ಕನ್ನಡಪ್ರಭ ವಾರ್ತೆ ಹುಣಸಗಿ
ಈ ವೇಳೆ ಬಿಜೆಪಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಯತ್ನಾಳ, ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಆಡಳಿತದಿಂದ ಇಂದು ವಿಶ್ವದಲ್ಲಿ ಭಾರತ ಮಿಂಚುವಂತಾಗಿದೆ. ವಿಶ್ವದ ಯಾವುದೆ ದೇಶಕ್ಕೆ ಸಂಕಷ್ಟ ಎದುರಾದಾಗ, ನಾಯಕತ್ವ ವಹಿಸಿ ಸಮಸ್ಯೆ ಪರಿಹರಿಸಿದ ವಿಶ್ವ ನಾಯಕ ಮೋದಿ. ದೇಶದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಕೊರೋನಾ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ನೀಡಿ ಪ್ರಾಣ ರಕ್ಷಣೆ ಮಾಡಿದ್ದು, ದೊಡ್ಡ ಸಾಧನೆ ಎಂದು ಹೇಳಿದರು.
ಜಮ್ಮು - ಕಾಶ್ಮೀರಕ್ಕೆ ಸಂಬಂಧಿಸಿದ ಕಲಂ 370 ರದ್ದುಗೊಳಿಸಿರುವುದು ಹಾಗೂ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಕೋಟ್ಯಂತರ ಹಿಂದೂಗಳ ಕನಸು ಸಾಕಾರಗೊಳಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಮೋದಿ ಅವರಿಗೆ ಶಕ್ತಿ ತುಂಬುವ ಸದಾವಾಕಾಶ ಈ ಚುನಾವಣೆಯ ಮೂಲಕ ಒದಗಿ ಬಂದಿದೆ ಎಂದರು.ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಕ್ಷೇತ್ರದಲ್ಲಿ ರೈಲ್ವೆ ಯೋಜನೆ, ಗ್ರೀನ್ ಕಾರಿಡಾರ್, ಹರ ಘರ್ ಜಲ್ ಸೇರಿ ಹಲವು ಮಹತ್ವದ ಯೋಜನೆಗಳ ಮೂಲಕ ಸಾವಿರಾರು ಕೋಟಿ ಅನುದಾನ ತರಲಾಗಿದೆ. ಆದ್ದರಿಂದ ಮೋದಿ ಕನಸಿನ ಭಾರತದತ್ತ ಹೆಜ್ಜೆಹಾಕಲು ಎಲ್ಲರೂ ಅತಿ ಹೆಚ್ಚು ಮತಗಳನ್ನು ನೀಡುವಂತೆ ಮನವಿ ಮಾಡಿದರು.
ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜೂಗೌಡ ಮಾತನಾಡಿ, ಸುರಪುರ ಪಟ್ಟಣಕ್ಕೆ ದಶಕಗಳಿಂದ ಇರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಿ, ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಕೋರಿದರು.ಈ ವೇಳೆ ಹುಣಸಗಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸನಗೌಡ ಯಡಿಯಾಪುರ, ಸುರೇಶ ಸಜ್ಜನ್, ಯಲ್ಲಪ್ಪ ಕುರಕುಂದಿ, ಗದ್ದೆಪ್ಪ ಪೂಜಾರಿ, ವಿರೇಶ ಸಾಹು ಚಿಂಚೋಳಿ, ಮಣಿಕಂಠನಾಯಕ ಸೇರಿದಂತೆ ಇತರರಿದ್ದರು.