ವ್ಯಾಜ್ಯಗಳ ಇತ್ಯರ್ಥಕ್ಕೆ ಲೋಕ ಅದಾಲತ್ ಸಹಕಾರಿ

KannadaprabhaNewsNetwork |  
Published : Aug 21, 2026, 02:00 AM IST
ಬಾಟಂ | Kannada Prabha

ಸಾರಾಂಶ

ಚಳ್ಳಕೆರೆನ್ಯಾಯಕ್ಕಾಗಿ ಜನರು ನ್ಯಾಯಾಲಯಕ್ಕೆ ಬಂದವರನ್ನು ಅಲೆದಾಡಿಸದೇ ತ್ವರಿತ ನ್ಯಾಯ ನೀಡಲು ಹಣ, ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲು ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಕ್ಷಿದಾರರು ಮುಂದೆ ಬರಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಜೆ. ಸುಧೀನ್ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನ್ಯಾಯಕ್ಕಾಗಿ ಜನರು ನ್ಯಾಯಾಲಯಕ್ಕೆ ಬಂದವರನ್ನು ಅಲೆದಾಡಿಸದೇ ತ್ವರಿತ ನ್ಯಾಯ ನೀಡಲು ಹಣ, ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲು ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಕ್ಷಿದಾರರು ಮುಂದೆ ಬರಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಜೆ. ಸುಧೀನ್ ಕುಮಾರ್ ಹೇಳಿದರು.

ನಗರದ ನ್ಯಾಯಾಲದ ಸಂಕೀರ್ಣದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಯಾವುದೇ ಪ್ರಕಾರದ ಪ್ರಕರಣಗಳು ನ್ಯಾಯಾಲಯದಲ್ಲಿ ಇರಲಿ. ಇಂತಹ ಪ್ರಕರಣಗಳ ವಾರಸುದಾರರು ಮುಂದೆ ಬಂದು ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲು ಮನಸ್ಸು ಮಾಡಬೇಕು. ರಾಜೀ ಸಂಧಾನದ ಮೂಲಕ ಬಗೆಹರಿಸಲಾಗುವುದು. ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರು ವ್ಯಾಜ್ಯಗಳಿಂದ ದೂರವಿರಲು ಪ್ರಯತ್ನಿಸಬೇಕು ಎಂದರು.

ಬ್ಯಾಂಕ್ ಗಳಲ್ಲಿ ಸಾಲ ತೆಗೆದು ಕೊಂಡು ಕಟ್ಟದೇ ಇರುವವರು, ಜಮೀನು ವ್ಯಾಜ್ಯಗಳು, ಗಂಡ-ಹೆಂಡಿರ ಜಗಳ, ಗಲಾಟೆ ವ್ಯಾಜ್ಯಗಳೂ ಸೇರಿದಂತೆ ಯಾವುದೇ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವವರು ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೆ ಸಾಕು. ಸಂಬಂಧಿಸಿದವರನ್ನು ಕರೆಸಿ ವ್ಯಾಜ್ಯ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದು. ಎದುರಾಳಿ ಕಕ್ಷಿದಾರರು ಒಪ್ಪಿದರೆ ಅನ್ಯ ಜಿಲ್ಲೆಯ ನ್ಯಾಯಾಧೀಶರನ್ನು ನೇಮಿಸಿ ಸಮಸ್ಯೆ ಬಗೆಹರಿಸಲು ಎರಡೂ ಕಡೆಯವರ ಒಪ್ಪಿಗೆ ಮೇರೆಗೆ ಇತ್ಯರ್ಥಗೊಳಿಸಲಾಗುವುದು ಎಂದು ವಿವರಿಸಿದರು.

ಸಮಾಜದಲ್ಲಿ ಶೋಷಣೆಗೆ ಒಳಗಾದವರು ಮಹಿಳೆಯರು, ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಮಾಡಿದರೆ ಉಚಿತ ಕಾನೂನು ಸೇವೆ ಒದಗಿಸಲಾಗುವುದು ಎಂದರು.

ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್. ಅಶ್ವತ್ಥ್ ನಾಯಕ ಮಾತನಾಡಿ, ವಕೀಲರು ಜನರ ಸಮಸ್ಯೆ ಇತ್ಯರ್ಥ ಪಡಿಸಲು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ರಾಜೀ ಸಂಧಾನದ ಸಮಯದಲ್ಲಿ ಎರಡೂ ಕಡೆಯವರ ವಕೀಲರು ಇರಲಿದ್ದಾರೆ. ಬ್ಯಾಂಕ್ ಗಳ ಸಾಲದ ವಿಷಯದಲ್ಲೂ ರಾಜೀ ಸಂಧಾನ ಮಾಡಿಕೊಳ್ಳಲು ಮುಂದೆ ಬಂದರೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಚ್.ಆರ್. ಹೇಮಾ ಮಾತನಾಡಿ, ಆಸ್ತಿ ವ್ಯಾಜ್ಯಗಳಲ್ಲಿ ನಿಖರವಾದ ದಾಖಲೆಗಳು ಇದ್ದಾಗ ಮತ್ತು ಸಂಬಂಧಿಸಿದವರ ಒಪ್ಪಿಗೆ ಇದ್ದಾಗ ಇತ್ಯರ್ಥಗೊಳಿಸಲಾಗುವುದು. ಎರಡೂ ಕಡೆಯವರ ಒಪ್ಪಿಗೆ ಇಲ್ಲಿ ಮುಖ್ಯವಾಗುತ್ತದೆ. ಯಾರ ಮೇಲೆಯೂ ಒತ್ತಡ ಹೇರುವ ಪ್ರಶ್ನೆಯೂ ಇಲ್ಲ ಎಂದರು.

ಅಪರ ಸಿವಿಲ್ ನ್ಯಾಯಾಧೀಶರಾದ ಸಂಘಮಿತ್ರ, ವಕೀಲರ ಸಂಘದ ಉಪಾಧ್ಯಕ್ಷರಾದ ಬಿ.ಟಿ. ಶ್ಯಾಮಲಾ, ಕಾರ್ಯದರ್ಶಿ ಪರಮೇಶ್ವರಪ್ಪ, ಕಾರ್ಯಕಾರಿ ಸದಸ್ಯ ದೊರೆ ನಾಗರಾಜ್ ಇದ್ದರು. ಪೋಟೋ:

ಚಳ್ಳಕೆರೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಜೆ. ಸುಧೀನ್ ಕುಮಾರ್ ಮಾತನಾಡಿದರು. ನ್ಯಾಯಾಧೀಶರಾದ ಎಚ್.ಆರ್. ಹೇಮಾ, ಸಂಘಮಿತ್ರ, ವಕೀಲರ ಸಂಘದ ಅಧ್ಯಕ್ಷ ಜಿ. ಆರ್. ಅಶ್ವತ್ಥ್ ನಾಯಕ, ಉಪಾಧ್ಯಕ್ಷರಾದ ಬಿ.ಟಿ. ಶ್ಯಾಮಲಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಿ
ಚಿಕನ್ ಕಂಪನಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ, ಪರಿಶೀಲನೆ