ಕನ್ನಡಪ್ರಭ ವಾರ್ತೆ ನ್ಯಾಮತಿ
ಮೇ 11ರಂದು ಸಂಜೆ ಗೋಧೂಳಿ ಲಗ್ನದಲ್ಲಿ ದೇವಸ್ಥಾನ ಪ್ರವೇಶ ಹಾಗೂ ಗಣಪತಿ ಪೂಜೆ, ಉಮಾಮಹೇಶ್ವರ ಪುಣ್ಯಾಹ, ಪಂಚಕಳಸ, ಅದಿತ್ಯಾದಿ, ನವಗ್ರಹ ಪೂಜೆ ಮತ್ತು ಸ್ವಾಮಿಯ ಶಾಂತ್ಯಾರ್ಥವಾಗಿ ವಾಸ್ತು ಶಾಂತಿ, ಗಣಹೋಮ, ಕಲಾಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ ನಂತರ ಶುಭಲಗ್ನದ ಸಮೇತ ಶ್ರೀ ಸ್ವಾಮಿಯ ಪೀಠಾರೋಹಣ ನಡೆಯಲಿದೆ.
12ರಂದು ಸ್ವಾತಿ ನಕ್ಷತ್ರ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ನಂದಿ ಬಸವೇಶ್ವರ ಸ್ವಾಮಿಯ ಮೂರ್ತಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ ಹಾಗೂ ಶ್ರೀ ಸ್ವಾಮಿಯ ಮೂರ್ತಿಗೆ ಡಾ. ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ ಅಮೃತಹಸ್ತದಿಂದ ಪ್ರಾಣ ಪ್ರತಿಷ್ಠಾಪನೆ ಮತ್ತು ಹೋಮದ ಪೂರ್ಣಾಹುತಿ ಮಂಗಳಾರತಿ ನಡೆಯಲಿದೆ. ಎಲ್ಲ ಪೂಜಾ ಕೈಂಕರ್ಯಗಳು ಪ್ರಸನ್ನಶಾಸ್ತ್ರಿ ಸಂಗಡಿಗರ ಪೌರೋಹಿತ್ಯದಲ್ಲಿ ನಡೆಯುವವು.ಧರ್ಮಸಭೆ:
ಡಾ. ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಡಾ. ಶ್ರೀ ಮರುಳಸಿದ್ದ ಸ್ವಾಮೀಜಿ ಸಾನಿಧ್ಯದಲ್ಲಿ 10.30 ಗಂಟೆಗೆ ಧರ್ಮಸಭೆ ನಡೆಯಲಿದೆ. ಅಧ್ಯಕ್ಷತೆಯನ್ನು ನಂದಿ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಸ್.ಬಿ. ರಾಜು ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್. ಮಲ್ಲಿಕಾರ್ಜುನ, ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಿ.ಜಿ. ಶಾಂತನಗೌಡ, ವಿಪ ಸದಸ್ಯರಾದ ಡಿ.ಎಸ್. ಅರುಣ, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಉಪವಿಭಾಗಾಧಿಕಾರಿ ಅಭಿಷೇಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.- - -
(ಸಾಂದರ್ಭಿಕ ಚಿತ್ರ)