ಮಾರುಕಟ್ಟೆಯಲ್ಲಿ ಕರ್ಚಿಕಾಯಿಗೆ ಹೆಚ್ಚಿದ ಬೇಡಿಕೆ

KannadaprabhaNewsNetwork |  
Published : Jul 19, 2026, 03:45 AM IST
ಯಲಬುರ್ಗಾದ ಮಾರುಕಟ್ಟೆಗೆ ಲಗ್ಗೆಯಿಟ್ಟ ಕರ್ಚಿಕಾಯಿ | Kannada Prabha

ಸಾರಾಂಶ

ಮಳೆಗಾಲದಲ್ಲಿ ಎರೆ ಭೂಮಿಯ ಬದುವಿನಲ್ಲಿ ಕರ್ಚಿಕಾಯಿ ಬೆಳೆಯುತ್ತದೆ. ಇದಕ್ಕೆ ಯಾವುದೇ ರಾಸಾಯನಿಕ ಔಷಧಿ ಬಳಕೆ ಮಾಡುವುದಿಲ್ಲ

ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ

ಔಷಧಿ ಗುಣ ಹೊಂದಿರುವ ಕರ್ಚಿಕಾಯಿ ಪಟ್ಟಣದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ರಸ್ತೆಬದಿ, ಗಲ್ಲಿ ಗಲ್ಲಿಗಳಲ್ಲಿ ಕರ್ಚಿಕಾಯಿ ಬೇಕೆ..ಕರ್ಚಿಕಾಯಿ..ಎಂಬ ಧ್ವನಿ ಕೇಳಿಬರುತ್ತಿದೆ.

ಕಳೆದ ವಾರದಿಂದ ರಸ್ತೆ ಬದಿಗಳಲ್ಲಿ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದೆ. ಪಟ್ಟಣದ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆಯಲ್ಲಿ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ.

ಮಳೆಗಾಲದಲ್ಲಿ ಎರೆ ಭೂಮಿಯ ಬದುವಿನಲ್ಲಿ ಕರ್ಚಿಕಾಯಿ ಬೆಳೆಯುತ್ತದೆ. ಇದಕ್ಕೆ ಯಾವುದೇ ರಾಸಾಯನಿಕ ಔಷಧಿ ಬಳಕೆ ಮಾಡುವುದಿಲ್ಲ. ಇದು ಶುದ್ಧ ಸಾವಯವವಾಗಿದೆ. ಇದರಿಂದ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಾರೆ. ಗ್ರಾಮೀಣ ಭಾಗದಲ್ಲಿನ ವ್ಯಾಪಾರಸ್ಥರು ಪ್ರತಿದಿನ ಬುಟ್ಟಿಯಲ್ಲಿ ಹೊತ್ತು ತಂದು ಮಾರಾಟ ಮಾಡುತ್ತಾರೆ. ಇನ್ನು ಕೆಲವರು ತಾಲೂಕಿನ ವಿವಿಧ ಗ್ರಾಮಗಳಿಂದ ತಂದು ಮಾರಾಟ ಮಾಡುತ್ತಿದ್ದಾರೆ.

ಒಂದು ಚಟಾಕ್‌‌ಗೆ ₹೩೦: ಅಡವಿಯಲ್ಲಿ ಕಸವೆಂದು ತಿರಸ್ಕರಿಸಲ್ಪಟ್ಟ ಕರ್ಚಿಕಾಯಿಗೂ ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ. ಸೊಪ್ಪುಗಳ ಮಾರಾಟ ಒಂದೆಡೆಯಾದರೆ ಗ್ರಾಮೀಣ ಭಾಗದಿಂದ ಬರುವ ಮಾರಾಟಗಾರರು ₹೩೦ಗೆ ಒಂದು ಚಟಾಕ್‌ನಂತೆ ಕರ್ಚಿಕಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಿತ್ಯ ₹೧೦೦೦ದಿಂದ ₹೧೫೦೦ವರೆಗೆ ಆದಾಯ ಗಳಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ೭ ಗಂಟೆಗೆಲ್ಲ ಪಟ್ಟಣಕ್ಕೆ ಬಂದು ವಿವಿಧ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದು, ಸಂಜೆ ವೇಳೆ ಮತ್ತೆ ಊರಿಗೆ ತೆರಳಿ ಬೆಳಗ್ಗೆ ಬಸ್ ಮೂಲಕ ಹೊತ್ತು ತರುತ್ತಿದ್ದಾರೆ.

