ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆ ಸಂಭ್ರಮ

KannadaprabhaNewsNetwork |  
Published : Aug 21, 2026, 02:00 AM IST
ಕ್ಯಾಪ್ಷನ20ಕೆಡಿವಿಜಿ41 ದಾವಣಗೆರೆಯ ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಆಯೋಜಿಸಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ವೀರಯೋಧರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ಕರ್ನಾಟಕದ ಪ್ರಸಿದ್ಧ ಜವಳಿ ಮಳಿಗೆ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಐದು ಜನ ನಿವೃತ್ತ ಸೈನಿಕರಾದ ಎಚ್.ಸುರೇಶ್ ರಾವ್, ಕೆ.ಪಿ.ಚಂದ್ರಪ್ಪ, ಕೆ.ಎಸ್. ಬೀರಪ್ಪ, ಪಿ.ಬಿ. ಶ್ರೀನಿವಾಸ್, ಎಚ್.ಸಿ. ಕೃಷ್ಣ ನಾಯ್ಕ್ ಅವರೊಂದಿಗೆ ಸಂಸ್ಥೆಯ ಸಿಬ್ಬಂದಿ ಸ್ವಾತಂತ್ರ‍್ಯ ದಿನ ಆಚರಿಸಲಾಯಿತು.

- ಧ್ವಜಾರೋಹಣ, ಯೋಧರಿಗೆ ಸನ್ಮಾನ । ಯೋಧರ ಸೇವೆ ಸ್ಮರಣೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕದ ಪ್ರಸಿದ್ಧ ಜವಳಿ ಮಳಿಗೆ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಐದು ಜನ ನಿವೃತ್ತ ಸೈನಿಕರಾದ ಎಚ್.ಸುರೇಶ್ ರಾವ್, ಕೆ.ಪಿ.ಚಂದ್ರಪ್ಪ, ಕೆ.ಎಸ್. ಬೀರಪ್ಪ, ಪಿ.ಬಿ. ಶ್ರೀನಿವಾಸ್, ಎಚ್.ಸಿ. ಕೃಷ್ಣ ನಾಯ್ಕ್ ಅವರೊಂದಿಗೆ ಸಂಸ್ಥೆಯ ಸಿಬ್ಬಂದಿ ಸ್ವಾತಂತ್ರ‍್ಯ ದಿನ ಆಚರಿಸಲಾಯಿತು.

ಈ ಸಂದರ್ಭ ನಿವೃತ್ತ ಸೈನಿಕ ಎಚ್.ಸುರೇಶ್ ರಾವ್ ಮಾತನಾಡಿ, ತಮ್ಮ ಸೇನಾ ಜೀವನದ ಸವಾಲುಗಳು, ಕಠಿಣ ಪರಿಸ್ಥಿತಿಗಳು ಮತ್ತು ದೇಶಸೇವೆಯ ಅನುಭವಗಳನ್ನು ಹಂಚಿಕೊಂಡರು. ದೇಶದ ಗಡಿಯಲ್ಲಿ ವಿವಿಧ ಪ್ರದೇಶಕ್ಕೆ ತಕ್ಕಂತೆ ವಾತಾವರಣ, ಚಳಿ, ಮಳೆ ಹಾಗೂ ಭೌಗೋಳಿಕ ಸವಾಲುಗಳನ್ನು ಎದುರಿಸಿ, ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವುದು ಕಷ್ಟವಾದರೂ, ದೇಶದ ರಕ್ಷಣೆ ನಮಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.

ನಿವೃತ್ತ ಸೈನಿಕ ಕೆ.ಎಸ್.ಬೀರಪ್ಪ ಮಾತನಾಡಿ, ಇಂದಿನ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕೇವಲ ಡಾಕ್ಟರ್ ಅಥವಾ ಎಂಜಿನಿಯರ್ ಮಾತ್ರ ಓದಿಸಲು ಬಯಸದೇ, ದೇಶ ಸೇವೆಗಾಗಿ ಸೇನೆಗೆ ಸೇರಿಸಲು ಪ್ರೋತ್ಸಾಹಿಸಬೇಕು. ದೇಶಕ್ಕಾಗಿ ಸೇವೆ ಮಾಡಿದ್ದೇನೆ ಎನ್ನುವ ಹೆಮ್ಮೆ ಇರುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಸಹ ಮಾಲೀಕ ಮೃನಾಲ್ ಬಂಕಾಪುರ ಮಾತನಾಡುತ್ತಾ ಭಾರತವು 1947 ಆಗಸ್ಟ್ 14ರ ಮಧ್ಯರಾತ್ರಿ ಸ್ವಾತಂತ್ರ‍್ಯವನ್ನು ಪಡೆದಿರುವುದರಿಂದ ಆ ದಿನವನ್ನು ಮೊದಲ ಸ್ವಾತಂತ್ರ‍್ಯ ದಿನವೆಂದು ಪರಿಗಣಿಸಿದರೆ 2026ರ ಆಗಸ್ಟ್ 15ರಂದು 80ನೇ ಸ್ವಾತಂತ್ರ‍್ಯೋತ್ಸವವಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಈ ಸಂದರ್ಭ ಮೃನಾಲ್ ಬಂಕಾಪುರ ಅವರ ಅಜ್ಜ (ತಾಯಿಯವರ ತಂದೆ) ಮಾಜಿ ಮೇಜರ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಬಿ.ಚಂದ್ರಶೇಖರ್ ಬಗ್ಗೆ ಮತ್ತು ಅವರು ಸೈನ್ಯವನ್ನು ಸೇರಿದ ರೀತಿ ಹಾಗೂ ದೇಶಕ್ಕಾಗಿ ನೀಡಿದ ಸೇವೆಯ ಸ್ಮರಣೆಯನ್ನು ಕಾರ್ಯಕ್ರಮದಲ್ಲಿ ಅವರ ಕುಟುಂಬದ ಸೇನಾ ಪರಂಪರೆಯನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಮಾಲೀಕರಾದ ದೀಪಾ ಶಿವಕುಮಾರ್, ಸೃಜನ ದೊಡ್ಮನೆ, ಸಂಸ್ಥೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ವಿ.ಎಂ.ವೀರಣ್ಣ, ವಿಷುವಲ್ ಮರ್ಚಂಡೈಸಿಂಗ್ ವ್ಯವಸ್ಥಾಪಕರಾದ ಜಗದೀಶ್, ಎಸ್.ನಾಗರಾಜ, ಶಿಲ್ಪ, ನಾಗಶ್ರೀ ಇತರರು ಇದ್ದರು.

ಸಂಸ್ಥೆಯಿಂದ ನಿವೃತ್ತ ವೀರಯೋಧರಿಗೆ ಗೌರವಿಸಲಾಯಿತು.

- - -

-20ಕೆಡಿವಿಜಿ41:

ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಆಯೋಜಿಸಿದ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ನಿವೃತ್ತ ವೀರಯೋಧರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಿ
ಚಿಕನ್ ಕಂಪನಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ, ಪರಿಶೀಲನೆ