ಟಿ. ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಅಶೋಕ (41) ಬಂಧಿತ ಆರೋಪಿ. ಈತನಿಂದ 512 ಕೆ.ಜಿ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ತಾಲೂಕಿನ ತೇರಂಬಳ್ಳಿ-ಗೊಬ್ಬಳಿಪುರ ಗ್ರಾಮದ ಬಳಿ ಪ್ಯಾಸೆಂಜರ್ ಆಟೋದಲ್ಲಿ ಅಕ್ರಮವಾಗಿ 11 ಮೂಟೆಯಲ್ಲಿ ಪಡಿತರ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಮಾಂಬಳ್ಳಿ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಟಿ. ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಅಶೋಕ (41) ಬಂಧಿತ ಆರೋಪಿ. ಈತನಿಂದ 512 ಕೆ.ಜಿ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಆರೋಪಿ ಸರ್ಕಾರ ಜನರಿಗೆ ಉಚಿತವಾಗಿ ನೀಡಿರುವ ಪಡಿತರವನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಆಟೋದಲ್ಲಿ ಟಿ.ನರಸೀಪುರ ಕಡೆಗೆ ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಗರ ಮಾಂಬಳ್ಳಿ ಪೊಲೀಸರು ಮತ್ತು ಆಹಾರ ನಿರೀಕ್ಷಕರು ಜಂಟಿಯಾಗಿ ತೇರಂಬಳ್ಳಿ-ಗೊಬ್ಬಳಿಪುರ ರಸ್ತೆಯಲ್ಲಿ ದಾಳಿ ನಡೆಸಿ ಆರೋಪಿ ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
-------------
6ಕೆಜಿಎಲ್69
ಕೊಳ್ಳೇಗಾಲ ತಾಲೂಕಿನ ಗೊಬ್ಬಳಿಪುರ ಬಳಿ ಅಕ್ಕಿ ಸಾಗಣೆ ಮಾಡುತ್ತಿದ್ದ ಆರೋಪಿ ಸಮೇತ 511ಕೆಜಿ ಅಕ್ಕಿ ವಶಕ್ಕೆ ಪಡೆದಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.