ರಾಮನಗರ: ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ರಕ್ಷಣೆಯಲ್ಲಿ ಕನ್ನಡ ಪರ ಹೋರಾಟಗಾರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶಾಸಕ ಇಕ್ಬಾಲ್‌ಹುಸೇನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತಿಚಿನ ದಿನಗಳಲ್ಲಿ ಅನ್ಯ ಭಾಷಿಗರ ಹಾವಳಿಯ ಸುಳಿಯಲ್ಲಿ ನಮ್ಮ ಭಾಷೆ ಸಿಲುಕಿದೆಯೇನೋ ಎನ್ನುವಂತಾಗಿದೆ. ಇಂತಹ ಸಮಯದಲ್ಲಿ ಹಲವು ಕನ್ನಡಪರ ಸಂಘಟನೆಗಳು ತಮ್ಮ ಜವಾಬ್ದಾರಿ ಅರಿತು ರಾಮನಗರದಲ್ಲಿ ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ, ವಿವಿಧ ಕ್ಷೇತ್ರದ ಸಾಧಕರಿಗೆ ಕದಂಬ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ಕನ್ನಡದ ಜಾಗೃತಿಗೊಳಿಸುತ್ತಿದೆ ಎಂದು ಹೇಳಿದರು.
ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಮಾತನಾಡಿ, ಕಳೆದ 25 ವರ್ಷಗಳಿಂದ ರಾಜ್ಯಾದ್ಯಂತ ಹೋರಾಟ ಮಾಡಿಕೊಂಡು ಬಂದಿದ್ದು ನಾಡ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರು ದಕ್ಷಿಣ ಜಿಲ್ಲೆ ಅಭಿವೃದ್ಧಿ ಕಾಣುತ್ತಿದ್ದು, ಹೆಚ್ಚು ಕಾರ್ಖಾನೆಗಳು ತಲೆ ಎತ್ತುತ್ತಿವೆ. ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಬೇಕು ಎಂದು ಹೇಳಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಕನ್ನಡ ನೆಲದಲ್ಲಿ ಹುಟ್ಟಿದ ಎಲ್ಲರಲ್ಲೂ ಕನ್ನಡದ ಬಗ್ಗೆ ಅಭಿಮಾನ ಇರಬೇಕು. ಕನ್ನಡ ಬಾವುಟದ ಶಕ್ತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಸಂತೋಷ್, ಮಂಜು, ಟಿ.ಜಿ.ವೆಂಕಟೇಶ್, ಪ್ರಸಾದ್, ಮಲ್ಲೇಶ್, ವಿಷಕಂಠಯ್ಯ, ಶಿವಹೊಂಬಯ್ಯ, ಮುನಿಯಪ್ಪ, ಸುಮಂಗಳ, ಅಂಕನಹಳ್ಳಿಶಿವಣ್ಣ, ನಾಗೇಶ್, ಪಿ.ಎಸ್.ದಿಗಂತ್‌ಗೌಡ, ಬಿ.ವಿ.ಸೂರ್ಯಪ್ರಕಾಶ್, ಪ್ರವೀಣ್, ಶಶಿಕುಮಾರ್, ಸುಶೀಲಮ್ಮ, ಶಾನ್ವಿಸತೀಶ್, ಮಲ್ಲೇಶ್, ವಾರುಣಿ ಅವರು ಗಳಿಗೆ ಕದಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಚಲನಚಿತ್ರ ನಿರ್ಮಾಪಕ ಉಮಾಪತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್‌ದೇವು, ನಿರ್ದೇಶಕ ಯರೇಹಳ್ಳಿಮಂಜು, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಿವೃತ್ತ ತಹಸೀಲ್ದಾರ್ ಶಿವಣ್ಣ, ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ ಜಿಲ್ಲಾಧ್ಯಕ್ಷ ಕಿರಣ್‌ಗೌಡ, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶಿವಕುಮಾರ್, ಗೌರವಾಧ್ಯಕ್ಷ ರಾಜುಚನ್ನಮಾನಹಳ್ಳಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಸವರಾಜ್‌ಹವಲ್ದಾರ್, ತಾಲ್ಲೂಕು ಗೌರವಾಧ್ಯಕ್ಷ ಸಿದ್ದೇಗೌಡ, ಸಂಘಟನೆಯ ಅಧ್ಯಕ್ಷರುಗಳಾದ ರಾಜು ಎಂಎನ್‌ಆರ್, ಜಗದೀಶ್‌ಐಜೂರು, ಗಿರೀಶ್, ಕನ್ನಡಮಂಜು ಸೇರಿದಂತೆ ವಿವಿಧ ಘಟಕದ ಪದಾಧಿಕಾರಿ ಗಳಾದ ಬೆಟ್ಟೇಗೌಡ, ಅದ್ದೂರಿಲಿಂಗೇಶ್, ಸ್ವಾಮಿ, ವಾಸು, ಸಿದ್ದರಾಮು, ವೆಂಕಟೇಶ್‌ಮೂರ್ತಿ, ರಮೇಶ್, ಮನು, ಅಶ್ವಥ್ ಉಪಸ್ಥಿತರಿದ್ದರು.
ಕೋಟ್ .............ಕಟ್ಟಕಡೆಯ ಜನರಿಗೂ ಕನ್ನಡದಲ್ಲಿ ಗುಣಮಟ್ಟದ ಶಿಕ್ಷಣ, ಉದ್ಯೋಗ ಮತ್ತು ಬದುಕನ್ನು ಕೊಡಲು ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಕನ್ನಡಪರ ಸಂಘಟನೆಗಳ ಕೂಗು ಸಾತ್ವಿಕ ಅಂತ್ಯ ಕಾಣಲಿವೆ. ಪಕ್ಷ, ಜಾತಿ, ಬದಿಗಿಟ್ಟು ಸಮಸಮಾಜದ ವಿಶ್ವಾಸಾರ್ಹ ಸಂಘಟನೆ ಕಟ್ಟಿದ್ದೇವೆ.
-ಪಿ.ಕೃಷ್ಣೇಗೌಡ, ರಾಜ್ಯಾಧ್ಯಕ್ಷರು, ಕರವೇ ಸ್ವಾಭಿಮಾನಿ ಬಣ22ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಶಾಸಕ ಇಕ್ಬಾಲ್ ಹುಸೇನ್ ಸನ್ಮಾನಿಸಿದರು.