ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಸದಾಶಿವ ರಾವ್ ಅವರು ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ತಾವು ಕಲಿಯುವ ವಿದ್ಯಾ ಸಂಸ್ಥೆ ಮತ್ತು ಕಲಿಯುತ್ತಿರುವ ವಿಷಯವನ್ನು ಪ್ರೀತಿಸಬೇಕು, ಅಧ್ಯಾಪಕರು ಮಾಡುವ ಪಾಠವನು ಗಮನವಿಟ್ಟು ಆಲಿಸಬೇಕು, ಇದರಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಮುಖ್ಯ ಅತಿಥಿಯಾಗಿದ್ದ ಗಿನ್ನಿಸ್ ದಾಖಲೆಯ ಅಂಚೆಚೀಟಿ ಸಂಗ್ರಾಹಕ ಡೇನಿಯಲ್ ಮೊಂತೆರೊ ಮಾತನಾಡಿ, ಜೀವನದಲ್ಲಿ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಂಡು ಸಮರ್‍ಪಣಾಭಾವದಿಂದ ಕೆಲಸ ಮಾಡಿದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬ ಮಾತನ್ನು ಉದಾಹರಣೆಯ ಮೂಲಕ ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ವಹಿಸಿದ್ದರು. ಸಂಘದ ಸಂಚಾಲಕ ಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ವಿವರಿಸಿದರು.