ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಗಾಣಿಗರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯವು ಬಹಳ ಹಿಂದಿನ ಕಾಲದಿಂದಲೂ ಗಾಣದಲ್ಲಿ ಎಣ್ಣೆ ತೆಗೆದು ಎಣ್ಣೆಯನ್ನು ಮಾರಾಟ ಮಾಡುವುದರ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು ಆದರೆ ಆಧುನಿಕತೆ ಹೆಚ್ಚಿದಂತೆ ಇತ್ತೀಚಿನ ದಿನಗಳಲ್ಲಿ ಗಾಣಗಳು ಮರೆಯಾಗುತ್ತಿದೆ ಎಂದರು.
ನಿಮಗಮಕ್ಕೆ ಹಣದ ಕೊರತೆನಮ್ಮ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ದೇವರಾಜ್ ಅರಸ ಅಭಿವೃದ್ಧಿ ನಿಗಮ ಮಂಡಳಿ ಹಲವು ರೀತಿಯ ಸವಲತ್ತುಗಳನ್ನು ಒದಗಿಸಿದೆ. ಆದರೆ ಅದು ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಗಾಣಿಗ ಅಭಿವೃದ್ಧಿ ನಿಗಮ ಮಂಡಲ ಸ್ಥಾಪನೆ ಮಾಡಿದ್ದಷ್ಟೇ ಸರಿ ಆದರೆ ಸಮರ್ಪಕವಾದ ಅನುದಾನ ನೀಡಿ ನಿಗಮ ಮಂಡಳಿಗೆ ಜೀವ ತುಂಬಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗಾಣಿಗರ ಸಂಘದ ಉಪಾಧ್ಯಕ್ಷ ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಜಿ ಸುರೇಶ್, ಖಜಾಂಚಿ ವಿಎನ್ ಮೂರ್ತಿ, ಕಾರ್ಯದರ್ಶಿ ಎಸ್ ನಾರಾಯಣಸ್ವಾಮಿ, ಸಂಚಾಲಕರಾದ ವಿ ಮಂಜುನಾಥ್, ಎ ಎನ್ ಮಂಜುನಾಥ್, ಸದಸ್ಯರುಗಳಾದ ಮರಿಯಪ್ಪ, ಜಿ ಜಿ ಶ್ರೀನಿವಾಸ್, ಮುನಿಕೃಷ್ಣಪ್ಪ, ಗುರಪ್ಪ, ಇನ್ನಿತರರು ಹಾಜರಿದ್ದರು,