ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನೆ

KannadaprabhaNewsNetwork | Published : Jan 1, 2025 12:00 AM

ಸಾರಾಂಶ

ಪಟ್ಟಣದಲ್ಲಿ ಆಧುನಿಕ ಜೀವನದಲ್ಲಿ ಪರಿಸರ ಮತ್ತು ಸಾವಯವ ಕೃಷಿ ಮಹತ್ವದ ಕೃಷಿಗೋಷ್ಠಿ, ನೂತನ ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭವನ್ನು ಜ.1 ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೀರ್ಥಹಳ್ಳಿಯ ಸುಭೀಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರಿ ಸಂಘದ ಉಪಾಧ್ಯಕ್ಷ ಆರ್.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದಲ್ಲಿ ಆಧುನಿಕ ಜೀವನದಲ್ಲಿ ಪರಿಸರ ಮತ್ತು ಸಾವಯವ ಕೃಷಿ ಮಹತ್ವದ ಕೃಷಿಗೋಷ್ಠಿ, ನೂತನ ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭವನ್ನು ಜ.1 ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೀರ್ಥಹಳ್ಳಿಯ ಸುಭೀಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರಿ ಸಂಘದ ಉಪಾಧ್ಯಕ್ಷ ಆರ್.ಟಿ.ಪಾಟೀಲ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಕೃಷಿ ಕುರಿತು ರೈತರಿಗೆ ಸಾಕಷ್ಟು ಅರಿವು ಮೂಡಿಸುತ್ತಿರುವ ಕೋಲ್ಹಾಪುರದ ಕನ್ಹೇರಿ ಸಿದ್ಧಗಿರಿ ಸಂಸ್ಥಾನಮಠದ ಅದೃಷ್ಯ ಕಾಡಿಸಿದ್ದೇಶ್ವರ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಕೊಂಚೂರು ಕ್ಷೇತ್ರದ ಸವಿತಾಪೀಠ ಮಹಾಸಂಸ್ಥಾನದ ಸವಿತಾನಂದ ಮಹಾಸ್ವಾಮಿಗಳು, ಶಿರೋಳದ ಶಂಕರಾರೂಡ ಸ್ವಾಮೀಜಿ, ಲಕ್ಷಾನಟ್ಟಿ ಜ್ಞಾನ ಯೋಗಾಶ್ರಮದ ಶಿವಾನಂದ ಮಹಾಸ್ವಾಮೀಜಿ, ಕಾರ್ಯಕ್ರಮದ ಅಧ್ಯಕ್ಷತೆ ನಮ್ಮ ಘಟಪ್ರಭಾ ರೈತ ಉತ್ಪಾದಕರ ಸಹಕಾರ ಸಂಘ ನಿ.ಲೋಕಾಪುರ ಅಧ್ಯಕ್ಷ ತಿಮ್ಮಣ್ಣ ಹುಲಸದ, ಮುಖ್ಯ ಅತಿಥಿಗಳಾಗಿ ಸಾವಯವ ಕೃಷಿಕರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಲಿಕೇರಿ ವಿಶ್ವೇಶ್ವರಯ್ಯ ಸಜ್ಜನ, ಸಾವಯವ ಕೃಷಿ ಪಂಡೀತ ವಿಜೇತ ಸಂಗನಗೌಡ ಪಾಟೀಲ, ಅತಿಥಿಗಳಾಗಿ ಮಹೇಶ ಚಂದ್ರ ಗುರು, ಎಂ.ಸುಬ್ರಮಣ್ಯ, ಈರಣಗೌಡ ಪಾಟೀಲ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ನಮ್ಮ ಘಟಪ್ರಭಾ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತಿಮ್ಮಣ್ಣ ಹುಲಸದ ಮಾತನಾಡಿ, ಅನ್ನ ನೀಡುವ ಭೂಮಿಗೆ, ಹಾಲು ಕೊಡುವ ಗೋವಿಗೆ, ನಮ್ಮ ಮಕ್ಕಳಿಗೂ ನಮ್ಮ ಕುಟುಂಬಗಳಿಗೂ ವಿಷಪೂರಿತ ಆಹಾತವನ್ನು ನೀಡುತ್ತಿರುವುದು ದುರಂತದ ವಿಷಯ, ಪ್ರತಿದಿನ ವಿಷಪೂರಿತ ಗೊಬ್ಬರ ಬಳಸಿ ಇಷ್ಟೊಂದು ಜೀವಿಗಳ ಜೀವನವನ್ನು ನಾವು ನಾಶ ಮಾಡುತ್ತಿದ್ದೇವೆ ಅದರ ಬಗ್ಗೆ ಏಕೆ ನಮಗೆ ಅರಿವಾಗುತ್ತಿಲ್ಲ. ಇದನ್ನು ಅರಿತು ನಮ್ಮ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಜೀವನದಲ್ಲಿ ಪರಿಸರ ಮತ್ತು ಸಾವಯವ ಕೃಷಿ ಮಹತ್ವದ ಕೃಷಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು. ರೈತರಾದ ಸಂಗನಗೌಡ ಪಾಟೀಲ, ಹೊಳಬಸಪ್ಪ ದಂಡಿನ, ಬಸಪ್ಪ ಮಾಳೇದ, ಗಿರೀಶ ಕೊಪ್ಪದ, ಬಸಪ್ಪ ಪಾಟೀಲ ಇನ್ನಿತರರು ಇದ್ದರು.

Share this article