ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಸ್ವರ್ಣವಲ್ಲೀಯಲ್ಲಿ ೨೪ ಗಂಟೆ ಶ್ರೀರಾಮ ಭಕ್ತಿ ಜಾಗರಣ

KannadaprabhaNewsNetwork |  
Published : Jan 20, 2024, 02:04 AM IST
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ  | Kannada Prabha

ಸಾರಾಂಶ

ಅಯೋಧ್ಯಾದಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾ ಮಹೋತ್ಸವದ ಹಿನ್ನಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಇಡೀ ದಿನ ಶ್ರೀರಾಮ ಭಕ್ತಿ ಜಾಗರಣ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.

ಶಿರಸಿ:

ಅಯೋಧ್ಯಾದಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾ ಮಹೋತ್ಸವದ ಹಿನ್ನಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಇಡೀ ದಿನ ಶ್ರೀರಾಮ ಭಕ್ತಿ ಜಾಗರಣ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ.

ಜ. ೨೨ರ ಬೆಳಗ್ಗೆ ೬ರಿಂದ ಜ. ೨೩ರ ಬೆಳಗ್ಗೆ ೬ರ ತನಕ ನಿರಂತರ ಭಜನೆ, ತಾಳಮದ್ದಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಈ ಶ್ರೀರಾಮ ಭಕ್ತಿ ಜಾಗರಣ ಕಾರ್ಯಕ್ರಮ ನಡೆಯಲಿದೆ. ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಬಳಿಕ ಅಂದು ಬೆಳಗ್ಗೆಯಿಂದ ರಾತ್ರಿ ೯ರ ತನಕ ಅಖಂಡ ಭಜನೆ ಹಾಗೂ ರಾತ್ರಿ ೯ರಿಂದ ಬೆಳಗ್ಗೆ ೬ರ ತನಕ ತಾಳಮದ್ದಲೆ ನಡೆಯಲಿದೆ. ಜಿಲ್ಲೆ, ಹೊರ ಜಿಲ್ಲೆ, ಶಿಷ್ಯ ಕಲಾವಿದರೂ ಸೇರಿ ನೂರಕ್ಕೂ ಅಧಿಕ ಕಲಾವಿದರು, ಆಸಕ್ತರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅಂದು ಬೆಳಗ್ಗೆ ೬ರಿಂದ ರಾಘಮಿತ್ರ ಪ್ರತಿಷ್ಠಾನ, ೭ರಿಂದ ಮಿತ್ರಾ ಮ್ಯೂಸಿಕಲ್ಸ, ೮ರಿಂದ ಹುಳಗೋಳ ಯುವಕ, ಯುವತಿ ಮಂಡಳಿ, ೯ರಿಂದ ಮೋಗದ್ದೆ ಸೋಮೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಬೆಳಗ್ಗೆ ೧೦ರಿಂದ ಇನ್ನರ್ ವೀಲ್ ಕ್ಲಬ್‌, ೧೧ರಿಂದ ಝೇಂಕಾರ ಭಜನಾ ಮಂಡಳಿ ಉಂಚಳ್ಳಿ ಹಾಗೂ ಮಧ್ಯಾಹ್ನ ೧೨ರಿಂದ ಮಾತೃವೃಂದ ಸೋಂದಾದಿಂದ ಭಜನೆ ನಡೆಯಲಿದೆ. ಮಧ್ಯಾಹ್ನ ೨ರಿಂದ ಉಮಾಮಹೇಶ್ವರ ಮಹಿಳಾ ಮಂಡಳಿ ನಾಡಿಗಗಲ್ಲಿ, ೩ರಿಂದ ಗೋಪಿನಮರಿ ಶ್ರೀಮಾತಾ ಮಹಿಳಾ ಸಂಘ, ಸಂಜೆ ೪ರಿಂದ ಲಯನೆಸ್ ಕ್ಲಬ್‌, ೫ಕ್ಕೆ ವಿಶ್ವಭಾರತಿ ಭಜನಾ ಮಂಡಳಿ ಸಂಗಡಿಗರು, ೬ಕ್ಕೆ ಶ್ರೀರಾಜಾರೇಜಶ್ವರಿ ಮಹಿಳಾ ಮಂಡಳಿ ಹಾಗೂ ರಾತ್ರಿ ೭.೩೦ರಿಂದ ರಾಜರಾಜೇಶ್ವರಿ ಯುವಕ ಮಂಡಳಿಯಿಂದ ಭಜನೆ ನಡೆಯಲಿದೆ.ಹಾರ್ಮೋನಿಯಂದಲ್ಲಿ ಪ್ರಕಾಶ ಹೆಗಡೆ ಯಡಹಳ್ಳಿ, ಮಹೇಶ ಭಟ್ಟ ದಾಯಿಮನೆ, ಪ್ರದೀಪ ಭಟ್ಟ ಸಂಪೇಸರ, ತಬಲಾದಲ್ಲಿ ಆನಂದ ಭಟ್ಟ, ಕಿರಣ ಕಾನಗೋಡು, ಕೆ.ಟಿ.ಭಟ್ಟ ಎಪ್ಡಿಮಠ, ವೆಂಕಟ್ರಮಣ ಹೆಗಡೆ ವಾಜಗದ್ದೆ ಭಾಗವಹಿಸುವರು. ಸ್ವರ್ಣವಲ್ಲೀ ಯಕ್ಷ ಶಾಲ್ಮಲಾದ ನೇತೃತ್ವದಲ್ಲಿ ರಾತ್ರಿ ೯ರಿಂದ ಬೆಳಗ್ಗೆ ೬ರ ತನಕ ಸರಣಿ ತಾಳಮದ್ದಲೆ ಶ್ರೀರಾಮನ ಆಧರಿಸಿ ನಡೆಯಲಿದ್ದು, ಗಣಪತಿ ಭಟ್ಟ ಮೊಟ್ಟೆಗದ್ದೆ, ಸತೀಶ ದಂಟಕಲ್, ಅನಂತ ದಂತಳಿಕೆ, ನರಸಿಂಹ ಭಟ್ಟ ಹಂಡ್ರಮನೆ, ಶ್ರೀಪತಿ ಕಂಚಿಮನೆ, ಕೃಷ್ಣ ಹೆಗಡೆ ಜೋಗಿನಮನೆ, ವಿಘ್ನೇಶ್ವರ ಕೆಸರಕೊಪ್ಪ, ಪ್ರಶಾಂತ ಕೈಗಡಿ ಇತರರು ಹಿಮ್ಮೇಳದಲ್ಲಿ ಸಹಕಾರ ನೀಡಲಿದ್ದಾರೆ. ಅರ್ಥಧಾರಿಗಳಾಗಿ ಎಂ.ಎನ್. ಹೆಗಡೆ ಹಲವಳ್ಳಿ, ಆರ್.ಎಸ್. ಹೆಗಡೆ ಭೈರುಂಬೆ, ನರಸಿಂಹ ಭಟ್ಟ, ಡಿ.ಕೆ. ಗಾಂವಕರ, ಬಾಲಚಂದ್ರ ಭಟ್ಟ ಕರಸುಳ್ಳಿ, ಮಹೇಶ ಭಟ್ಟ, ಕರುಣಾಕರ ಹೆಗಡೆ, ಮಂಜುನಾಥ ಗೊರಮನೆ, ಗಣಪತಿ ಗುಂಜಗೋಡ, ಸುಬ್ರಾಯ ಕೆರೆಕೊಪ್ಪ., ಜಿ.ಜಿ. ಹೆಗಡ, ಪದ್ಮನಾಭ ಅರೆಕಟ್ಟ, ಶ್ರೀನಿವಾಸ ಮತ್ತಿಘಟ್ಟ, ಭಾಸ್ಕರ ಗಾಂವಕರ್, ಶ್ರೀಪಾದ ಭಟ್ಟ, ಸದಾಶಿವ ಮಲವಳ್ಳಿ, ಪ್ರವೀಣ ಹೆಗಡೆ ಮನ್ಮನೆ ಹಾಗೂ ಇತರರು ಭಾಗವಹಿಸುವರು ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!