪಿಸಿದ್ದು, ಮಣ್ಣು ದಂದೆಕೋರರಿಂದ ಬೆದರಿಕೆಯ ಜೊತೆಗೆ ಬೈಗುಳಗಳನ್ನು ಕೇಳಬೇಕಾಗುತ್ತದೆ ಎಂದು ತಮ್ಮ ಅಳಲನ್ನು ಸೆಕ್ಯುರಿಟಿಗಳು ತೋಡಿಕೊಂಡರು.ಕೋಟ್ಸೋಂಪುರ ಹೋಬಳಿಯಾದ್ಯಂತ ಸುಮಾರು 4-5 ಸಾವಿರ ಕೈಗಾರಿಕಾ ಪ್ರದೇಶವಿದ್ದು, ಕೆಲವು ಭೂಮಾಫಿಯಾದವರು ಮಣ್ಣನ್ನು ಕಳ್ಳತನ ಮಾಡಿ ಬೇರೆಡೆಗೆ ಮಾರಾಟ ಮಾಡುತ್ತಿರುವ ಬಗ್ಗೆ ನಮ್ಮ ಗಮನಕ್ಕೂ ಬಂದಿದ್ದು, ದಾಳಿ ಮಾಡಿದಾಗ ಸಿಕ್ಕಿ ಬೀಳ್ಳುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಕೆಐಎಡಿಬಿ ಅಧಿಕಾರಿಗಳ ಗಮನಕ್ಕೆ ತಂದು ತಮ್ಮ ಇಲಾಖೆಯಿಂದಲೂ ಕ್ರಮ ವಹಿಸುವಂತೆ ಮನವಿ ಮಾಡಿದ್ದೇವೆ.ನರಸಿಂಹಮೂರ್ತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ನೆಲಮಂಗಲ

ಪೋಟೋ 1 : ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮಣ್ಣು ಕಳ್ಳತನ ಮಾಡುತ್ತಿದ್ದ ಲಾರಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವುದು

PREV

Recommended Stories

ನಿರೀಕ್ಷೆಯಂತೆ ನಡೆಯದ ಸಮೀಕ್ಷೆ: ಬೆಂಗಳೂರು ಮುಖ್ಯ ಆಯುಕ್ತರಿಗೆ ಸಿಎಸ್‌ ಪತ್ರ
ಬೆಂಗಳೂರಲ್ಲಿನ್ನು ವೈದ್ಯಕೀಯ ಪರಿಕರಗಳ ಡ್ರೋನ್‌ ಡೆಲಿವರಿ