ಪಹಲ್ಗಾಂ ದಾಳಿಕೋರರಿಗೆ ಭಾರತದ ದಿಟ್ಟ ಉತ್ತರ: ಜಗದೀಶ ಗುಡಗುಂಟಿ

KannadaprabhaNewsNetwork |  
Published : May 11, 2025, 01:19 AM IST
ಜಮಖಂಡಿ ನಗರದ ಮಾರುಕಟ್ಟೆ ಪ್ರದೇಶದ ಹನುಮಾನ ಮಂದಿರದಲ್ಲಿ ಶಾಸಕ ಜಗದೀಶ ಗುಡಗುಂಟಿ ವಿಶೇಷ ಪೂಜೆ ಸಲ್ಲಿಸಿ ದೇಶದ ಸೈನಿಕರಿಗೆ ಜಯವಾಗಲಿ ಎಂದು ಪ್ರಾರ್ಥಿಸಿದರು. | Kannada Prabha

ಸಾರಾಂಶ

ದಕ್ಷಿಣ ಕಾಶ್ಮೀರದ ಪೆಹೆಲ್ಗಾಂನಲ್ಲಿ ಹಿಂದುಗಳನ್ನು ಹುಡುಕಿ ಕೊಂದ ಮತಾಂಧ ಉಗ್ರಗಾಮಿಗಳ ಸಂಹಾರಕ್ಕೆ ಅಣಿಯಾಗಿರುವ ಭಾರತಮಾತೆಯ ವೀರ ಪುತ್ರರಿಗೆ ಜಯವಾಗಲಿ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ದಕ್ಷಿಣ ಕಾಶ್ಮೀರದ ಪೆಹೆಲ್ಗಾಂನಲ್ಲಿ ಹಿಂದುಗಳನ್ನು ಹುಡುಕಿ ಕೊಂದ ಮತಾಂಧ ಉಗ್ರಗಾಮಿಗಳ ಸಂಹಾರಕ್ಕೆ ಅಣಿಯಾಗಿರುವ ಭಾರತಮಾತೆಯ ವೀರ ಪುತ್ರರಿಗೆ ಜಯವಾಗಲಿ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಭಾರತೀಯ ಸೈನಿಕರಿಗೆ ಒಳ್ಳೆಯದಾಲೆಂದು ಪ್ರಾರ್ಥಿಸಿ ನಗರದ ಮಾರುಕಟ್ಟೆ ಪ್ರದೇಶದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ದೇಶದ ಸೈನ್ಯಕ್ಕೆ ಫ್ರೀ ಹ್ಯಾಂಡ್ ನೀಡಿದ್ದು ಇತಿಹಾಸದಲ್ಲೇ ಮೊದಲು, ಇದರಿಂದ ಸೈನ್ಯಕ್ಕೆ ವಿಶೇಷವಾದ ಶಕ್ತಿ ತುಂಬಿದಂತಾಗಿದೆ. ದೇಶದ ಅಮಾಯಕ ಪ್ರಜೆಗಳನ್ನು ಹತ್ಯೆ ಮಾಡಿದ ಕ್ರಿಮಿಗಳನ್ನು ನಾಶಮಾಡಲು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿಟ್ಟಕ್ರಮ ಕೈಗೊಂಡಿದೆ. ದೇಶದ ಜನರು ಸೈನಿಕರ ಪರವಾಗಿ ದೇವರಲ್ಲಿ ಪ್ರಾರ್ಥನೆ ಮಾಡಬೇಕು ಎಂದರು.

ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಮಾತನಾಡಿದರು. ದೇಶದ ಸೈನಿಕರು ಜೀವ ಲೆಕ್ಕಿಸದೆ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದು, ಅವರಿಗೆ ದೇವರು ಯಶಸ್ಸು ತಂದು ಕೊಡಲಿ ಎಂದು ಪ್ರಾರ್ಥನೆ ಮಾಡಿದ್ದಾಗಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಾಪಿಗಳಿಗೆ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದರು.

ಗಿರಿಮಲ್ಲಪ್ಪ ಹಂಚನಾಳ, ವಿನಾಯಕ ಪವಾರ, ವಿಶ್ವಾಸ ಪಾಟೀಲ, ಪ್ರಶಾಂತ ಗಾಯಕವಾಡ, ಶಂಕರ ಕಾಳೆ, ಗಣೇಶ ಶಿರಗಣ್ಣವರ, ರಮೇಶ ಆಲಬಾಳ, ಅಶೋಕ ಮಾಲೋಜಿ, ರಾಜು ಚಿಕನಾಳ, ಸಂತೋಷ ಮಾನೆ, ಯಮನೂರ ಮೂಲಂಗಿ, ರಾಯಬಾ ಜಾಧವ, ಮಹಾದೇವ ನ್ಯಾಮಗೌಡ, ಮಲ್ಲು ದಾನಗೌಡ, ವಿನಾಯಕ ಗವಳಿ, ನಾಗರಾಜ ತಂಗಡಗಿ, ರಾಘವೇಂದ್ರ ಮೂಲಂಗಿ, ಹೇಮಂತ ಜಾಧವ, ಪ್ರದೀಪ ಸಿಂಗಾರಿ, ಸುನೀಲ ಭೂವಿ, ಅಜಯ ಕಡಪಟ್ಟಿ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