ಕನ್ನಡಪ್ರಭ ವಾರ್ತೆ ಗುಬ್ಬಿ
ಯಾವರಾಜಕಾರಣಿಯಾಗಲಿ, ಅಧಿಕಾರಿಗಳಾಗಲಿ ತಪ್ಪು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಲೇಬೇಕು. ಮೊದಲು ವಿನಯ್ ಕುಲಕರ್ಣಿ ಅವರ ಕೇಸು ಜಮೀನು ವಿಚಾರ ಎಂದು ಸಾಬೀತಾಗಿತ್ತು. ನಂತರ ಸಿಬಿಐ ತನಿಖೆಗೆ ಕೊಟ್ಟಾಗ ಇದು ರಾಜಕೀಯ ಪಿತೂರಿನ ಏನೂ ಗೊತ್ತಿಲ್ಲ, ಈಗ ಬೇರೆ ತಿರುವು ಪಡೆದುಕೊಂಡಿದೆ, 2004 ರಲ್ಲಿ ನಾನು ಹಾಗೂ ವಿನಯ್ ಕುಲಕರ್ಣಿ ಒಂದೇ ಬಾರಿಗೆ ಪಕ್ಷೇತರ ಅಭ್ಯರ್ಥಿ ಶಾಸಕರಾಗಿ ರಾಜಕೀಯಕ್ಕೆ ಬಂದಿದ್ದು, ಅವರು ನನಗೆ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಸಮಾಜದ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡುವವರು ಸಮಾಜಮುಖಿ ಕೆಲಸ ಮಾಡಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ನಮ್ಮನ್ನು ಆರಿಸಿ ಕಳಿಸಿದ್ದಾರೆ. ಅವರಿಗೆ ಇಷ್ಟ ಬಂದವರಿಗೆ ಮತ ನೀಡುವ ಹಕ್ಕು ಸಂವಿಧಾನದಲ್ಲಿದೆ. ವಿರೋಧ ಮಾಡಿದವರನ್ನು ಕೊಲೆ ಮಾಡಿದರೆ ನಾವು ಎಷ್ಟು ಜನರನ್ನು ಕೊಲೆ ಮಾಡಬೇಕಾಗುತ್ತದೆ. ದ್ವೇಷ ಮಾಡಿಕೊಂಡು ಹೊದರೆ ನಾವು ಶಿಕ್ಷೆಯನ್ನು ಕಾನೂನು ಪ್ರಕಾರ ಅನುಭವಿಸಬೇಕಾಗುತ್ತದೆ ಎಂದರುಹಿಂದೆ ಕಾಂಗ್ರೆಸ್ ಸರ್ಕಾರ ಮಹಿಳಾ ಮೀಸಲಾತಿಗೆ ಕರಡು ರಚಿಸಿದ್ದು ಅದರಂತೆ ಈಗಲೂ ಜಾರಿ ಮಾಡಿದರೆ ಅದಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದರು. ಬಿಜೆಪಿ ಸರ್ಕಾರ ರಾಜಕೀಯ ಉದ್ದೇಶ ಇಟ್ಟುಕೊಂಡು ಪ್ರಾಂತ್ಯ ವಿಂಗಡನೆ ಮಾಡುವಲ್ಲಿ ಹೊರಟಿದೆ. ರಾಜಸ್ಥಾನ, ಗುಜರಾತ್ ಕಡೆ ಹೆಚ್ಚಿನ ಜನಸಂಖ್ಯೆ ಇದೆ. ಆಭಾಗಕ್ಕೆ ಹೆಚ್ಚು ಸೀಟುಗಳನ್ನು ಕೊಡಬೇಕಾಗುತ್ತದೆ. ದಕ್ಷಿಣ ರಾಜ್ಯದಲ್ಲಿ ನಾವು ಕುಟುಂಬ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರಿಂದ ಇಲ್ಲಿ ಜನಸಂಖ್ಯೆ ಕಡಿಮೆ ಇದೆ. ಆದ್ದರಿಂದ ಈ ಭಾಗದಲ್ಲಿ ಇರುವವರಿಗಿಂತ ಇನ್ನೂ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಲ್ಲೂರು ಸುರೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಧರ್ಮಪ್ಪ, ದಾಸಪ್ಪ, ಸುರೇಶ್, ಗುತ್ತಿಗೆದಾರ ರಮೇಶ್, ಪಾಂಡಣ್ಣ ಭೋಜಣ್ಣ ವೆಂಕಟೇಶ್ ಗೌಡ್ರು , ವೆಂಕಟೇಶ್, ಭಾನು, ಪಾತಯ್ಯ, ರಾಮಣ್ಣ, ಜುಂಜೇಗೌಡ , ಹಳೇಗುಬ್ಬಿ ರಂಗಸ್ವಾಮಿ, ನಾಗಣ್ಣ, ಸತ್ತಿಗಪ್ಪ,, ಬಸವರಾಜು, ಬೀರೇಶ್, ದಿವಾಕರ್, ಟಿಎಚ್ಒ ಡಾ.ಬಿಂದು ಮಾಧವ್, ಪಿಡಿಒ ಮಂಜುಳಪಾಟಿಲ್, ಗುತ್ತಿಗೆದಾರ ಮಹದೇವಣ್ಣ, ಇಂಜಿನಿಯರ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಶಾಸಕರ ಅಭಿಮಾನಿಗಳು ಇತರರು ಇದ್ದರು.