20ರಂದು ಇಂಡಿಯನ್‌ ಸೌಹಾರ್ದ ಸೌಧ ಉದ್ಘಾಟನೆ

KannadaprabhaNewsNetwork |  
Published : Apr 17, 2026, 01:45 AM IST
16 HRR. 01ಹರಿಹರದಲ್ಲಿ ನೂತನವಾಗಿ ನಿರ್ಮಿಸಿದ ಇಂಡಿಯನ್ ಸೌಹಾರ್ದ ಸೌಧದಲ್ಲಿ ಸಂಸ್ಥೆಯ ಅಧ್ಯಕ್ಷ ಸಿ.ಎನ್ ಹುಲಿಗೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ಹರಿಹರ ನಗರದ ಮೋಚಿ ಕಾಲೋನಿಯಲ್ಲಿರುವ ದಿ ಇಂಡಿಯನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ನೂತನವಾಗಿ ನಿರ್ಮಿಸಿರುವ ಇಂಡಿಯನ್ ಸೌಹಾರ್ದ ಸೌಧ ಉದ್ಘಾಟನೆ ಏ.20ರಂದು ನಾಡಿನ ವಿವಿಧ ಮಠಾಧೀಶರು ಹಾಗೂ ಧರ್ಮ ಗುರುಗಳ ಸಮ್ಮುಖದಲ್ಲಿ ಜರುಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಸಿ.ಎನ್ ಹುಲಿಗೇಶ್ ತಿಳಿಸಿದ್ದಾರೆ.

- ವಿವಿಧ ಮಠಾಧೀಶರು, ಧರ್ಮಗುರುಗಳು, ಗಣ್ಯರು ಭಾಗಿ: ಅಧ್ಯಕ್ಷ ಹುಲಿಗೇಶ್‌

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಮೋಚಿ ಕಾಲೋನಿಯಲ್ಲಿರುವ ದಿ ಇಂಡಿಯನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ನೂತನವಾಗಿ ನಿರ್ಮಿಸಿರುವ ಇಂಡಿಯನ್ ಸೌಹಾರ್ದ ಸೌಧ ಉದ್ಘಾಟನೆ ಏ.20ರಂದು ನಾಡಿನ ವಿವಿಧ ಮಠಾಧೀಶರು ಹಾಗೂ ಧರ್ಮ ಗುರುಗಳ ಸಮ್ಮುಖದಲ್ಲಿ ಜರುಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಸಿ.ಎನ್ ಹುಲಿಗೇಶ್ ತಿಳಿಸಿದರು.

ನಗರದಲ್ಲಿ ನೂತನವಾಗಿ ನಿರ್ಮಿಸಿದ ಇಂಡಿಯನ್ ಸೌಹಾರ್ದ ಸೌಧದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸೊಸೈಟಿ ಎಲ್ಲ ಸದಸ್ಯರ ಸಹಕಾರದಿಂದ ಸುಮಾರು ₹2 ಕೋಟಿ ವೆಚ್ಚದಲ್ಲಿ ಈ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈ ಸುಂದರ ಕಟ್ಟಡದ ಲೋಕಾರ್ಪಣೆ ಸಮಾರಂಭವನ್ನು ಏ.20ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ರಸ್ತೆಯ ಶ್ರೀ ಸಿದ್ದೇಶ್ವರ ಪ್ಯಾಲೆಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ದಿವ್ಯ ಸಾನ್ನಿಧ್ಯ ಹಾಗೂ ಕಟ್ಟಡ ಉದ್ಘಾಟನೆಯನ್ನು ಕನಕ ಗುರು ಪೀಠದ ಡಾ.ನಿರಂಜನಾನಂದಪುರಿ ಶ್ರೀ, ಹರಿಹರ ಮುಸ್ಲಿಂ ಧರ್ಮಗುರು ಮೌಲಾನ ಖಾಜಿ ಹಜರತ್ ಸೈಯದ್ ಶಂಷುದ್ದೀನ್ ಸಾಹೇಬ್ ಬರ್ಕಾತಿ, ಧಾರವಾಡ ಕ್ರಿಶ್ಚಿಯನ್ ಧರ್ಮಗುರು ರೈಟ್ ರೆವರೆಂಡ್ ಮಾರ್ಟಿನ್ ಸಿ ಬೊರ್ಗಾಯಿ ನೆರವೇರಿಸುವರು.

