ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಛಾಪು: ಎ. ಬಾಬು ನಾಯ್ಕ

KannadaprabhaNewsNetwork |  
Published : Jan 08, 2025, 12:18 AM IST
ಫೊಟೊಪೈಲ್- ೭ಎಸ್ಡಿಪಿ೩- ಸಿದ್ದಾಪುರದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ, ತಾಲೂಕಿನ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಮತ್ತು ಸಮಾವೇಶದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಜ್ಞಾನವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಸಾಮಾಜಿಕ ಆರ್ಥಿಕ, ಶೈಕ್ಷಣಿಕವಾಗಿ ಮಾಹಿತಿ ನೀಡುಲಾಗುತ್ತಿದೆ.

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ತಾಲೂಕಿನ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಸಹಯೋಗದಲ್ಲಿ ಪಟ್ಟಣದ ಶಂಕರಮಠದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ಯೋಜನೆಯ ಶಿರಸಿ ಜಿಲ್ಲೆ ನಿರ್ದೇಶಕ ಎ. ಬಾಬು ನಾಯ್ಕ ಮಾತನಾಡಿ, ಜ್ಞಾನವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಸಾಮಾಜಿಕ ಆರ್ಥಿಕ, ಶೈಕ್ಷಣಿಕವಾಗಿ ಮಾಹಿತಿ ನೀಡುಲಾಗುತ್ತಿದೆ. ಎಲ್ಲ ರಂಗದಲ್ಲಿಯೂ ಮಹಿಳೆಯರು ಗುರುತಿಸಿಕೊಳ್ಳುವಂಥ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿ, ಶಿಕ್ಷಕಿ ವಿನೋದಾ ಪಿ, ಭಟ್ ಮಾತನಾಡಿ, ಕಲಿಯುತ್ತ, ಕಲಿಸುತ್ತ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವವಳು ಹೆಣ್ಣು. ಇವತ್ತು ಜಗತ್ತಿನ ನಾನಾ ಭಾಗದಲ್ಲಿ, ಬೇರೆ ಬೇರೆ ರಂಗದಲ್ಲಿ ಮಹಿಳೆ ಮಿಂಚುತ್ತಿರುವುದು ಸಂತೋಷದ ವಿಷಯ. ಕೌಟುಂಬಿಕ ಸಾಮರಸ್ಯ ಜೀವನದಲ್ಲಿ ಮಹಿಳೆಯ ಪಾತ್ರ ಮುಖ್ಯ ಎಂದರು. ಎಎಸ್ಐ ಸಂಗೀತಾ ಜಿ. ಕಾನಡೆ ಮಾತನಾಡಿ, ಒಂದು ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಮಹಿಳೆಯ ಪಾತ್ರ ಬಹಳ ಮುಖ್ಯ ಎಂದರು.ಜಿಪಂ ಮಾಜಿ ಸದಸ್ಯೆ ಸುಮಂಗಲಾ ವಸಂತ ನಾಯ್ಕ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಲಕ್ಷ್ಮಿರಾಜು, ಉಪಸ್ಥಿತರಿದ್ದರು. ಪೌರಕಾರ್ಮಿಕರಾದ ಮಮತಾ ನಾಯ್ಕ, ಆಶಾ ಕಾರ್ಯಕರ್ತೆ ಮೇರಿ ಫರ್ನಾಂಡಿಸ್, ಕೃಷಿಕರಾದ ಮಧುಮತಿ ಶಿರಳಗಿ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಯೋಜನಾಧಿಕಾರಿ ಗಿರೀಶ್ ಜಿ.ಪಿ. ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಜ್ಞಾನವಿಕಾಸದ ಸಮನ್ವಯಾಧಿಕಾರಿ ಲಲಿತಾ ವರದಿ ಮಂಡಿಸಿದರು. ಕೃಷಿ ಮೇಲ್ವಿಚಾರಕ ಮಹಾದೇವ ಬಿ., ಜ್ಞಾನವಿಜ್ಞಾನ ಸಮನ್ವಯ ಅಧಿಕಾರಿ ಲಲಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಮೇಲ್ವಿಚಾರಕಿ ನಾಗರತ್ನ ವಂದಿಸಿದರು. 12ರಂದು ಪ್ರೊ. ಕೆ.ವಿ. ನಾಯಕ ಅಭಿನಂದನಾ ಗ್ರಂಥ ಬಿಡುಗಡೆ

