ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರ್ಗಿಯಲ್ಲಿ ಬುಧವಾರ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ನಾಶ ಮಾಡುತ್ತಾರೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆಯವರು ನೇತೃತ್ವ ವಹಿಸಿದ ಬಳಿಕ ಕಾಂಗ್ರೆಸ್ ಪಕ್ಷದ ಸ್ಥಿತಿ ಹದಗೆಟ್ಟಿದೆ ಎಂದು ವಿಶ್ಲೇಷಿಸಿದರು. ಬಸವೇಶ್ವರರ ಪುಣ್ಯಭೂಮಿಗೆ ನಾನು ಬರಲು ಸಾಧ್ಯವಾಗಿದೆ, ಅವರಿಗೆ ನನ್ನ ನಮನಗಳು. ಜಗತ್ತಿನಲ್ಲಿ ಪ್ರಜಾಪ್ರಭುತ್ವ ಹುಟ್ಟಿದ್ದು ಈ ಪುಣ್ಯಭೂಮಿಯಲ್ಲಿ. ನಾವೆಲ್ಲರೂ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ನಿರತರಾಗಿದ್ದೇವೆ. ಕಾಂಗ್ರೆಸ್ ಕರ್ನಾಟಕ ಮತ್ತು ದೇಶವನ್ನು ಸರ್ವನಾಶ ಮಾಡಿದ್ದು, ಮಹಾತ್ಮಾ ಗಾಂಧೀಜಿಯವರ ಕಾಂಗ್ರೆಸ್ ಅನ್ನು ಕೊನೆಗಾಣಿಸುವ ಕನಸನ್ನು ಈ ಚುನಾವಣೆಯಲ್ಲಿ ಖರ್ಗೆಯವರ ನೇತೃತ್ವದಲ್ಲಿ ಮಾಡಲಾಗುವುದು ಎಂದು ಜನರು ನಿರ್ಧರಿಸಿದ್ದಾರೆ. ರಾಹುಲ್ ಗಾಂಧಿಯವರು ಕಾಂಗ್ರೆಸ್ ವಿಸರ್ಜನೆ ಮಾಡುತ್ತಾರೆ ಎಂದು ವಿಶ್ವಾಸದಿಂದ ತಿಳಿಸಿದರು.ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಮಹಾತ್ಮ ಗಾಂಧೀಜಿಯವರ ಮಾತನ್ನು ಕೇಳಲಿಲ್ಲ, ಆದರೆ ರಾಹುಲ್ ಗಾಂಧಿಯವರು ಮಹಾತ್ಮ ಗಾಂಧೀಜಿಯವರ ಮಹಾನ್ ಭಕ್ತ, ಅವರು ಕಾಂಗ್ರೆಸ್ ಅನ್ನು ಕೊನೆಗೊಳಿಸುತ್ತಾರೆ ಎಂದು ವಿಶ್ಲೇಷಿಸಿದರು. ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದ ಅವರು, ಬನಾರಸ್‍ನಲ್ಲಿ ಮಕ್ಕಳು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುತ್ತಾರೆ ಎಂಬಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರನ್ನು ಅವಮಾನಿಸುತ್ತಿದ್ದೀರಿ?
