ಆರೋಗ್ಯ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕ: ಡಾ.ಎಂ.ಎಲ್.ಮಂಜುನಾಥ್

KannadaprabhaNewsNetwork |  
Published : Mar 27, 2026, 01:15 AM IST
ಸಿಕೆಬಿ-1ತಾಲ್ಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋದನಾ ಸಂಸ್ಥೆಯಲ್ಲಿ ನಡೆದ ಪ್ರಥಮ ವರ್ಷದ ಬಿಎಸ್ ಸಿ ಅಲೈಡ್ ಸೈನ್ಸ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವಾದ ಆರಂಭ-2026   ಕಾರ್ಯಕ್ರಮವನ್ನು ಡೀನ್ ಡಾ.ಎಂ.ಎಲ್.ಮಂಜುನಾಥ್ ಉಧ್ಘಾಟಿಸಿದರು | Kannada Prabha

ಸಾರಾಂಶ

ವಿದ್ಯಾರ್ಥಿಗಳೇ, ನೀವು ಅಪರಿಮಿತ ಸಾಧ್ಯತೆಗಳ ಯುಗದಲ್ಲಿ ವಾಸಿಸುತ್ತಿದ್ದೀರಿ. ಮಾನವೀಯತೆಗೆ ತಿಳಿದಿರುವ ಅತ್ಯಂತ ಉದಾತ್ತ ವೃತ್ತಿಗಳಲ್ಲಿ ಒಂದಾದ ಆರೋಗ್ಯ ರಕ್ಷಣಾ ವೃತ್ತಿಯ ಭಾಗವಾಗಲು ನೀವು ಅದೃಷ್ಟಶಾಲಿಗಳು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆರೋಗ್ಯ ರಕ್ಷಣೆ, ವೈದ್ಯಕೀಯ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಭಾರತವು ಜಾಗತಿಕ ನಾಯಕನಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಈ ಪ್ರಗತಿಯ ಭವಿಷ್ಯವು ನಿಮ್ಮ ಕೈಯಲ್ಲಿದೆ. ನಿಮ್ಮ ಕುತೂಹಲವು ಆವಿಷ್ಕಾರಗಳಿಗೆ ಕಾರಣವಾಗುತ್ತದೆ, ನಿಮ್ಮ ಸಮರ್ಪಣೆ ರೋಗಿಗಳ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಧೈರ್ಯವು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತದೆ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಎಂ.ಎಲ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ನಡೆದ ಪ್ರಥಮ ವರ್ಷದ ಬಿಎಸ್‌ಸಿ ಅಲೈಡ್ ಸೈನ್ಸ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಆರಂಭ-2026 ಅನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳೇ, ನೀವು ಅಪರಿಮಿತ ಸಾಧ್ಯತೆಗಳ ಯುಗದಲ್ಲಿ ವಾಸಿಸುತ್ತಿದ್ದೀರಿ. ಮಾನವೀಯತೆಗೆ ತಿಳಿದಿರುವ ಅತ್ಯಂತ ಉದಾತ್ತ ವೃತ್ತಿಗಳಲ್ಲಿ ಒಂದಾದ ಆರೋಗ್ಯ ರಕ್ಷಣಾ ವೃತ್ತಿಯ ಭಾಗವಾಗಲು ನೀವು ಅದೃಷ್ಟಶಾಲಿಗಳು. ಈ ಮಾರ್ಗವನ್ನು ಆರಿಸಿಕೊಳ್ಳುವ ಮೂಲಕ, ನೀವು ಸೇವೆ, ತ್ಯಾಗ ಮತ್ತು ಮಹತ್ವದ ಜೀವನವನ್ನು ಆರಿಸಿಕೊಂಡಿದ್ದೀರಿ. ನೀವು ರೋಗಗಳಿಗೆ ಚಿಕಿತ್ಸೆ ನೀಡುವುದಲ್ಲದೆ; ನೀವು ಜೀವನವನ್ನು ಸ್ಪರ್ಶಿಸುವಿರಿ, ಭರವಸೆಯನ್ನು ಪುನಃಸ್ಥಾಪಿಸುವಿರಿ ಮತ್ತು ಜನರ ಅತ್ಯಂತ ದುರ್ಬಲ ಕ್ಷಣಗಳಲ್ಲಿ ಅವರ ಪಕ್ಕದಲ್ಲಿ ನಿಲ್ಲುವಿರಿ. ಇದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ ಎಂದರು.

ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ಪಿ.ವಿ.ರಮೇಶ್ ಮಾತನಾಡಿ, ಬಿಎಸ್‌ಸಿ ಅಲೈಡ್ ಸೈನ್ಸ್ ವಿದ್ಯಾರ್ಥಿಗಳು ರೋಗಿಗಳ ಆರೈಕೆ, ಚಿಕಿತ್ಸೆ ಯ ಜೊತೆಗೆ ನಿಮ್ಮ ಜವಾಬ್ದಾರಿ ಹಾಗೂ ಉತ್ತರದಾಯಿ ಗುಣಗಳನ್ನು ಬೆಳೆಸಿಕೊಂಡರೆ ಆಗ ಮಾತ್ರ ನೀವು ಈ ಕ್ಷೇತ್ರದ ಸಮರ್ಥ ವೃತ್ತಿಪರರಾಗುತ್ತೀರಾ. ಈ ಪದವಿಯಲ್ಲಿ ಸೈದ್ಧಾಂತಿಕ ವಿಚಾರಗಳನ್ನು ಕಲಿಯುವ ಜೊತೆಗೆ ಸಾಂದರ್ಭಿಕವಾಗಿ ವರ್ತಿಸುವ ಮತ್ತು ಆಯಾ ಸಂದರ್ಭದಲ್ಲಿ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಿ ಸಂವೇದನೆಯಿಂದ ಚಿಕಿತ್ಸೆ ನೀಡುವ ರೋಗಿಗಳನ್ನು ಆರೈಕೆ ಮಾಡುವ ಗುಣ ಮತ್ತು ಸಾಮರ್ಥ್ಯವನ್ನು ತಾವೆಲ್ಲರೂ ಕಡ್ಡಾಯವಾಗಿ ಕಲಿತು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ನೋಡಲ್ ಅಧಿಕಾರಿ ಡಾ.ರವೀಂದ್ರ. ವಿಭಾಗ ಮುಖ್ಯಸ್ಥರಾದ ಡಾ.ಎಂ.ಆರ್ ಅನಿತಾ, ಡಾ. ಸುರೇಶ್ ನಾಯಕ್, ಡಾ.ಗೀತಾ, ಡಾ.ಆಶಾ,ಡಾ.ರವೀಂದ್ರ, ಡಾ,ನಾಗಲಕ್ಷ್ಮೀ, ಸಹಾಯಕ ಪ್ರಾಧ್ಯಾಪಕರಾದ ಡಾ.ಶಂಕರಪ್ಪ,ಡಾ.ಪುಷ್ಪ, ಡಾ.ಶಶಿಕುಮಾರ್, ಡಾ.ಆಶಾ, ಡಾ.ಶಂಕರಪ್ಪ, ಡಾ.ಶಶಿಕುಮಾರ್, ಡಾ.ಪುಷ್ಪ, ಡಾ.ಜ್ಯೋತಿ, ಡಾ.ಅನಿತಾಲಕ್ಷ್ಮಿ, ಟ್ಯೂಟರ್ ವೈದ್ಯರಾದ ಡಾ.ಸಂದೀಪ್, ಡಾ.ಉಜ್ವಲ್, ಡಾ.ಪೋಷಿತ್ ಇದ್ದರು.

ಸಿಕೆಬಿ-1 ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋದನಾ ಸಂಸ್ಥೆಯಲ್ಲಿ ನಡೆದ ಪ್ರಥಮ ವರ್ಷದ ಬಿಎಸ್ ಸಿ ಅಲೈಡ್ ಸೈನ್ಸ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವಾದ ಆರಂಭ-2026 ಕಾರ್ಯಕ್ರಮವನ್ನು ಡೀನ್ ಡಾ.ಎಂ.ಎಲ್. ಮಂಜುನಾಥ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೇನುಹುಳು ದಾಳಿ ತಡೆಗೆ ಕ್ರಮ ಕೈಗೊಳ್ಳಿ
ರಾಜ್ಯ ಸರ್ಕಾರದ ನೀತಿ ಖಂಡಿಸಿ ಮಾದಿಗ ಹೋರಾಟ ಸಮಿತಿಯಿಂದ ಪ್ರತಿಭಟನೆ