ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿ.ವಿ.ವಿ.ಸಂಘದ ನೂತನ ಸಭಾಭವನದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬಾಗಲಕೊಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪ್ರಧಾನಿ ನರೇಂದ್ರ ಮೋದಿಯವರ 75ನೇ ವರ್ಷದ ಹುಟ್ಟುಹಬ್ಬ ನಿಮಿತ್ತ ಭಾರತ ದರ್ಶನ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಬೌದ್ಧಿಕ ಪ್ರಮುಖರಾಗಿ ಭಾರತ ದರ್ಶನದ ಬಗ್ಗೆ ಮಾತನಾಡಿದರು.
ಶಿಕ್ಷಣ ಪಡೆದ ನಂತರ ತಂದೆ-ತಾಯಿ ಖುಷಿ ಪಡಿಸುವುದೇ ಶಿಕ್ಷಣದ ಮೊದಲ ಹೆಜ್ಜೆಯಾಗಿದೆ. ರಾಮಾಯಣ ಕಾಲದಲ್ಲಿ ಇಡೀ ಜಗತ್ತಿನ ನದಿ ಪರ್ವತಗಳು ಸಂಸ್ಕೃತ ಹೆಸರಿನಿಂದ ಕರೆಯಲ್ಪಡುತ್ತಿದ್ದವು. ರಾಮಾಯಣ ಕಾಲದಿಂದಲೂ ಭಾರತ ಜಗತ್ತನ್ನು ಸಾಂಸ್ಕೃತಿಕವಾಗಿ ಆಳುತ್ತಿತ್ತು. ವಿದೇಶಗಳಿಲ್ಲರದ ಎಲ್ಲ ನೈಸರ್ಗಿಕ, ಪ್ರಾಕೃತಿಕ ಸಂಪತ್ತು ಭಾರತದಲ್ಲಿದೆ. ಭಾರತ ಜಗತ್ತಿಗೆ ಸೊನ್ನೆ ನೀಡಿದೆ. ಸೊನ್ನೆಯ ಇನ್ನೊಂದು ಹೆಸರೇ ಪೂಜ್ಯ ಎಂದು, ಸೊನ್ನೆಯಿಲ್ಲದೆ ಹೋದರೆ ಗಣಿತಶಾಸ್ತ್ರಕ್ಕೆ ಅರ್ಥವೇ ಇರಲ್ಲ ಎನ್ನುವ ಸತ್ಯ ಎಲ್ಲರಿಗೆ ಗೊತ್ತಿದೆ. ಮಹಾಭಾರತದಲ್ಲಿ ಜಗತ್ತಿನ ಎಲ್ಲ ಸಂಗತಿಗಳು ಇವೆ. ಇಂದು ಭಾರತ ಮತ್ತೆ ವಿಶ್ವಗುರುವಾಗಲು ವಿದ್ಯಾರ್ಥಿಗಳು ದೇಶದೊಂದಿಗೆ ಅನುಸಂಧಾನ ಮಾಡಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು. ಮತ್ತೆ ಜಗತ್ತಿನ ಜಗಜ್ಜನನಿಯಾಗಲಿ ಎಂದು ಹೇಳಿದರು.ಅರಿಸಿಕೇರಿ ಸ್ವದೇಶ ದಿಶಾದ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಪಿ. ಗುರಲಿಂಗಯ್ಯ ಅವರು ಆರೋಗ್ಯ ಅರಿವು ಕುರಿತು ಮಾತನಾಡಿ, ಆರೋಗ್ಯವಂತ ವ್ಯಕ್ತಿ ಮಾತ್ರ ಏನಾದರೂ ಸಾಧಿಸಬಲ್ಲ. ಮುಂಚೆ ಆರೋಗ್ಯವಂತ ಸಮಾಜ ನಮ್ಮದಾಗಿತ್ತು. ನಮ್ಮ ಪಾರಂಪರಿಕ ಆರೋಗ್ಯ ಪದ್ಧತಿ ಹಾಗೂ ಮನೆ ಅಡುಗೆಯಲ್ಲಿನ ಆರೋಗ್ಯದ ಅರಿವು ಇಂದಿನ ಪೀಳಿಗೆಗೆ ಅಗತ್ಯವಾಗಿದೆ. ಮನೆಯಲ್ಲಿ ಅಡುಗೆಗೆ ಬಳಸುವ ಎಣ್ಣೆಯ ಶುದ್ಧತೆ ಪರೀಕ್ಷಿಸಬೇಕು. ಭಾರತದ ಅಹಾರ ಪದ್ಧತಿ ಜಗತ್ತಿನಲ್ಲಿಯೇ ಶ್ರೇಷ್ಠ ಅಹಾರ ಪದ್ಧತಿಯಾಗಿದೆ. ನಮ್ಮ ಅಡುಗೆ ಮನೆ ಕೇವಲ ಅಹಾರ ಉತ್ಪಾದನೆ ಮಾಡುವುದಲ್ಲದೆ, ನಮ್ಮ ವಂಶ ಉದ್ಧಾರ ಮಾಡುವುದುದಾಗಿದೆ. ಭಾರತದ ಯುವ ಜನತೆ ಸೋಸಿಯಲ್ ಮಿಡಿಯಾ ಮೂಲಕ ಶಕ್ತಿಹೀನರನ್ನಾಗಿ ಮಾಡುವ ಜಾಲದ ಬಗ್ಗೆ ಯುವ ಪೀಳಿಗೆ ಜಾಗೃತಗೊಳ್ಳಬೇಕು. ಭಾರತದ ಪ್ರತಿ ಯುವಕ ಯುವತಿಯರಲ್ಲಿ ಅದ್ಭುತ ಚೈತನ್ಯ ಅಡಗಿದೆ ಅದು ದೇಶಕ್ಕೆ ಉಪಯೋಗವಾಗಲಿ ಎಂದರು.