ಖರ್ಗೆಯವರ ಶಕ್ತಿಹೀನ ನಾಯಕತ್ವ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಿವರಾಜ್ ಸಿಂಗ್ ಚೌಹಾಣ್, ಇತ್ತೀಚಿನ ದಿನಗಳಲ್ಲಿ ಖರ್ಗೆ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಜನರು ಏಕೆ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದು ಕೇಳುತ್ತಿದ್ದಾರೆ. ಖರ್ಗೆ ಜೀ, ನೀವು ರಾಷ್ಟ್ರೀಯ ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಹಾಗಾಗಿಯೇ ದಿನವೂ ಯಾರೋ ಒಬ್ಬರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಿಮ್ಮ ನಾಯಕತ್ವದಲ್ಲಿ ಶಕ್ತಿ ಇಲ್ಲ, ಜನರ ಆಶಾಭಾವನೆಗೆ ಧಕ್ಕೆಯಾಗಿದೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯಂತಹ ನಾಯಕರು ಮಾತ್ರ ಕಾಂಗ್ರೆಸ್‍ನಲ್ಲಿ ಉಳಿಯುತ್ತಾರೆ ಹೊರತು ಬೇರೆ ಯಾರೂ ಉಳಿಯುವುದಿಲ್ಲ. ಕಾಂಗ್ರೆಸ್ ಹಾಳು ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದ ಅವರು, ಈಗ ಕಾಂಗ್ರೆಸ್ ಅಂತ್ಯ ಕಾಣುತ್ತಿದೆ ಎಂದು ತಿಳಿಸಿದರು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400 ದಾಟುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ. ಬಿಜೆಪಿ ಏಕಾಂಗಿಯಾಗಿ 370 ಮತ್ತು ಎನ್‍ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಮೋದಿಯವರನ್ನು ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿ ಮಾಡಬೇಕು. ಕರ್ನಾಟಕದಲ್ಲಿ ಈ ಬಾರಿ 28 ಲೋಕಸಭಾ ಸ್ಥಾನಗಳ ಪೈಕಿ 28 ಸ್ಥಾನ ಗೆಲ್ಲಬೇಕಿದೆ ಎಂದರು.
ಮೋದಿಯವರ ನೇತೃತ್ವದಲ್ಲಿ ನವ ಭಾರತ ನಿರ್ಮಾಣ: ಮೋದಿಯವರ ನೇತೃತ್ವದಲ್ಲಿ ನವ ಭಾರತ ನಿರ್ಮಾಣವಾಗುತ್ತಿದೆ, ಆದರೆ ಕಾಂಗ್ರೆಸ್ ದೇಶವನ್ನು ಎಲ್ಲಿಗೆ ಕೊಂಡೊಯ್ದಿದೆ ನೋಡಿ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು. ಭಾರತವನ್ನು ಹಗರಣಗಳ ದೇಶ ಎಂದು ಕರೆಯಲಾಗುತ್ತಿತ್ತು, ಯಾರೂ ಹೂಡಿಕೆಗೆ ಬರಲು ಸಿದ್ಧರಿರಲಿಲ್ಲ. 2ಜಿ ಹಗರಣ, 4ಜಿ ಹಗರಣ, ಸೋದರ ಮಾವ ಹಗರಣ ಹೀಗೆ ಎಷ್ಟು ಹಗರಣಗಳು ನಡೆದಿವೆಯೋ ಗೊತ್ತಿಲ್ಲ, ಮೋದಿಜಿ ಭಾರತದ ಪ್ರಧಾನಿಯಾದ ಮೇಲೆ ನಾನು ತಿನ್ನುವುದಿಲ್ಲ, ಯಾರಿಗೂ ತಿನ್ನಲು ಬಿಡುವುದಿಲ್ಲ ಎಂದರು. ಮೊದಲು ಸಣ್ಣ ದೇಶಗಳು ನಮ್ಮನ್ನು ಹೆದರಿಸುತ್ತಿದ್ದವು, ಆದರೆ ಈಗ ಚೀನಾ ಸೈನಿಕರು ನಮ್ಮ ಗಡಿಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, ಭಾರತೀಯ ಸೇನೆ ಅವರನ್ನು ಓಡಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.
ಶಿವರಾಜ್ ಸಿಂಗ್ ಚೌಹಾಣ್ ಅವರು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರಲ್ಲದೆ, ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು. ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಗೋಡೆ ಬರಹ ಬರೆದರು. ಪ್ರತಿದಿನ ಸಸಿ ನೆಡುವ ಪ್ರತಿಜ್ಞೆಯ ಭಾಗವಾಗಿ ಸಸಿಗಳನ್ನು ನೆಟ್ಟರು.