ಬ್ರಹ್ಮಾವರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಅಕ್ರಮ ಮರಳು, ಕಲ್ಲು ಸಾಗಾಟದ ಪ್ರಕರಣಗಳ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ವತಿಯಿಂದ ಬ್ರಹ್ಮಾವರ ತಾಲೂಕಿನ ಟಿಪ್ಪರ್ ಚಾಲಕರು ಮತ್ತು ಮಾಲಕರ ಸಭೆಯನ್ನು ಶುಕ್ರವಾರ ಬ್ರಹ್ಮಾವರ ನಾರಾಯಣ ಗುರು ಕಲಾ ಮಂದಿರದಲ್ಲಿ ಆಯೋಜಿಸಲಾಗಿತ್ತು.ಸಭೆಯಲ್ಲಿ ಬಹ್ಮಾವರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅಶೋಕ ಮಾಳಾಬಾಗಿ, ಮಾಲಕರು ಮತ್ತು ಚಾಲಕರಿಗೆ ತಮ್ಮ ಟಿಪ್ಪರ್ ವಾಹನದಲ್ಲಿ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಬೇಕೆಂದು ಸೂಚಿಸಿದರು.ಎಲ್ಲ ವಾಹನಗಳ ಪೀಟ್ನೆಸ್ ಸರ್ಟಿಫಿಕೇಟ್, ವಾಹನ ವಿಮೆ ಕಡ್ಡಾಯವಾಗಿ ಹೊಂದಿರುವಂತೆ ಹಾಗೂ ವಾಹನವನ್ನು ಅಕ್ರಮ ಚಟುವಟಿಕೆಗೆ ಉಪಯೋಗಿಸದಂತೆ ತಿಳಿವಳಿಕೆ ನೀಡಿದರು.