- ಗೆಜ್ಜೆಗೊಂಡನಹಳ್ಳಿಯಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಸಾಯಿನಾಥ ಮಂದಿರ
ಗೆಜ್ಜೆಗೊಂಡನಹಳ್ಳಿಯಲ್ಲಿ ಶಿರಡಿ ಸಾಯಿಬಾಬಾ ನೂತನ ಮಂದಿರ ಲೋಕಾರ್ಪಣೆ ಹಾಗೂ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ಬಂದಾಗ ವಿದ್ಯಾವಂತರು ಕಡಿಮೆ ಇದ್ದರೂ ಅಪರಾಧದ ಸಂಖ್ಯೆ ಕಡಿಮೆ ಇತ್ತು. ಈಗ ಶೇ. 97 ರಷ್ಟು ವಿದ್ಯಾವಂತರು ಇದ್ದರೂ ಅಪರಾಧ ಪ್ರಕರಣಗಳು ಅಧಿಕವಾಗಿವೆ ಎಂದು ವಿಷಾದಿಸಿದರು.
ಇಂದು ದೇವಸ್ಥಾನ ಕಟ್ಟಿದರೆ ಆ ಊರಲ್ಲಿ ಜಾತಿ- ಧರ್ಮ ಎಂಬ ಭೇದ ಭಾವ ಇರುವುದಿಲ್ಲ. ಅಂತ ಒಂದು ಕಾರ್ಯವನ್ನು ಅಪೂರ್ವ ಸಹೋದರರಾದ ಡಾ. ಚಂದ್ರಶೇಖರ್, ಉದ್ಯಮಿ ಪ್ರಕಾಶ್ ಓಂಕಾರ ಮೂರ್ತಿ ಮಾಡಿದ್ದಾರೆ. ಇಂಥವರ ಆದರ್ಶಗಳು ಅನುಕರಣೀಯ ಎಂದರು.ಡಾ. ಚಂದ್ರಶೇಖರ್ ಮಾತನಾಡಿ ಕಳೆದ 20 ವರ್ಷಗಳಿಂದ ನಮ್ಮ ತಂದೆ ತಾಯಿ ಹೆಸರಿನಲ್ಲಿ ಧಾರ್ಮಿಕ ಕಾರ್ಯ, ಪ್ರತಿಭಾ ಪುರಸ್ಕಾರ ನೀಡುತ್ತಿದ್ದು ನಮಗೆ ನಮ್ಮ ಊರಿನಲ್ಲಿ ಗುಡಿ ಗೌಡ್ರು ಗ್ರಾಮಸ್ಥರು ಸಹಕಾರ ನೀಡಿರುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸದರ ಅನುದಾನದಡಿ ಗೋಪಾಲರಾಯ ಕೆರೆಯನ್ನು ವಾಣಿವಿಲಾಸ ಸಾಗರದಂತೆ ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸುವಂತೆ ಯೋಜನೆ ರೂಪಿಸಲಾಗಿದೆ ಎಂದರು. ಮಾಜಿ ಶಾಸಕ ಎಸ್.ಎಂ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಮಠಾಧೀಶರಾದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿ, ಜ್ಞಾನಪ್ರಭು ಸಿದ್ದರಾಮಯ್ಯ ಕೇಂದ್ರ ಸ್ವಾಮಿ, ನಂದೀಶ್ವರ ಶಿವಾಚಾರ್ಯ ಸ್ವಾಮಿ, ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ ಸಂದೇಶ ನೀಡಿದರು, ಬಿ, ರಂಗಸ್ವಾಮಿ, ಮೆಡಿಕಲ್ ಶಿವಾನಂದ್, ಎಂ. ಕೃಷ್ಣಮೂರ್ತಿ , ಕೆ. ಗಿರೀಶ್ ಚೌಹಾಣ್ ಹಾಗೂ ಭರತ್ ಉಪಸ್ಥಿತರಿದ್ದರು.