ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ

KannadaprabhaNewsNetwork | Updated : Jan 15 2024, 05:17 PM IST

ಸಾರಾಂಶ

ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದ ರೀತಿ ಕಾಮಗಾರಿ ನಿರ್ವಹಿಸಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರದಿಂದ ಜಲಧಾರೆ ಯೋಜನೆ ಅನುಷ್ಠಾನಗೊಂಡಿದ್ದು, ಬರುವಂತ ದಿನಗಳಲ್ಲಿ ಸಾಕಾರಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಕ್ಷೇತ್ರದ ಪ್ರತಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ಕಡಕೋಳ ಗ್ರಾಮದಲ್ಲಿ ಭಾನುವಾರ ₹35 ಲಕ್ಷ ರೂ, ವೆಚ್ಚದ ಜೆಜೆಎಂ ಕಾಮಗಾರಿ ಹಾಗೂ ₹4.20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನಗೆ ಕ್ಷೇತ್ರದ ಜನರು ನಿರೀಕ್ಷೆಗೆ ಮೀರಿ ಆಶೀರ್ವಾದ ಮಾಡಿದ್ದಾರೆ. 

ಹಂತಹಂತವಾಗಿ ಪ್ರತಿ ಗ್ರಾಮಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದ ರೀತಿ ಕಾಮಗಾರಿ ನಿರ್ವಹಿಸಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರದಿಂದ ಜಲಧಾರೆ ಯೋಜನೆ ಅನುಷ್ಠಾನಗೊಂಡಿದ್ದು, ಬರುವಂತ ದಿನಗಳಲ್ಲಿ ಸಾಕಾರಗೊಳ್ಳಲಿದೆ. 

ಗ್ರಾಮಸ್ಥರ ಬೇಡಿಕೆಗಳಾದ ಐತಿಹಾಸಿಕ ಶ್ರೀ ಮುಗ್ಧ ಸಂಗಮೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಅನುದಾನ, ಸಿ.ಸಿ ರಸ್ತೆ, ಚರಂಡಿ, ರಸ್ತೆಗಳ ನಿರ್ಮಾಣ, ಕುಡಿಯುವ ನೀರು, ವಸತಿ ಸೇರಿ ಹಲವಾರು ಸಮಸ್ಯೆಗಳಿಗೆ ಬರುವಂತ ಅನುದಾನದಲ್ಲಿ ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವೇ.ಮು. ರಾಜಗುರು ಶ್ರೀ ಮಹಾಲಿಂಗಯ್ಯ ಸ್ವಾಮಿಗಳು ಮಾತನಾಡಿ, ಶಾಸಕರು ರೈತರಿಗೆ ಬರಗಾಲದ ಪರಿಹಾರ ಸಲುವಾಗಿ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ಹಾಗೂ ಕ್ಷೇತ್ರದ ಗ್ರಾಮೀಣ ಜನತೆಗೆ ರಸ್ತೆ, ಚರಂಡಿ, ಕುಡಿಯುವ ನೀರು, ವಸತಿ, ಸಮುದಾಯ ಭವನಗಳನ್ನು ಸಾಮಾಜಿಕ ನ್ಯಾಯದಡಿ ಪ್ರತಿ ಗ್ರಾಮಕ್ಕೂ ಹಾಗೂ ಪ್ರತಿ ಸಮುದಾಯಕ್ಕೂ ತಲುಪುವಂತೆ ಮುತುವರ್ಜಿ ವಹಿಸುವ ಕೆಲಸ ಮಾಡುತ್ತಿದ್ದಾರೆ. 

ಜನಸಾಮಾನ್ಯರ ಸಮಸ್ಯೆ ಹೇಳಿಕೊಳ್ಳಲು ಸರಳ ಶಾಸಕರು ಸಿಕ್ಕಿದ್ದು ಜನಸಾಮಾನ್ಯರು ಸಹಕಾರ ನೀಡಬೇಕು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಗ್ರಾಮದ ಯುವ ಮುಖಂಡ ರಾಘವೇಂದ್ರ ಉಮ್ಮರಗಿ ಮಾತನಾಡಿ ಗ್ರಾಮಸ್ಥರ ಬೇಡಿಕೆಗಳನ್ನು ಶಾಸಕರಿಗೆ ಸಲ್ಲಿಸಿದರು. 

ಈ ವೇಳೆ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶಿವಪುತ್ರ ಸಾತಿಹಾಳ, ಜೆಡಿಎಸ್ ಕಾರ್ಯಧ್ಯಕ್ಷ ಮಡುಗೌಡ ಬಿರಾದಾರ, ಜೆಜೆಎಂ ಇಲಾಖೆ ಅಧಿಕಾರಿ ಶ್ರೀಶೈಲಗೌಡ ನರಸಿಂಗಗೌಡ, ಮಾಜಿ ಗ್ರಾಪಂ ಅಧ್ಯಕ್ಷ ಎಸ್.ಬಿ.ಅಳ್ಳಗಿ, ಸಂಗನಗೌಡ ದೊಡಮನಿ, ಸಂಗಣ್ಣ ನಾಯ್ಕೋಡಿ, ಶಶಿಧರ ಉಮ್ಮರಗಿ, ಸುರೇಶ ಕೋಳೂರ, ಪ್ರಭು ಬಮ್ಮನ ಜೋಗಿ, ಅರವಿಂದ ಅಳ್ಳಗಿ, ಬಸನಗೌಡ ವಡ್ಡೋಡಗಿ, ಸಿದ್ದನಗೌಡ ಹಳ್ಳಗಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಇದ್ದರು.

ಸಾಂತ್ವನ: ಬೆಳೆಗಳಿಗೆ ನೀರುಣಿಸಲು ಹೋದಾಗ ಅಕಾಲಿಕವಾಗಿ ಕಾಲು ಜಾರಿ ಕ್ಯಾನಲಿಗೆ ಬಿದ್ದು ಮೃತಪಟ್ಟ ರೈತನ ಮನೆಗೆ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ತೆರಳಿ, ವೈಯಕ್ತಿಕ ಧನ ಸಹಾಯ ಮಾಡುವುದರ ಜೊತೆ ಸರ್ಕಾರದಿಂದ ಬರುವ ಎಲ್ಲಾ ಸಹಾಯ, ಸಹಕಾರ ನೀಡುವುದಾಗಿ ಮೃತರ ಕುಟುಂಬಕ್ಕೆ ಭರವಸೆ ನೀಡಿ ಸಾಂತ್ವನ ಹೇಳಿದರು.

ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರದಿಂದ ಜಲಧಾರೆ ಯೋಜನೆ ಅನುಷ್ಠಾನಗೊಂಡಿದ್ದು, ಬರುವಂತ ದಿನಗಳಲ್ಲಿ ಸಾಕಾರಗೊಳ್ಳಲಿದೆ. ಗ್ರಾಮಸ್ಥರ ಬೇಡಿಕೆಗಳಾದ ಐತಿಹಾಸಿಕ ಶ್ರೀ ಮುಗ್ಧ ಸಂಗಮೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಅನುದಾನ, ಸಿ.ಸಿ ರಸ್ತೆ, ಚರಂಡಿ, ರಸ್ತೆಗಳ ನಿರ್ಮಾಣ, ಕುಡಿಯುವ ನೀರು, ವಸತಿ ಸೇರಿ ಹಲವಾರು ಸಮಸ್ಯೆಗಳಿಗೆ ಬರುವಂತ ಅನುದಾನದಲ್ಲಿ ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

Share this article