ಔಷಧಿ ಗುಣ:ಮುಂಗಾರು ಹಂಗಾಮಿನಲ್ಲಿ ಎರೆ ಹೊಲದಲ್ಲಿ ಕರ್ಚಿಕಾಯಿ ಹೆಚ್ಚಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ತನ್ನಷ್ಟಕ್ಕೇ ತಾನೇ ಬೆಳೆಯುವ ಕರ್ಚಿಕಾಯಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಇದನ್ನು ಚೆನ್ನಾಗಿ ಹುರಿದು, ಸ್ವಲ್ಪ ಎಣ್ಣೆಯಲ್ಲಿ ಖಾರದಪುಡಿ, ಉಪ್ಪು ಬೆಳ್ಳುಳ್ಳಿಯಲ್ಲಿ ಕರಿದು, ಜೋಳದ ರೊಟ್ಟಿ ಜತೆ ಸವಿಯುತ್ತಾರೆ. ಅಲ್ಲದೆ ಕರ್ಚಿಕಾಯಿಯಲ್ಲಿ ಔಷಧಿ ಗುಣ ಇದೆ ಎನ್ನುವುದು ಹಿರಿಯ ಅನುಭವದ ಮಾತು.

ಮಹಿಳೆಯರಿಗೂ ಕೂಲಿ:ಜಮೀನುಗಳಲ್ಲಿ ಕರ್ಚಿಕಾಯಿ ಬಿಡಿಸಿ, ಮಾರುಕಟ್ಟೆಗೆ ತಂದು ಮಾರುತ್ತಿರುವ ಮಹಿಳೆಯರಿಗೂ ಇದು ಉದ್ಯೋಗವಾಗಿ ಪರಿಣಮಿಸಿದೆ. ಒಂದು ಬುಟ್ಟಿಗೆ ನೂರಾರು ರೂಪಾಯಿ ಹಣ ಗಳಿಸುತ್ತಿದ್ದು, ಮಹಿಳೆಯರ ಉಪ ಜೀವನಕ್ಕೆ ಆರ್ಥಿಕ ಮೂಲವಾಗಿದೆ.

ಮುಂಗಾರು ಪ್ರಾರಂಭದಲ್ಲಿ ಸಿಗುವ ಕರ್ಚಿಕಾಯಿ ಹುರಿದು ತಿಂದರೆ ರುಚಿಯಾಗಿತ್ತದೆ. ಇದರಿಂದ ಪಲ್ಲೆ ಮಾಡಲಾಗುತ್ತದೆ. ಕರ್ಚಿಕಾಯಿ ವರ್ಷಕ್ಕೊಮ್ಮೆ ಮಾತ್ರ ಸಿಗುತ್ತದೆ ಎಂದು ಯಲಬುರ್ಗಾ ನಿವಾಸಿ

ವಾರದಿಂದ ಕರ್ಚಿಕಾಯಿ ಮಾರಾಟದಲ್ಲಿ ತೊಡಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಜಮೀನುಗಳಿಗೆ ತೆರಳಿ ಕರ್ಚಿಕಾಯಿ ಕಿತ್ತುಕೊಂಡು ಬಂದು ವ್ಯಾಪಾರ ಮಾಡುತ್ತೇವೆ. ಮಳೆಗಾಲದಲ್ಲಿ ಮಾತ್ರ ದೊರಕುವ ಕರ್ಚಿಕಾಯಿ ತಿಂಗಳು ಮಾರಾಟಕ್ಕೆ ಸಿಗುತ್ತದೆ ಎಂದು ಕರ್ಚಿಕಾಯಿ ವ್ಯಾಪಾರಿ ಮುತ್ತುರಾಜ ಹೊಸಳ್ಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ : ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಅತ್ಯುನ್ನತ ಸಾಧನೆ
ನೀಟ್- 2026 ಸಾಧಕರಿಗೆ ಜ್ಞಾನಸುಧಾ ಟ್ರಸ್ಟ್‌ನಿಂದ ಪ್ರೋತ್ಸಾಹಧನ ಘೋಷಣೆ