ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸರ್ಕಾರದ ಗ್ಯಾರಂಟಿ ಯೋಜನೆಯ ಸಮಿತಿಯ ಸದಸ್ಯರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ವಿನಾಯಕ ನಗರ, ಗಣೆಶ ನಗರ, ಮಹಾಂತೇಶ ನಗರ, ಮಾರುತಿ ನಗರ, ನೇತಾಜಿ ನಗರ ಸೇರಿದಂತೆ ವಿವಿಧ ಬಡಾವಣೆಯಲ್ಲಿನ ಪ್ರತಿ ಮನೆಮನೆಗೂ ತೆರಳಿ ರಂಗೋಲಿ ಬೀಡಿಸಿ ಗ್ಯಾರಂಟಿ ಯೋಜನೆ ಕುರಿತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಕೇವಲ ಬಡವರಿಗೆ ಹಾಗೂ ದಲಿತರಿಗೆ ಸಿಮೀತವಾದದ್ದಲ್ಲ, ರಾಜ್ಯದಲ್ಲಿನ ಎಲ್ಲ ಸಮುದಾಯದವರಿಗಾಗಿ ರೂಪಿತವಾಗಿರುವುದೇ ಪಂಚ ಗ್ಯಾರಂಟಿ ಯೋಜನೆಯಾಗಿದೆ. ಪ್ರತಿ ಸಮುದಾಯದವರಿಗೂ ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿದೆ ಎಂದರು.ಪಂಚ ಗ್ಯಾರಂಟಿ ಅನುಷ್ಠಾನದ ನಂತರ ಸರ್ಕಾರ ಕೊರತೆ ಇಲ್ಲದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈ ಯೋಜನೆ ಸ್ಫೂರ್ತಿಯಾಗಿದೆ ಮತ್ತು ದೇಶದಲ್ಲಿಯೇ ಕರ್ನಾಟಕದ ತಲಾ ಆದಾಯ ನಂಬರ್ ಒನ್ ಸ್ಥಾನ ಪಡೆದಿದೆ. 5 ವರ್ಷಗಳ ಕಾಲಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ಸರ್ಕಾರ ಕೆಲಸ ನಿರ್ವಹಿಸುತ್ತದೆ. ಎಂದಿಗೂ ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂದರು.ಸಿಂ ಸಿದ್ದರಾಮಯ್ಯನವರ ಹಾಗೂ ಸ್ಥಳೀಯ ಶಾಸಕಕರು ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ನಿರ್ದೇಶನದಂತೆ ಪ್ರತಿ ತಿಂಗಳು ಒಂದೊಂದು ಪಟ್ಟಣ ಗ್ರಾಮ ಎಂಬುವಂತೆ ಜನ ಸಾಮಾನ್ಯರ ಗ್ಯಾರಂಟಿ ಸಮಸ್ಯೆ, ಶಿಕ್ಷಣ, ಆರೋಗ್ಯ ಹಾಗೂ ಇತರ ಸಮಸ್ಯೆಗಳನ್ನು ಆಲಿಸಲು ಪಂಚಾಯತಿ ಮಟ್ಟದಲ್ಲಿ ಜನ ಸ್ಪಂದನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟದಲ್ಲಿ ಏನಾದರೂ ಅಭಿವೃದ್ಧಿ ಕಾಣಬೇಕಾದರೇ ಬಡವರ ಬಾಳು ಹಸನಾಗಬೇಕೆಂದರೇ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರ ಮಹತ್ವವಾದದ್ದು. ಈ ಹಿಂದೆ ಉಳುವವನಿಗೆ ಭೂಮಿ ನೀಡುವುದು, ಪಡಿತರ ವೇತನ, ವೃದ್ಧಾಪ್ಯವೇತನ, ರೈತರಿಗಾಗಿ ಕರೆಂಟ್ ಸೌಲಭ್ಯ, ಅನ್ನಭಾಗ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ ಹೀಗೆ ಹತ್ತು ಹಲವು ಸೌಲಭ್ಯ ಮತ್ತು ಯೋಜನೆಗಳನ್ನು ರಾಜ್ಯಕ್ಕೆ ಸರ್ಕಾರ ಕೊಡುಗೆಯಾಗಿ ನೀಡಿದೆ ಎಂದರು.ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಯಲ್ಲಿ 4 ಗ್ಯಾರಂಟಿಗಳು ಮಹಿಳೆಯರ ಪರವಾಗಿವೆ. ಸದ್ಯ ಈ ಗ್ಯಾರಂಟಿ ಯೋಜನೆ ನಿಲ್ಲಬೇಕು ಎಂಬ ವಿರೋಧ ಪಕ್ಷದವರ ಮಾತಿಗೆ ನೀವು ಎಲ್ಲ ಮಹಿಳೆಯರು ಕಾಂಗ್ರೆಸ್ ಸರ್ಕಾರದ ಹಾಗೂ ಯೋಜನೆಯ ಧ್ವನಿಯಾಗಬೇಕು ಎಂದರಲ್ಲದೇ. ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಫಲಾನುಭವಿಗಳಿಗೆಇದುವರೆಗೆ ₹57,500 ಸಾವಿರ ಕೋಟಿ ಹಣವನ್ನು ಸರ್ಕಾರ ನೀಡಿದೆ. ಗೃಹಜ್ಯೋತಿ. ಶಕ್ತಿ ಯೋಜನೆಯ ಕೋಟ್ಯಾನು ಜನ ಮಹಿಳೆಯರು ಟಿಕೆಟ್ ಪಡೆದು ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ, ಯುವನಿಧಿ ಯೋಜನೆ ಹೀಗೇ ಈ ಪಂಚ ಗ್ಯಾರಂಟಿ ಯೋಜನೆ ಬಡ ಜನರ ಬದುಕಿಗೆ ಆಶ್ರಯವಾಗಿದೆ ಎಂದರು.ಈ ವೇಳೆ ಲಕ್ಷ್ಮಣ ಲಮಾಣಿ, ಬುಡ್ಡೇಸಾ ಚಪ್ಪರಬಂದ, ಸಂಗಮೇಶ ಚಲವಾದಿ, ಸುಜಾತಾ ಶಿಂಧೆ, ಭಾಗ್ಯಾಶ್ರೀ ಪಾಟೀಲ, ಲಲೀತಾ ಇಲಕಲ್ಲ, ಸಂಗಣ್ಣ ಮೇಲಿಮನಿ, ಪ್ರೀತಿ ದೇಗಿನಾಳ ಸೇರಿದಂತೆ ಹಲವರು ಇದ್ದರು.