ಜಗತ್ತಿನ ಆರ್ಥಿಕತೆಗೆ ಭಾರತವೇ ಶಕ್ತಿ

KannadaprabhaNewsNetwork |  
Published : Jan 20, 2026, 03:15 AM IST
ಸಿಂದಗಿ ಪಟ್ಟಣದ ಕಲಕೇರಿ ರಸ್ತೆಯ ಹೊರವಲಯದಲ್ಲಿರುವ ಎಲೈಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಎಲೈಟ್ ಯುವೋತ್ಸವ ಕಾರ್ಯಕ್ರಮವನ್ನು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಗತ್ತಿನ ಆರ್ಥಿಕತೆಗೆ ದೊಡ್ಡ ಶಕ್ತಿ ಎಂದರೆ ಭಾರತ. ಇದಕ್ಕೆ ಕಾರಣ ಯುವಶಕ್ತಿ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಜಗತ್ತಿನ ಆರ್ಥಿಕತೆಗೆ ದೊಡ್ಡ ಶಕ್ತಿ ಎಂದರೆ ಭಾರತ. ಇದಕ್ಕೆ ಕಾರಣ ಯುವಶಕ್ತಿ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು.

ಪಟ್ಟಣದ ಕಲಕೇರಿ ರಸ್ತೆಯ ಹೊರ ವಲಯದಲ್ಲಿರುವ ಎಲೈಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಎಲೈಟ್ ಯುವೋತ್ಸವ ಕಾರ್ಯಕ್ರಮ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿರುವ ಯುವ ಸಮೂಹ ದೇಶದ ಬೆಳೆವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಒಬ್ಬ ವಿದ್ಯಾರ್ಥಿ ಬೆಳವಣಿಗೆಗೆ ಗಣಿತ ಅಷ್ಟೇ ಮುಖ್ಯವಲ್ಲ, ಅದರ ಜೊತೆಗೆ ಸಂಸ್ಕಾರಯುತ ಮನೋಭಾವ ಇರಬೇಕು. ಈ ದೇಶಕ್ಕೆ ಡಾಕ್ಟರ್ ಮತ್ತು ಇಂಜಿನಿಯರ್ ಜೊತೆಗೆ ವಿವಿಧ ಆಯ್ಕೆಗಳು ಬಹುಮುಖ್ಯ. ಸಿಂದಗಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಎಲೈಟ್ ಸಹ ಒಂದಾಗಿದೆ ಎಂದರು.ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಪಿಎಸ್ಐ ಆರೀಫ್ ಮುಷಾಪುರಿ ಮಾತನಾಡಿ, ಓದಿನಲ್ಲಿ ಅಂದಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಎಂಬ ಗಿಳಿಗೆ ಮಾರು ಹೋಗಿ ಅಧ್ಯಯನದಲ್ಲಿ ಹಿಂದೆ ಬಿಳುತ್ತಿದ್ದಾರೆ. ಹಾಗಾಗಿ ಮಕ್ಕಳು ಓದಿನೆಡೆಗೆ ಹೆಚ್ಚಿನ ಗಮನ ಹರಿಸಿದರೆ ಸಾಧನೆಯ ಶಿಖರ ಎರಲು ಸಾಧ್ಯ. ಸಾಧನೆ ಮಾಡಲು ವಿದ್ಯಾರ್ಥಿಗಳಲ್ಲಿ ಛಲ ಎನ್ನುವುದು ಇರಬೇಕು. ಪಾಲಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಕಡೆಗೂ ಗಮನ ಹರಿಸಬೇಕು. ಮಕ್ಕಳಿಗೆ ಓದು ಓದು ಎಂದು ಒತ್ತಡ ಹಾಕುವ ಜೊತೆಗೆ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಕಾರ್ಯ ಮಾಡಬೇಕು. ಗುರು ಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಸಬೇಕು ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷೆ ಮಹಬುಬ್ಬಿ ಅಸಂತಾಪುರ, ಮುಸ್ತಪಾ ಅಸಂತಾಪುರ, ಪ್ರಾಚಾರ್ಯ ಇಜಾಜ್ ಅಹ್ಮದ ಜುಮನಾಳ, ಮುಖ್ಯಗುರು ತೌಶಿಫ್ ಕೆಂಭಾವಿ, ನಿಟ್ ಅಕಾಡೆಮಿಯ ಸಂಯೋಜಕ ಅಜೀಮ್ ನಾಯ್ಕ್, ಮನ್ಸೂರ ಅಸಂತಾಪುರ, ರೇವಣಸಿದ್ಧ ಗುಣಾರಿ, ಭಾಗ್ಯಲಕ್ಷ್ಮಿ ಕೆಂಭಾವಿ, ರೇಣುಕಾ ಮೋಪಗಾರ, ಅವಿನಾಶ ಸೇರಿದಂತೆ ಶಾಲಾ ಕಾಲೇಜಿನ ಬೋಧಕ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಸಿಂದಗಿ ಗಣಿತ ಲೋಕದ ಭೀಷ್ಮ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ಎಚ್.ಟಿ.ಕುಲಕರ್ಣಿ ಗುರುಗಳು ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಸ್ಥೆಯ ಸಂಸ್ಥಾಪಕ, ಆಡಳಿತಾಧಿಕಾರಿ ಮಹಿಬೂಬ್ ಅಸಂತಾಪುರ ಪ್ರಾಸ್ತಾವಿಕ ಮಾತನಾಡಿದರು. ಗುರುರಾಜ ದೇಸಾಯಿ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಅಶೋಕ ಬಿರಾದಾರ ನಿರೂಪಿಸಿದರು.

ಹಸಿರು ಕ್ರಾಂತಿಯು ಭಾರತದಂತಹ ದೇಶಗಳಲ್ಲಿ ಆಹಾರ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿ, ದೇಶವನ್ನು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯನ್ನಾಗಿಸಿ ಹಸಿವು ನೀಗಿಸಿದೆ. ರೈತರ ಆದಾಯ ಹೆಚ್ಚಿಸಿದೆ ಮತ್ತು ಕೃಷಿಯನ್ನು ಆಧುನಿಕ ಕೈಗಾರಿಕಾ ಪದ್ಧತಿಯಾಗಿ ಪರಿವರ್ತಿಸಿದೆ.

- ಅರುಣ ಶಹಾಪುರ, ಮಾಜಿ ವಿಪ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