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ, ಎರೆಹೊಸಳ್ಳಿ ರೆಡ್ಡಿ ಗುರು ಪೀಠದ ವೇಮನಾನಂದ ಶ್ರೀ, ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀ ಹರಿಹರ ಆರೋಗ್ಯ ಮಾತೆ ಬಸಲಿಕ ಚರ್ಚಿನ ಫಾದರ್ ಜಾರ್ಜ್ ಪ್ರಧಾನ ಧರ್ಮಗುರುಗಳು ಸಮಾರಂಭದ ಸಾನ್ನಿಧ್ಯ ವಹಿಸುವರು.

ಆಡಳಿತ ಕಚೇರಿ ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಭಾಂಗಣವನ್ನು ಉದ್ಘಾಟನೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಭದ್ರತಾ ಕೊಠಡಿ ಉದ್ಘಾಟನೆ ಶಾಸಕ ಬಿ.ಪಿ ಹರೀಶ್, ಅತಿಥಿ ಗೃಹ ಉದ್ಘಾಟನೆ ಕ.ರಾ.ಸಂ.ಸ. ಅಧ್ಯಕ್ಷ ಜಿ.ನಂಜನಗೌಡ್ರು, ಲಿಫ್ಟ್ ಉದ್ಘಾಟನೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ಸಾಬ್, ಅಧ್ಯಕ್ಷರ ಕೊಠಡಿ ಉದ್ಘಾಟನೆ ಕ.ರಾ.ಸಂ.ಸ, ನಿರ್ದೇಶಕ ಪ್ರಭುದೇವ ಎಂ.ಆರ್, ಕಾರ್ಯಕ್ರಮದ ಸಭಾಂಗಣ ಉದ್ಘಾಟನೆ ಕ.ರಾ.ಸಂ.ಸ. ವ್ಯವಸ್ಥಾಪಕ ಶರಣಗೌಡ ಜಿ. ಪಾಟೀಲ್ ನೆರವೇರಿಸುವರು. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಸಿ.ಎನ್. ಹುಲಿಗೇಶ್ (ಹುಲಿಗೆಪ್ಪ ಸಿ.ಎನ್.) ವಹಿಸುವರು ಎಂದು ಹೇಳಿದರು.

ಸಿಇಒ ರವೀಂದ್ರನಾಥ್ ಮಾತನಾಡಿ ಸಮಾರಂಭಕ್ಕೆ ವಿಶೇಷ ಆಹ್ವಾನಿತರನ್ನಾಗಿ ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ನಮ್ಮ ಸಂಸ್ಥೆಯ ಲೀಗಲ್ ಅಡ್ವೈಸರ್ ಹಾಗೂ ವಕೀಲ ಎಂ.ನಾಗೇಂದ್ರಪ್ಪ, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ, ಎಂಜಿನಿಯರ್ ಕಿರಣ್ ಕುಮಾರ್ ಲದ್ವಾ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ಸಹಕಾರ ಸಂಘಗಳ ನಿಬಂಧಕ ಮಧು ಶ್ರೀನಿವಾಸ್ ಟಿ., ಸಹಾಯಕ ನಿಬಂಧಕ ಗೋಪಾಲ್ ಸಿ., ಲೆಕ್ಕ ಪರಿಶೋಧಕ ಡಾ. ಕೆ.ಮಹೇಶ್ವರಪ್ಪ ಜೊತೆಗೆ ಎಲ್ಲ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಸೊಸೈಟಿ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸಂಸ್ಥೆಯ ಸದಸ್ಯರು, ಷೇರುದಾರರು, ಠೇವಣಿದಾರರು ಮತ್ತು ಸ್ನೇಹಿತರು, ಹಿತೈಷಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಸೈಯದ್ ಆಸೀಫ್ ಅಹಮದ್, ರಿಯಾಜ್ ಅಹಮದ್, ಮಾರುತಿ ಶೆಟ್ಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

- - -

- 16HRR.01:

ಹರಿಹರದಲ್ಲಿ ನೂತನವಾಗಿ ನಿರ್ಮಿಸಿದ ಇಂಡಿಯನ್ ಸೌಹಾರ್ದ ಸೌಧದಲ್ಲಿ ಸಂಸ್ಥೆ ಅಧ್ಯಕ್ಷ ಸಿ.ಎನ್ ಹುಲಿಗೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

19ರಂದು ದೊಗ್ಗಳ್ಳಿಯಲ್ಲಿ ಕಳಸಾರೋಹಣ, ಅಡ್ಡಪಲ್ಲಕ್ಕಿ ಉತ್ಸವ, ಧಾರ್ಮಿಕ ಸಮಾರಂಭ
ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್: ವಿಶೇಷ ಆಭರಣಗಳ ಪ್ರದರ್ಶನ