ಅಂಕೋಲಾ: ಪ್ರೊ. ಕೆ.ವಿ. ನಾಯಕ ಅವರಿಗೆ 80 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಪ್ರೊ. ಕೆ.ವಿ. ನಾಯಕ ಅಭಿನಂದನಾ ಸಮಿತಿಯ ಅಧ್ಯಕ್ಷ ಪತ್ರಕರ್ತ ವಿಠ್ಠಲದಾಸ ಕಾಮತ್ ತಿಳಿಸಿದರು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಜ. 12ರಂದು ಬೆಳಗ್ಗೆ 10.30 ಗಂಟೆಗೆ ಶೆಟಗೇರಿಯ ವಾಸುದೇವ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.

ಕೆ.ವಿ. ನಾಯಕ ಅವರು ಹಲವಾರು ಜನರಿಗೆ ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ವಿವಿಧ ಉದ್ದೇಶಗಳಿಗೆ ಆರ್ಥಿಕವಾಗಿ ಸಹಾಯ ಸಹಕಾರ ನೀಡುತ್ತಾ ಬಂದಿದ್ದು, ಅವರು ಯಾವಾಗಲೂ ಸನ್ಮಾನ, ಅಭಿನಂದನೆಗಳಿಂದ ದೂರವಿದ್ದರೂ ಅವರ ಮೇಲಿನ ಅಭಿಮಾನದಿಂದ ಅಭಿನಂದನಾ ಸಮಿತಿಯಿಂದ ಅವರ ಒಪ್ಪಿಗೆ ಪಡೆದು ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಉಪನ್ಯಾಸಕ ಮಹೇಶ ನಾಯಕ, ಪತ್ರಕರ್ತ ಮಾರುತಿ ಹರಿಕಂತ್ರ, ಶಿಕ್ಷಕ ರಾಜೇಶ ನಾಯಕ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಅಭಿನಂದನಾ ಗ್ರಂಥ ಸುಮಾರು 52 ಲೇಖನವನ್ನು ಒಳಗೊಂಡಿದೆ ಎಂದರು.

ಸಮಾರಂಭವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿ, ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ದಿನಕರ ಶೆಟ್ಟಿ ಮತ್ತು ಪ್ರೊ. ಕೆ.ವಿ. ನಾಯಕ ಅವರ ಒಡನಾಡಿ ಶೆಟಗೇರಿ ಮೂಲದ ಮುಂಬೈ ನಿವಾಸಿ ಎಂ.ಎಚ್. ನಾಯಕ ಪಾಲ್ಗೊಳ್ಳಲಿದ್ದಾರೆ ಎಂದರು.ಅಭಿನಂದನಾ ಸಮಿತಿಯ ಕಾರ್ಯದರ್ಶಿ ಮಹೇಶ ನಾಯಕ, ಉಪಾಧ್ಯಕ್ಷ ರವೀಂದ್ರ ಕೇಣಿ ಮತ್ತು ಸುಭಾಷ ಕಾರೇಬೈಲ್, ಸದಸ್ಯರಾದ ವಿನಾಯಕ ಹೆಗಡೆ, ಪ್ರಭಾಕರ ಬಂಟ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಾಪ ಸಿಬ್ಬಂದಿಗಿಲ್ಲ 3 ತಿಂಗಳ ವೇತನ
ಜೆಡಿಎಸ್‌ ಹಾಸನ ಸಮಾವೇಶಕ್ಕೆ ಆಹ್ವಾನವಿಲ್ಲ : ಜಿ.ಟಿ.ದೇವೇಗೌಡ