ಎನ್‌ಎಸ್‌ಎಸ್‌, ರೆಡ್‌ ರಿಬ್ಬನ್‌ ಕ್ಲಬ್‌ ಘಟಕ ಚಟುವಟಿಕೆ ಉದ್ಘಾಟನೆ

KannadaprabhaNewsNetwork |  
Published : Sep 10, 2024, 01:30 AM IST
ಪೊಂಪೈ ಕಾಲೇಜು ಐಕಳದ  2024-25 ನೇ ಸಾಲಿನ ಎನ್. ಎಸ್. ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಘಟಕಗಳ ಚಟುವಟಿಕೆಯ ಉದ್ಘಾಟನೆ | Kannada Prabha

ಸಾರಾಂಶ

ಐಕಳದ ಪೊಂಪೈ ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ಎನ್. ಎಸ್. ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಘಟಕಗಳ ಚಟುವಟಿಕೆಯ ಉದ್ಘಾಟನೆ ನೆರವೇರಿತು. ಎನ್.ಎಸ್.ಎಸ್ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ ಪುರುಷೋತ್ತಮ ಕೆ ವಿ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ರಾಷ್ಟ್ರ ಸೇವಾ ಯೋಜನೆ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮವಾಗಿದ್ದು ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನವಾಗುವುದರ ಜೊತೆಗೆ ಯುವಜನರಲ್ಲಿ ಸಮುದಾಯ ಸೇವೆಯ ಬಗ್ಗೆ ಒಲವು ಮೂಡಿಸುತ್ತದೆ ಎಂದು ಸುರತ್ಕಲ್‌ ಗೋವಿಂದ ದಾಸ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಹರೀಶ್ ಆಚಾರ್ಯ ಹೇಳಿದ್ದಾರೆ.

ಐಕಳದ ಪೊಂಪೈ ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ಎನ್. ಎಸ್. ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಘಟಕಗಳ ಚಟುವಟಿಕೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಎನ್.ಎಸ್.ಎಸ್ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ ಪುರುಷೋತ್ತಮ ಕೆ ವಿ ವಹಿಸಿದ್ದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಲ್ಲಿ ಕ್ರಿಯಾಶೀಲದಿಂದ ತೊಡಗಿಕೊಂಡು ಸ್ವಯಂ ಸೇವಕರಾಗಿ ಹಾಗೂ ನಾಯಕತ್ವದ ಜವಾಬ್ದಾರಿಯನ್ನು ವಹಿಸಿರುವ ಹಿರಿಯ ಸ್ವಯಂ ಸೇವಕಿ ಸ್ವಾತಿ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪೃಥ್ವಿರಾಜ್ ಬಿ., ಸಹ ಕಾರ್ಯಕ್ರಮಾಧಿಕಾರಿ ಆಶಾಲತಾ ಕೆ ಜಿ, ಎನ್. ಎಸ್. ಎಸ್ ಘಟಕ ನಾಯಕ ನೆವಿಲ್ ಡಿ ಸೋಜಾ, ರಕ್ಷಿತಾ ನಾಯ್ಕ್, ತಂಡದ ನಾಯಕರಾದ ನಿತೀಶ್ ನಾಯ್ಕ್ ಮತ್ತು ಪ್ರತೀಕ್ಷಾ ಯು ಅಮೀನ್, ಸ್ವಯಂ ಸೇವಕ, ಸೇವಕಿಯರು, ಬೋಧಕ, ಬೋಧಕೇತರ ವೃಂದದವರು ಇದ್ದರು.

ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಗ್ಲೆನಿಟಾ ನಿರೂಪಿಸಿದರು. ದ್ವಿತೀಯ ಬಿ.ಎ ಬಸಮ್ಮ ಸ್ವಾಗತಿಸಿದರು. ದ್ವಿತೀಯ ಬಿಕಾಂ ಕೀರ್ತನಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!