ಕುಮಾರಪಟ್ಟಣ: ರಾಣಿಬೆನ್ನೂರು ತಾಲೂಕಿನ ತರೇದಹಳ್ಳಿ (ಕೃಷ್ಣಾಪುರ) ಗ್ರಾಮದ ಹತ್ತಿರದಲ್ಲಿರುವ ವೆಂಕಟೇಶ್ವರ ಹ್ಯಾಚರೀಸ್ ಹಾಗೂ ಹನುಮನಹಳ್ಳಿ ಗ್ರಾಮದ ಹತ್ತಿರದಲ್ಲಿರುವ ವೆಸ್ಟವಿಂಡ್ ಫುಡ್‌ ಪ್ರೋಶಸ್ಸಿಂಗ್ ಚಿಕನ್ ಕಂಪನಿಗಳ ಮೇಲೆ ಜಿಲ್ಲೆಯ ಆಹಾರ ಸುರಕ್ಷತಾಧಿಕಾರಿಗಳು ರಾಣಿಬೆನ್ನೂರ ತಹಸೀಲ್ದಾರ್ ಒಳಗೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿ. ಸಾರ್ವಜನಿಕರ ಉಪಯೋಗಕ್ಕಾಗಿ ತಯಾರಿಸಿ ಪೂರೈಸಲಾಗುತ್ತಿದ್ದ (ಚಿಕನ್) ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು.

ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಬೆಂಗಳೂರು ಇವರ ಆದೇಶದನ್ವಯ ಜಿಲ್ಲೆಯ ಆಹಾರ ಸುರಕ್ಷತಾಧಿಕಾರಿಗಳು ರಾಣಿಬೆನ್ನೂರ ತಹಸೀಲ್ದಾರ್ ಒಳಗೊಂಡ ಅಧಿಕಾರಿಗಳ ತಂಡ ವೆಂಕಟೇಶ್ವರ ಚಿಕನ್ ಕಂಪನಿಯಲ್ಲಿ ದಾಳಿಮಾಡಿದ ಅಧಿಕಾರಿಗಳು, ಕಂಪನಿಯಲ್ಲಿ ಉತ್ಪಾದಿಸುವ ಚಿಕನ್ ಪರಿಶೀಲಿಸಿದ ಸಮಯದಲ್ಲಿ Chicken Whole (200kg), Chicken Whole (Skinless) (142kg), Chicken Legs (40kg) ಈ ಆಹಾರ ಪದಾರ್ಥವನ್ನು ಪ್ಯಾಕ್ ಮಾಡದೆ ಹಾಗೇ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ, ಆಹಾರ ಸುರಕ್ಷತಾಧಿಕಾರಿಗಳು ಸದರಿ ಆಹಾರ ಪದಾರ್ಥಗಳ ಸಂಬಂಧ ಸ್ಥಳ ಮಹಜರ ಮಾಡಿಕೊಂಡು, ನೋಟಿಸ್ ಜಾರಿ ಮಾಡಿ ಒಟ್ಟು 382 ಕೆ.ಜಿ. ಆಹಾರ ಪದಾರ್ಥಗಳನ್ನು ಸೀಜ್ ಮಾಡಿರುತ್ತಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅನ್ವಯ ಹಾಗೂ ಸಂಬಂಧಿಸಿದ ಆಹಾರ ಉದ್ದಿಮೆದಾರರು ನೋಟಿಸ್‌ಗೆ ನೀಡುವ ಉತ್ತರದ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದೆಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.

ನಂತರ ಹನುಮನಹಳ್ಳಿ ಗ್ರಾಮದ ಹತ್ತಿರದಲ್ಲಿರುವ ವೆಸ್ಟವಿಂಡ್ ಫುಡ್‌ ಪ್ರೋಶಸ್ಸಿಂಗ್ ಕಂಪನಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅಲ್ಲಿ ಉತ್ಪಾದನೆಯಾಗುವ ಚಿಕನ್ (ಆಹಾರ) ಪರಿಶೀಲಿಸಿದಾಗ ಪರಿಶೀಲನೆ ವೇಳೆ ಸಾರ್ವಜನಿಕರ ಉಪಯೋಗಕ್ಕಾಗಿ ತಯಾರಿಸಿ ಪೂರೈಸಲಾಗುತ್ತಿದ್ದ Chicken bone pieces(222kg), Chicken Whole (100kg), Chicken skinless (126kg), Chicken wings(100kg), Boneless chicken(103kg), ಈ ಆಹಾರ ಪದಾರ್ಥವನ್ನು ಬಾಕ್ಸ್‌ ಪ್ಯಾಕ್, ಉಳಿದ 4 box ಹಾಗೇ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ, ಆಹಾರ ಸುರಕ್ಷತಾಧಿಕಾರಿಗಳು ಸದರಿ ಆಹಾರ ಪದಾರ್ಥಗಳ ಸಂಬಂಧ ಸ್ಥಳ ಮಹಜರ ಮಾಡಿಕೊಂಡು, ನೋಟಿಸ್ ಜಾರಿ ಮಾಡಿ ಒಟ್ಟು 651 ಕೆ.ಜಿ. ಆಹಾರ ಪದಾರ್ಥಗಳನ್ನು ಸೀಜ್ ಮಾಡಿ ಮತ್ತು ಕೋಲ್ಡ್ ಸ್ಟೋರೇಜಿನಲ್ಲಿ ಇರಿಸಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅನ್ವಯ ಹಾಗೂ ಸಂಬಂಧಿಸಿದ ಆಹಾರ ಉದ್ದಿಮೆದಾರರಿಗೆ ನೋಟಿಸ್ ನೀಡಿದ್ದಾರೆ. ಉತ್ತರದ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ನಿರೀಕ್ಷಿಸಲಾಗಿದೆ ಎಂದು ದಾಳಿಮಾಡಿದ ಅಧಿಕಾರಿಗಳ ತಂಡ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.