ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಕ್ಯಾತಘಟ್ಟ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಇತ್ತೀಚೆಗೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನಗಿ ದುಡಿಯುತ್ತಿದ್ದಾಳೆ. ಅದೇ ರೀತಿ ಸ್ವ ಸಹಾಯ ಸಂಘಗಳ ಮೂಲಕ ಅರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಜೀವನೋಪಯ ಕಟ್ಟಡ ಮಹಿಳೆಯರು ಒಗ್ಗೂಡಿ ಎಲ್ಲರು ಒಂದೆಡೆ ಚರ್ಚೆ ನಡೆಸಿ ಸಂಘಗಳ ಅಭಿವೃದ್ಧಿ ಜೊತೆಗೆ ತಾವು ಅರ್ಥಿಕವಾಗಿ ಪ್ರಗತಿ ಸಾಧಿಸಿ ಜೀವನ ಕಟ್ಟಿಕೊಳ್ಳಬೇಕು ಎಂದರು.ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ದುಡಿಯಲು ಹಿಂಜರಿಯಬಾರದು. ನಿಮ್ಮಗಳ ಕಾರ್ಯಕ್ರಮ ಆಯೋಜನೆ ಮಾಡುವ ಬಗ್ಗೆ ಚರ್ಚಿಸಲು ಈ ಕಟ್ಟಡವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸಲು ಹೊರಟ್ಟಿದ್ದೇನೆ. ನಾನು ಯಾವುದನ್ನು ನನ್ನ ವೈಯುಕ್ತಿಕ ಉಪಾಯೋಗಕ್ಕಾಗಲಿ ಮಾಡುತ್ತಿಲ್ಲ. ಯಾವುದೇ, ಏನೇ ಅಡೆ ತಡೆ ಬಂದರೂ ಅಂಜುವ ಅಥವಾ ಹೆದರುವ ಜಾಯಾಮಾನ ನನ್ನದಲ್ಲ ವಿರೋಧಿಗಳಿಗೆ ಮಾರ್ಮೀಕವಾಗಿ ನುಡಿದರು.ಈ ವೇಳೆ ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೇಶ್, ಪಿಡಿಒ ನಾಗೇಶ್, ಗ್ರಾಪಂ ಅಧ್ಯಕ್ಷ ಶಿವನಂಜಪ್ಪ, ಸದಸ್ಯರಾದ ಸುಂದ್ರಮ್ಮ, ಜೀವಿತ, ವೆಂಕಟಲಕ್ಷ್ಮಿ ಸಿದ್ದರಾಜು, ರಾಜೇಶ್, ಪ್ರಕಾಶ್ ಮತ್ತಿತರರು ಇದ್ದರು.ಇಂದು ವಿದ್ಯುತ್ ವ್ಯತ್ಯಯ
ಮಳವಳ್ಳಿ: ನಗರ ಉಪವಿಭಾಗ ವ್ಯಾಪ್ತಿಯ ಮಳವಳ್ಳಿ 66/11 ಕೆವಿ ವಿ.ವಿ.ಕೇಂದ್ರದಲ್ಲಿ 4ನೇ ತ್ರೈಮಾಸಿಕ ಮತ್ತು ಸಿಡಿಹಬ್ಬದ ಪ್ರಯುಕ್ತ 11 ಕೆವಿ ಮಾರ್ಗದ ನಿರ್ವಹಣೆ ಕಾರ್ಯವಿರುವುದರಿಂದ ಜ.23ರಂದು ಬೆಳಗ್ಗೆ 9 ರಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿತರಣಾ ಕೇಂದ್ರ ವ್ಯಾಪ್ತಿಯ ಮಳವಳ್ಳಿ ಪಟ್ಟಣ, ನಿಡಘಟ್ಟ, ಕಂದೇಗಾಲ, ಚೋಳನಹಳ್ಳಿ, ಗಾಜನೂರು, ಗೌಡಗೆರೆ, ಸುಣ್ಣದದೊಡ್ಡಿ, ಕ್ಯಾತೇಗೌಡನದೊಡ್ಡಿ, ಅಂಕನಹಳ್ಳಿ, ಅಂಚೆದೊಡ್ಡಿ, ಅಮೃತೇಶ್ವರನಹಳ್ಳಿ, ಮೊಳೇದೊಡ್ಡಿ, ಅಣ್ಣಹಳ್ಳಿ, ಕಲ್ಲುವೀರನಹಳ್ಳಿ, ಕೆಂಬೂತಗೆರೆ, ಎಂ.ಬಸವನಪುರ, ಟಿ.ಕಾಗೇಪುರ, ತಳಗವಾದಿ, ನೆಲಮಾಕನಹಳ್ಳಿ, ನೆಲ್ಲೂರು, ದೇವಿಪುರ, ಜೆ.ಸಿ.ಪುರ, ಹೊಂಬೇಗೌಡನದೊಡ್ಡಿ, ಕಾಳಕೆಂಪನದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ತಿಳಿಸಿದ್ದಾರೆ.ಜ.26 ರಂದು ರಕ್ತದಾನ ಶಿಬಿರಮಳವಳ್ಳಿ: ತಾಲೂಕಿನ ಕಿರುಗಾವಲು ಪೊಲೀಸ್ ಠಾಣಾ ಆವರಣದಲ್ಲಿ ಜ.26 ರಂದು ಜಿಲ್ಲಾ ಪೊಲೀಸ್ ಮಳವಳ್ಳಿ ಉಪ ವಿಭಾಗ, ಹಲಗೂರು ವೃತ್ತ, ಸರ್ಕಾರಿ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆರಕ್ತದಾನ ಶಿಬಿರ ಆಯೋಜಿಸಲಾಗಿದೆ.
77ನೇ ಗಣರಾಜೋತ್ಸವದ ಅಂಗವಾಗಿ ಅಂದು ಬೆಳಗ್ಗೆ 9ಗಂಟೆಯಿಂದ ಶಿಬಿರ ನಡೆಯಲಿದೆ. ತಾಲೂಕಿನ ಯುವಕ ಮಿತ್ರರು, ಎಲ್ಲ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ಕಿರುಗಾವಲು ಪೊಲೀಸ್ ಠಾಣೆ ಪಿಎಸ್ಐ ಡಿ.ರವಿಕುಮಾರ್ ಮನವಿ ಮಾಡಿದ್ದಾರೆ.